ಮಕ್ಕಳನ್ನು ದೇಶದ ಆಸ್ತಿ ಮಾಡಿ:ಮೂಲಗೆ

ಮಕ್ಕಳನ್ನು ದೇಶದ ಆಸ್ತಿ ಮಾಡಿ:ಮೂಲಗೆ

ಮಕ್ಕಳನ್ನು ದೇಶದ ಆಸ್ತಿ ಮಾಡಿ:ಮೂಲಗೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಮಕ್ಕಳನ್ನು ದೇಶದ ಆಸ್ತಿ ಮಾಡಲು ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಹೇಳಿದರು.

ಕಲಬುರಗಿಯ ಕೊತ್ತಂಬರಿ ಲೇಔಟ ಅಲ್ಲಿರುವ ಜ್ನ್ಯಾನ ಸಾಗರ ವಿದ್ಯಾಪೀಠ ಶಾಲೆಯಲ್ಲಿ ನಡೆದ ಸಂಭ್ರಮ-12 ರ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಅದ್ಬುತವಾದ ಸಾಧನೆ ಮಾಡಬೇಕು. ಸಮಾಜದಲ್ಲಿ ಉನ್ನತವಾದ ಸ್ಥಾನಕ್ಕೆ ಏರಬೇಕು ಎಂಬ ಕನಸು ಕಾಣುತ್ತಾರೆ. ಹೆತ್ತವರ ಆಶಯಕ್ಕೆ ಪೂರಕವಾಗಿ ಮಕ್ಕಳು ಸಿಕ್ಕಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ದೊಡ್ಡಮಟ್ಟದಲ್ಲಿ ಸಾಧನೆ ಮಾಡುವ ಕಡೆಗೆ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಅಧ್ಯಕ್ಷರಾದ ಗಂಗಾ ಧರ ದೇಸಾಯಿ ಮಾತನಾಡಿ, ನಮ್ಮ ಜ್ನ್ಯಾನ ಸಾಗರ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಅಧ್ಯಾಪಕರು, ಸಿಬ್ಬಂದಿ ಎಲ್ಲರೂ ನಮ್ಮ ಕುಟುಂಬದ ಸದಸ್ಯರಿದ್ದಂತೆ, ನಮ್ಮ ಕುಟುಂಬ ಅವರ ಎಲ್ಲಾ ಕಷ್ಟ- ಸುಖ, ನೋವು- ನಲಿವುಗಳಲ್ಲಿ ಜತೆಗೆ ನಿಲ್ಲುತ್ತದೆ ಎಂದರು.

 ಮಕ್ಕಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದಲೇ ಶಾಲೆಯನ್ನು ಆರಂಭಿಸಿದ್ದೇವೆ. ಮಕ್ಕಳ ಭವಿಷ್ಯ ರೂಪಿಸಿಲು ಪೋಷಕರು ಅತ್ಯುತ್ತಮವಾದ ಶಿಕ್ಷಣ ನೀಡಬೇಕಿದೆ. ಅದಕ್ಕಾಗಿ ನಮ್ಮ ಸಂಸ್ಥೆಯು ಇತರ ಸಂಸ್ಥೆಗಳೊಂದಿಗೆ ವಿದ್ಯಾರ್ಥಿ ವಿನಿಮಯಕ್ಕೆ ಒಪ್ಪಂದ ಮಾಡಿಕೊಂಡು ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ನೂರಾರು ವಿದ್ಯಾರ್ಥಿಗಳು ಮೆಡಿಕಲ್, ಎಂಜಿನಿಯರಿಂಗ್, ಸಿ. ಎ ಸೇರಿದಂತೆ ಅನೇಕ ಉನ್ನತ ಶಿಕ್ಷಣ ಮಾಡುತ್ತಿದ್ದಾರೆ ಎಂದರೆ ನಮಗೆ ಖುಷಿಯಾಗುತ್ತದೆ, ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಅವರಿಗೆ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಉತ್ತಮ ಸಾಧನೆ ಮಾಡಿದ ಸಿಎ ಆಕಾಶ ಸರಡಗಿ, 

ಅಭಿಜಿತ ಉತ್ತಮ,

ಶ್ರೇಯಶ್ ಸಿಂದಬಾಡಗಿ,

ಅಂಬಿಕಾ ಅಮರನಾಥ ಅವರನ್ನು ಸನ್ಮಾನಿಸಲಾಯಿತು.

ನಳಿನಿ ಮಹಾಗಾಂವಕರ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದ ವೇದಿಕೆ ಮೇಲೆ ಮಹಾಪೌರರಾದ ಶ್ರೀಮತಿ ವರ್ಷ ರಾಜೀವ ಜಾನೆ, ಸಂತೋಷ ಇನಾಮದಾರ್,ಡಾ. ಶರಣಬಸಪ್ಪ ವಡ್ಡನಕೇರಿ,ರಾಜಕುಮಾರ ಜೇವರ್ಗಿ, ಚಂದ್ರಶೇಖರ ಗದ್ವಾಲ್,ಶರಣಮ್ಮ ಸಿದ್ದರಾಮಪ್ಪ ದೇಸಾಯಿ,ಮಲೀಕ ನದಾಫ್, ಸಿದ್ದಲಿಂಗ ಕೊನೆಕ್,ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕುಮಾರ ರಕ್ಷಿತ ದೇಸಾಯಿ ನಿರೂಪಿಸಿದರೆ, ಕುಮಾರಿ ದೇವಿಕಾ ದೇಶಮುಖ ಸ್ವಾಗಸಿದರೆ, ಕುಮಾರಿ ಶ್ರೀಶಾ ಶೆಟ್ಟಿ ವಂದಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.