ಕನ್ನಡದ ಕಾಯಕ ನಿತ್ಯ ದೀಕ್ಷೆಯಾಗಲಿ: ಡಾ.ಸದಾನಂದ ಪೆರ್ಲ

ಕನ್ನಡದ ಕಾಯಕ  ನಿತ್ಯ ದೀಕ್ಷೆಯಾಗಲಿ: ಡಾ.ಸದಾನಂದ ಪೆರ್ಲ

ಕನ್ನಡದ ಕಾಯಕ ನಿತ್ಯ ದೀಕ್ಷೆಯಾಗಲಿ: ಡಾ.ಸದಾನಂದ ಪೆರ್ಲ

ಕಲಬುರಗಿ:  ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕುವೆಂಪು ವಾಣಿಯು ನಮಗೆಲ್ಲ ದೀಕ್ಷಾ ನುಡಿಯಾಗಬೇಕು ಎಂದು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಹೇಳಿದರು.

ಸಿರಿಗನ್ನಡ ವೇದಿಕೆ ಕಲಬುರಗಿ ವತಿಯಿಂದ ನವಂಬರ್ 30ರಂದು ಕಲ್ಬುರ್ಗಿಯ ರಂಗಾಯಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ವಿಶೇಷ ಉಪನ್ಯಾಸ ಪುಸ್ತಕ ಬಿಡುಗಡೆ ಕವಿಗೋಷ್ಠಿ,ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಾ ಕನ್ನಡಕ್ಕಾಗಿ ಕೈ ಎತ್ತಿ ಎಂದರೆ ಕನ್ನಡದ ಕೆಲಸ ಬಂದಾಗ ಕೈ ಎತ್ತಿ ದೂರ ನಿಲ್ಲುವ ನಿಲಳ್ಳುವ ಇಂದಿನ ದಿನಗಳಲ್ಲಿ ನಾವು ನಮ್ಮ ಭಾಷೆ ಸಂಸ್ಕೃತಿ ಉಳಿಸುವುದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ. ನವೆಂಬರ್ ದಲ್ಲಿ ಮಾತ್ರ ಕನ್ನಡದ ನೆನಪಾಗುವುದ ಬಿಟ್ಟು ಕನ್ನಡದ ಕಾಯಕ ನಿತ್ಯ ನೂತನವಾಗಿ ನಡೆಯಲಿ ಎಂದು ಆಶಿಸಿದರು. ಸಿರಿಗನ್ನಡ ವೇದಿಕೆಯ ಕೆಲಸ ಮಾದರಿಯಾಗಲಿ ಎಂದರು.

ಕರ್ನಾಟಕದ ಮುಕುಟ ಕಲಬುರಗಿ ಪ್ರದೇ ಶವಾಗಿದೆ. ಕನ್ನಡದ ಕೆಲಸವೆಂದರೆ ಅದು ತಾಯಿಯ ಸೇವೆ. ಕಲ್ಯಾಣ ಕರ್ನಾಟಕ ಭಾಗದ ಕನ್ನಡಿಗರಾದ ನಾವು ದೊಡ್ಡ ಪರಂಪರೆಯಲ್ಲಿ ಬದುಕುತ್ತಿದ್ದೇವೆ. ನಮ್ಮನ್ನು ನಾವು ಹೇಳಿಕೊಳ್ಳುವ ಕೆಲಸ ಮಾಡಬೇಕು. ಮಾತೃಭಾಷೆಯ ಅಂಕಿ ಸಂಖ್ಯೆಯನ್ನು ಬಳಸುವ ಕಾರ್ಯ ಆಗಬೇಕು.ಹಿರಿಯರನ್ನು ಗೌರವಿಸುವ ಕೆಲಸ ನಡೆಯಬೇಕು. ಲೇಖಕರು ಪ್ರಶಸ್ತಿಗೆ ಸೀಮಿತರಾಗುವುದು ಬೇಡ. ಸಂವಿಧಾನದ ಹಕ್ಕು ಪಡೆದವರು ಸಂವಿಧಾನ ಗೌರವಿಸುವ ಕೆಲಸ ಮಾಡಿ ಎಲ್ಲರೂ ಮಾತನಾಡಬೇಕು.

ಬರಹ ಚನ್ನಾಗಿಲ್ಲದಿ ದ್ದರೆ ಯಾವ ಕಾಲಕ್ಕೂ ಅದು ನಿಲ್ಲುವು ದಿಲ್ಲವೆಂದರು. ಹೊಸದಾಗಿ ಬರೆಯುವ,ಮಾರ್ಗದರ್ಶನ ಅವಶ್ಯವೆಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆ ಅಭಿಮತ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಮಾಡಿದ ಬೆಂಗಳೂರು ಸಾಹಿತಿ ಈರಪ್ಪ ಕಂಬಳಿ ಅವರು ತಮ್ಮ ಸಾಹಿತ್ಯ ಒಡನಾಟದಿಂದ ಸಾಹಿತಿಯಾಗಿ ಬೆಳೆಯಲು ಮತ್ತು ಸಾಹಿತ್ಯ ವಾತಾವರಣವನ್ನು ಸೃಷ್ಟಿಸಲು ಸಹಕಾರಿಯಾಡಬಗ್ಗೆ ಮಾತನಾಡಿದರು. ಮುಖ್ಯ ಅತಿಥಿ ಡಾ.ಅಲ್ಲಮಪ್ರಭು ದೇಶಮುಖರು ಸಿರಿಗನ್ನಡ ವೇದಿಕೆ ಕನ್ನಡ ಕಟ್ಟುವ ಕಾಯಕದಲ್ಲಿ ನಿರತವಾಗಿ ಅಹರ್ನಿಶಿ ದುಡಿಯುವ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು. ಪುಸ್ತಕೋದ್ಯಮಿ ಬಸವರಾಜ ಕೊನೇಕ್, ಸಾಹಿತಿ ಶೋಭಾದೇವಿ ಚಕ್ಕಿ,ಸುರೇಶ ಕಾನೇಕರ ಮಾತನಾಡಿದ ರು.ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದರು. ಸಾನಿಧ್ಯವನ್ನು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಸಾಹಿತ್ಯಶ್ರೀ ಪುರಸ್ಕೃತ ಡಾ.ಸಾರಿಕಾದೇವಿ ಕಾಳಗಿ,ಡಾ.ಶೀಲಾದೇವಿ ಬಿರಾದಾರ ಡಾ.ರಾಜಕುಮಾರ ಮಾಳಗೆ ಅವರಿಗೆ ಸನ್ಮಾನಿಸಲಾಯಿತು., ಡಾ.ಕೆ.ಎಸ್. ಬಂಧು,ಶಾಂತಾ ಪಸ್ತಾಪೂರ ವೇದಿಕೆ ಮೇಲಿದ್ದರು.ನಾಡಗೀತೆ, ಸ್ವಾಗತ ವನ್ನು ಸಿದ್ದರಾಮ ಸರಸಂಬಿ ಕೋರಿದರು.ಡಾ.ರಾಜಕು ಮಾರ ನಿರೂಪಿಸಿದರು.ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು.

ಕವಿ ಗೋಷ್ಠಿಯಲ್ಲಿ ಡಾ.ನಾಗಪ್ಪ ಗೋಗಿ,ಡಾ.ಕಪಿಲದೇ ವ ಚಕ್ರವರ್ತಿ, ರೇಣುಕಾವೆಸ್.ಎಚ್.ಕು.ಭಾಗ್ಯಮ್ಮ ತಂಬಾಕೆ,

ಸಿರಿಗನ್ನಡ ಸಿರಿ ಪ್ರಶಸ್ತಿ ಪುರಸ್ಕೃತರು

ಡಾ.ಬಸವರಾಜ ಚಿಂಚೋಳಿ,ಬಾಬುರಾವ್ ಜಮಾದಾ ರ,ವೀರಭದ್ರಪ್ಪ ಮರಡಿ,ಡಾ.ಸುರೇಂದ್ರ ಕುಮಾರ ಕೆರ ಮಗಿ,ಶ್ರೀಮತಿಬಸಣ್ಣ ಕಾಗೆ,ದಶರಥ ಚಂದ್ರಶಾ ಗೋಳಸಾರ,ಡಾ.ಶರಣಪ್ಪ ಸೈದಾಪೂರ,ಸುಜಾತ ಚುನ್ನಾ ಆಶಪ್ಪ,ಶರಣಯ್ಯಸ್ವಾಮಿ ಅಲ್ಲಾಪೂರ,ಸುರೇ ಬಡಿಗೇರ,ಶಿವಶಂಕರ ಕೋರಿ,ಅಕ್ಷಯಬಾಯಿ ಕಾಂಬಳೆ

ಡಾ.ಸರಿತಾ ಹಿಪ್ಪರಗಿ,ಡಾ.ಲೋಕೇಶ ಶ್ರೀಚಂದ,ಗುರುರಾಜ ಜೋಶಿ,ಮಹಾದೇವ ಕಾಂಬಳೆ,ಡಾ.ಚಿದಾನಂದ ಕುಡ್ಡನ್ನ,ಹುಯೋಗಿ ತಳ್ಳಳ್ಳಿ, ಡಾ ಸುಜಾತ ಭಾಸ್ಕರ್,ಪ್ರವೀಣ ಮೊದಲೆ, ಜೀತೇಂದ್ರ ಧನ್ಬಿ,ಡಾ.ಯುವರಾಜ ಹಳೇಮನಿ,ಸಂತೋಷಕುಮಾರ ಕರಹರಿ,ನಾರಾಯಣ ಕುಲಜರ್ಣಿ,ಸೌಭಾಗ್ಯ ಲಕ್ಷ್ಮಿ ಹೊಸಮನಿ,ಡಾ.ಆಂಜನೇಯ,ಸಿ.ಎಸ್.ಮಾಲಿಪಾಟೀ ಲ,ಡಾ.ಮಮ್ಮಾದೇವಿ ಬಿ.ಎಸ್.ಗಿರಿಮಲ್ಲಪ್ಪ ವಳಸಂಗಿ, ಡಾ.ಸಂಗಣ್ಣ ಸಿಂಗೆ,ಡಾ.ಸದಾಶಿವ ಹರವಾಳ, ಶೇಖಪ್ಪ ಪವಾರ,ಡಾ.ಚಂದ್ರಶೇಖರ ಹೊಸಮನಿ,ಡಾ.ತೀರ್ಥ ಕುಮಾರ ಕಮಲಾಪುರ,ಹಿರಗಪ್ಪ,ಡಾ.ಅರುಣಾ ಟೆಂಗಳಿ,ಶರಣಬಸಪ್ಪ ಹೊಸಮನಿ,ಡಾ.ದತ್ತುರಾಯ ಶಿವರಾಜ,ಡಾ.ಸುಖದೇವಿ ಘಂಟಿ,ದೇವೇಂದ್ರ ಕಟ್ಟಿಮ ನಿ,ಸುನೀಲ ಕಾನೆ,ಮಲ್ಲಿಕಾರ್ಜುನ ಶೃಂಗೇರಿ,ಶಾಂತಪ್ಪ ಮಾದರ,ಸುಭಾಷ ಜೆಸ್ಮಾಂ,ಡಾ.ವೀಣಾ ಪೋದ್ದಾರೆ , ಶ್ರೀಮತಿ ಶುಭಾಂಗಿ ಐವಳೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.