ಭಗವಾನ್ ಬುದ್ಧರ ಜನ್ಮದಿನ - ಬುದ್ಧ ಪೂರ್ಣಿಮೆ ಕಾರ್ಯಕ್ರಮ ಆಚರಣೆ

ಭಗವಾನ್ ಬುದ್ಧರ ಜನ್ಮದಿನ - ಬುದ್ಧ ಪೂರ್ಣಿಮೆ ಕಾರ್ಯಕ್ರಮ ಆಚರಣೆ
ಕಲಬುರಗಿ, ಮೇ 12: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಇಂದು ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಏಷ್ಯಾದ ಬೆಳಕು ಭಗವಾನ್ ಬುದ್ಧರ ಜನ್ಮದಿನವಾದ ಬುದ್ಧ ಪೂರ್ಣಿಮೆಯನ್ನು ಭಕ್ತಿಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಲಯದ ಮೇಲ್ವಿಚಾರಕರಾದ ಶ್ರೀ ಲಕ್ಷ್ಮೀಕಾಂತ್ ಸರ್, ನಿಲಯದ ಅಧ್ಯಕ್ಷ ರಾಚಯ್ಯಸ್ವಾಮಿ ಹಿರೇಮಠ ಮತ್ತು ಉಪಾಧ್ಯಕ್ಷ ಶಾಂತಕುಮಾರ್ ಉಪಸ್ಥಿತರಿದ್ದರು. ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಭಗವಾನ್ ಬುದ್ಧರ ಜೀವನವೊಂದರ ಶಾಂತಿ, ಅಹಿಂಸೆ ಮತ್ತು ಧರ್ಮದ ಮೌಲ್ಯಗಳನ್ನು ವಿದ್ಯಾರ್ಥಿಗಳು ಸ್ಮರಿಸಿದರು. ಕಾರ್ಯಕ್ರಮದ ಬಳಿಕ ವಿದ್ವತ್ತುಪೂರ್ಣ ಚರ್ಚೆ, ಭಾವಪೂರ್ಣ ಭಾವಗೀತೆಗಳು ಹಾಗೂ ಶಾಂತಿಯ ಸಂದೇಶ ಪ್ರಸರಿಸಲಾಯಿತು.