ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಂಪುಟದ ನಿರ್ಣಯಗಳು ತಕ್ಷಣ ಜಾರಿಯಾಗಲಿ: ಡಾ. ಸುಧಾ ಆರ್ ಹಾಲಕಾಯಿ
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಂಪುಟದ ನಿರ್ಣಯಗಳು ತಕ್ಷಣ ಜಾರಿಯಾಗಲಿ: ಡಾ. ಸುಧಾ ಆರ್ ಹಾಲಕಾಯಿ
ಕಲಬುರಗಿ: ಕಳೆದ ತಿಂಗಳು ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟದ ಸಭೆ ನಡೆದಿದ್ದು, ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ವಿಕಾಸಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ದೊಡ್ಡ ರೀತಿಯಲ್ಲಿ ಬಹಿರಂಗಪಡಿಸಿದರು. ಎಂದು ಭಾರತೀಯ ಜನತಾ ಪಕ್ಷ ವೈದ್ಯಕೀಯ ಪ್ರಕೋಷ್ಠ ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಡಾ. ಸುಧಾ ಆರ್ ಹಾಲಕಾಯಿ ಹೇಳಿದರು.
ಕಲ್ಯಾಣ ಕರ್ನಾಟಕದ ಆಗುವಂತೆ ೩೭೧ ಜೆ ತಿದ್ದುಪಡಿ ತಂದ ಮೇಲೂ ಇಡೀ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿರುವುದು ಎದ್ದು ಕಾಣುತ್ತದೆ. ನಂಜುAಡಪ್ಪ ವರದಿಯಲ್ಲೂ ಇದು ಉಲ್ಲೇಖವಾಗಿದೆ. ಎಲ್ಲಾ ಆಯಾಮಗಳನ್ನು ನೋಡಿದ್ರು ಕೂಡ, ಈ ಕಲ್ಯಾಣ ಕರ್ನಾಟಕವನ್ನು ತಾತ್ಸಾರ ಮನೋಭಾವದಿಂದ ನೋಡಲಾಗುತ್ತಿದೆ.
ಆಡಳಿತದ ಮಿಕ್ಕೆಲ್ಲ ಭಾಗಗಳು ಬೆಳವಣಿಗೆ- ಅಭಿವೃದ್ಧಿ ಆಗಿದ್ದರೆ, ಈ ಭಾಗ ಮಾತ್ರ ಹಿಂದುಳಿದಿರುವುದು ಎದ್ದು ಕಾಣುತ್ತದೆ. ಈ ಎಲ್ಲ ಕಾರಣಕ್ಕೆ ಆ ಭಾಗದ ಬಹುವರ್ಷಗಳ ಕಾಲ ರಾಜಕೀಯ ಪ್ರಾತಿನಿಧ್ಯ ವಹಿಸಿದವರ ನಿರಾಸಕ್ತಿ ಮತ್ತು ಅವರ ದೂರದೃಷ್ಟಿಯ ಕೊರತೆ, ಉದಾಸೀನ ಮನೋಭಾವದಿಂದ ಇಡೀ ಕಲ್ಯಾಣ ಕರ್ನಾಟಕ ಹಿಂದುಳಿದಿರುವುದು ಕಾಣುತ್ತದೆ. ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಹೆಸರು ಗಳಿಸಿದರೂ ಕೂಡ, ತಮ್ಮ ಸ್ವಕ್ಷೇತ್ರವಾದ ಈ ಕಲ್ಯಾಣ ಕರ್ನಾಟಕ ಇಷ್ಟು ದಯನೀಯ ಸ್ಥಿತಿಯಲ್ಲಿ ಇದೆ. ಶಿಕ್ಷಣದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ, ಮಹಿಳಾ ಸಬಲೀಕರಣ, ಪೌಷ್ಟಿಕಾಂಶ, ಉದ್ಯೋಗ ಸೃಷ್ಟಿ ವಿಚಾರದಲ್ಲಿ ಇರಬಹುದು. ಕೈಗಾರಿಕೆಗಳ ಸ್ಥಾಪನೆ- ಯಾವುದರಲ್ಲೂ ಕೂಡ ಯಶಸ್ಸನ್ನು ಸಾಧಿಸಿಲ್ಲ.
ಈ ಸಂಪುಟ ಸಭೆಯಲ್ಲಿ ನಾವು ನಿರೀಕ್ಷೆ ಮಾಡಿದ ಕಲ್ಯಾಣ ಕರ್ನಾಟಕ್ಕಕೆ ಸಂಬAಧಿಸಿದ ಪ್ರತ್ಯೇಕ ಸಚಿವಾಲು, ಖಾಲಿ ಹುದ್ದೆಗಳ ಭರ್ತಿ ಮತ್ತು ಪ್ರತ್ಯೇಕ ಕೈಗಾರಿಕಾ ನೀತಿ, ಶಿಕ್ಷಣ ಅತ್ಯಂತ ಹಿಂದುಳಿದಿದೆ. ಶಿಕ್ಷಣಕ್ಕೆ ಒಂದು ಕಾಯಕಲ್ಪ ಅತೀ ಅಗತ್ಯ. ಸಂಪುಟ ಸಭೆ ನಡೆದು ಒಂದೂವರೆ ತಿಂಗಳು ಕಳೆದರೂ, ಈ ಸರಕಾರ ಮತ್ತೆ ನಿದ್ರೆಗೆ ಜಾರಿದೆ. ಬರೀ ಸರಕಾರಕ್ಕಾಗಿ ಸಂಪುಟ ಸಭೆ ಎನ್ನುವಂತೆ ಆಗಿದೆ.
ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಚರ್ಚೆ ಮತ್ತು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಇವತ್ತು ಬೆಳವಣಿಗೆಯೇ ಇಲ್ಲದ ಪ್ರದೇಶವಾಗಿ ಕಲ್ಯಾಣ ಕರ್ನಾಟಕ ಆಗಿಹೋಗಿದೆ.
ಇಷ್ಟೆಲ್ಲ ಸಂಪನ್ಮೂಲಗಳಿವೆ ಇಷ್ಟೆಲ್ಲ ಕೃಷಿ ಉತ್ಪನ್ನಗಳಿದ್ದರೂ ನಾವು ಹಿಂದೆ ಬಿದ್ದಿರುವುದು ನಿಜಕ್ಕೂ ಶೋಚನೀಯ. ಕೆಕೆಆ???ಡಿ ಮುಖಾಂತರ, ಮತ್ತೊಂದು ಸಚಿವಾಲಯದ ಮುಖಾಂತರ, ಉದ್ಯೋಗ ಸೃಷ್ಟಿಗೆ ತೀವ್ರವಾದ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ದೇಶದ ಎಲ್ಲ ಆಗುಹೋಗಗಳಿಗೆ ಪ್ರತಿಕ್ರಿಯೆ ಕೊಡುವುದೇ ಸಚಿವರ ಕಾರ್ಯವಲ್ಲ. ಅದು ಹೊರತುಪಡಿಸಿ ಒಂದು ಭಾಗದ ಸಮಗ್ರ ವಿಕಾಸಕ್ಕೆ ಅವಕಾಶ ಮಾಡಿಕೊಡುವಂತಹ ಒಂದು ದೃಢ ರಾಜಕೀಯ ನಿಲುವು, ನಿರ್ಧಾರ, ಮುತ್ಸದ್ದಿತನವನ್ನು ಮೆರೆಯುವುದು ಇವತ್ತಿನ ಸಂದರ್ಭದಲ್ಲಿ ಅವಶ್ಯಕ. ತಕ್ಷಣದಲ್ಲೇ ಆ ಕಾರ್ಯವನ್ನು ಈ ಸರಕಾರ ಮಾಡಬೇಕು. ಈಗಾಗಲೇ ಈ ಕಾಂಗ್ರೆಸ್ ಅನ್ನು ಜನ ತಿರಸ್ಕರಿಸಿರುವುದು ಬೇರೆ ಬೇರೆ ರಾಜ್ಯದ ಚುನಾವಣೆಗಳಲ್ಲಿ ವ್ಯಕ್ತವಾಗಿದೆ. ಅದೇ ರೀತಿ ಕರ್ನಾಟಕದ ಈ ಅಸಮರ್ಥ ಸರಕಾರದ ವಿರುದ್ಧ ಜನ ಬಂಡೇಳುವ ದಿನ ಹತ್ತಿರದಲ್ಲೇ ಇದೆ. ಹಾಗಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಪುಟದಲ್ಲಿ ಕೈಗೊಂಡ ತೀರ್ಮಾನಗಳು ತಕ್ಷಣದಲ್ಲಿ ಜಾರಿಯಾಗಬೇಕು ಎಂದು ಡಾ. ಸುಧಾ ಆರ್ ಹಾಲಕಾಯಿ ಅವರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ
.