ಖ್ಯಾತ ವಿದ್ವಾಂಸ ,ಶೈಕ್ಷಣಿಕ ಕ್ರಾಂತಿಯ ಡಾ ಸೈಯದ್ ಶಾಹ್ ಖುಸ್ರೋ ಹುಸೈನಿ ಅವರ ನಿಧನಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸಂತಾಪ
ಖ್ಯಾತ ವಿದ್ವಾಂಸ ,ಶೈಕ್ಷಣಿಕ ಕ್ರಾಂತಿಯ ಡಾ ಸೈಯದ್ ಶಾಹ್ ಖುಸ್ರೋ ಹುಸೈನಿ ಅವರ ನಿಧನಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸಂತಾಪ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಿತಕ್ಕಾಗಿ 1958 ರಲ್ಲಿ ಖಾಜಾ ಎಜುಕೇಶನ್ ಸೋಸೈಟಿ ಎಂಬ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿರುವ 24 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಗುಲ್ಬರ್ಗಾದಲ್ಲಿ ಈ ಅಲ್ಪಸಂಖ್ಯಾತರ ಸಮಾಜದಿಂದ ನಿರ್ವಹಿಸಲ್ಪಡುತ್ತವೆ. ಖಾಜಾ ಎಜುಕೇಶನ್ ಸೋಸೈಟಿ ಆರಂಭದಲ್ಲಿ ಮುಸ್ಲಿಂ ಸಮುದಾಯದ ಆಶಯಗಳನ್ನು ಮತ್ತು ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ರಚಿಸಲಾಯಿತು. ಆದರೆ ಈಗ ಸಂಸ್ಥೆ ಜಾತಿ,ಮತ, ಧರ್ಮ ಭೇದವಿಲ್ಲದೆ ಎಲ್ಲರ ಉನ್ನತಿಗಾಗಿ ಶ್ರಮಿಸುತ್ತಿದೆ.
ಇಂತಹ ಶಿಕ್ಷಣ ಸಂಸ್ಥೆಯನ್ನು ಉತ್ತುಂಗ ಮಟ್ಟಕ್ಕೆ ಏರಿಸಿದವರು ಸೈಯದ್ ಶಾಹ್ ಖುಸ್ರೋ ಹುಸೈನಿಯವರು ಅವರನ್ನು ನಾವಿಂದು ಕಳೆದುಕೊಂಡಿರುವದು ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಖಾಜಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಾ. ಖುಸ್ರೋ ಹುಸೇನಿ ಅವರ ದೂರದೃಷ್ಟಿಯು "ಖಾಜಾ ಬಂದನವಾಜ್ ವಿಶ್ವವಿದ್ಯಾಲಯ (ಕೆಬಿಎನ್ಯು)" ಎಂಬ ಹೆಸರಿನ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಖಾಜಾ ಎಜುಕೇಶನ್ ಸೊಸೈಟಿಯಿಂದ ನಡೆಸಲ್ಪಡುವ ಮತ್ತು ನಿರ್ವಹಿಸುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತನ್ನ ವ್ಯಾಪ್ತಿಯಲ್ಲಿ ತರುತ್ತದೆ. ಅವರ ಪ್ರಯತ್ನವೇ ಈಗ ಈ ಸಂಸ್ಥೆಗಳನ್ನು ಇಂದಿನ ಮಟ್ಟಕ್ಕೆ ತಂದಿದೆ.
ವೈದ್ಯಕೀಯ, ಎಂಜಿನಿಯರಿಂಗ್, ಬಿ.ಇಡಿ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದರು.
ಮುಸ್ಲಿಂ ಮಹಿಳೆಯರ ಶಿಕ್ಷಣ ಗಗನಕುಸುಮ ವಾಗಿರುವ ಸಂದರ್ಭದಲ್ಲಿ ಮಹಿಳೆಯರ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ್ದ ಸೈಯದ್ ಶಾಹ್ ಖುಸ್ರೋ ಹುಸೇನಿ ಮಹಿಳೆಯರಿಗಾಗಿಯೇ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಅರೇಬಿಕ್ ಭಾಷೆಯ ಕಾಲೇಜುಗಳನ್ನು ಪ್ರಾರಂಭಿಸಿದ ಕೀರ್ತಿ ಇವರದಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಜನಾನುರಾಗಿ ಗಳಾಗಿದ್ದರು.
ಜಾತ್ಯಾತೀತ ಮನೋಭಾವದ ಹಿಂದೂ ಮುಸ್ಲಿಂ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಪ್ರಸಿದ್ಧ ಸೂಫಿ ಸಂತರು ಆಗಿದ್ದರು. ಬಂದೇ ನವಾಝ್ ದರ್ಗಾವನ್ನು ಹಿಂದೂ - ಮುಸ್ಲಿಂ ಸೌಹಾರ್ದತೆಯ ಕೊಂಡಿಯನ್ನಾಗಿಸಿ, ನಾಡಿನ ಭಾವೈಕ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದವರು. ಸದಾಕಾಲ ಸಮಾಜದ ಒಳಿತನ್ನೇ ಬಯಸುತ್ತಿದ್ದ ಡಾ ಸಯ್ಯದ್ ಶಾಹ್ ಖುಸ್ರೊ ಹುಸೈನಿ ಅವರ ಅಗಲಿಕೆಯಿಂದ ನೊಂದಿರುವ ಅವರ ಬಂಧು ಮಿತ್ರರಿಗೆ, ಅನುಯಾಯಿಗಳಿಗೆ ನನ್ನ ಹಾಗೂ ನನ್ನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ವತಿಯಿಂದ ತಿವ್ರ ಸಂತಾಪ ಗಳನ್ನು ತಿಳಿಸುತ್ತೇನೆ.