ಕ್ರಿಶ್ಚಿಯನ್ ಸಮುದಾಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ಅಪಾರ :..
ಕ್ರಿಶ್ಚಿಯನ್ ಸಮುದಾಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ಅಪಾರ :..
ಶಹಾಬಾದ : - ಪ್ರಪಂಚಕ್ಕೆ ಪ್ರೀತಿ, ಶಾಂತಿ, ಏಕತೆ, ಜಾತಿ ಮತ್ತು ಧರ್ಮ ಪ್ರಾಂತ್ಯದ ಬೇದಬಾವ ಇಲ್ಲದೆ ಕರುಣೆಯಾ ಶಕ್ತಿಯನ್ನು ಹೆಚ್ಚಿಸುವುದೇ ಕ್ರಿಸ್ಮಸ್ ಹಬ್ಬ ಎಂದು
ರೆವರೆಂಡ್ ಫಾದರ್ ಅನು ಫಿಲಿಪ್ ಹೇಳಿದರು.
ಅವರು ನಗರದ ಲಕ್ಷ್ಮೀ ಗಂಜಿನಲ್ಲಿ ಇರುವ ಸೇಂಟ್ ಥಾಮಸ್ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸೋಮವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯರೆಲ್ಲರೂ ಒಂದೇ, ಹಿಂದೂ ಮುಸ್ಲಿಂ, ಬುದ್ಧ, ಜೈನ, ಸಿಖ್ ಪಾರ್ಸಿ ಸೇರಿದಂತೆ ಎಲ್ಲಾ ಧರ್ಮದವರನ್ನು ಗೌರವಿಸುವುದು ಸಹಾಯ ಮಾಡುವುದು ನಮ್ಮ ಧರ್ಮವಾಗಿದೆ, ಕ್ರಿಸ್ಮಸ್ ಹಬ್ಬವು ಅಲಂಕಾರ ಉತ್ಸವಕ್ಕೆ ಸೀಮಿತವಾಗದೆ, ನಮ್ಮೆಲ್ಲರನ್ನು ಒಂದು ಗೂಡಿಸುವ ಹಬ್ಬವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತೋನಸನಹಳ್ಳಿಯ ಶಿವ ಸಾಯಿ ಧ್ಯಾನ ದಾಮದ ಪೂಜ್ಯ ಶ್ರೀ ಕೊಟ್ಟುರೇಶ್ವರ ಶರಣರಾದ ಕೋತಲಪ್ಪ ಮುತ್ಯಾ ಮಾತನಾಡಿ, ಶಿಕ್ಷಣ ರಂಗ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹೆಚ್ಚು ಸೇವೆ ಮತ್ತು ಸಾಧನೆ ಮಾಡುತ್ತಿರುವ ಹಾಗೆ ಈ ಸಂಸ್ಥೆಯು ಕೂಡ ಉನ್ನತ ಸ್ಥಾನಕ್ಕೆ ಬೆಳೆದು ಹೆಸರು ಮಾಡಲಿ ಎಂದು ಶುಭ ಹಾರೈಸಿ, ಹಬ್ಬದ ಶುಭಾಶಯಗಳನ್ನು ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂತ್ ಥಾಮಸ್ ಚರ್ಚಿನ ಫಾದರ್ ಜೆರಾಲ್ಡ್ ಸಾಗರ ಮಾತನಾಡಿ, ಮನುಷ್ಯರಿಗೆ ಅಸಾಧ್ಯ ವಾಗಿರುವುದನ್ನು ದೇವರಿಗೆ ಸಾಧ್ಯವಾಗುತ್ತದೆ, ದೇವರ ಮೇಲೆ ಭಕ್ತಿ ನಂಬಿಕೆ ಇಟ್ಟು ಶಾಂತಿ ಪ್ರೀತಿಯಿಂದ ಹಬ್ಬವನ್ನು ಆಚರಿಸಬೇಕೆಂದು ಹೇಳಿದರು.
ಹೋರಾಟಗಾರ ಕೃಷ್ಣಪ್ಪ ಕರಣಿಕ, ನಗರ ಸಭೆ ಸದಸ್ಯೆ ಸಾಬೀರ ಬೇಗಂ ಹಾಗೂ ಮಲ್ಕಪ್ಪ ಮುದ್ದ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸಮಾರಂಭದಲ್ಲಿ ಅಥಿತಿಗಳಾಗಿ ಎಚಎಂಪಿ ಮಜೀದ್ ನ ಮೌಲಾನಾ ಮಹ್ಮದ ನಾಸೀರ ಅಹ್ಮದ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ದಸಂಸ ಮುಖಂಡ ತಿಪ್ಪಣ್ಣ ಧನ್ನೇಕರ, ಶರಣು ವಸ್ತ್ರದ, ಇಮ್ಯಾನವೇಲ್ವೇದಿಕೆ ಮೇಲೆ ಇದ್ದರು.
ಇಡೀ ಸಮಾರಂಭವನ್ನು ಶಾಲೆಯ ವಿದ್ಯಾರ್ಥಿಗಳೆ ಸ್ವಾಗತಿಸಿ, ನಿರೂಪಿಸಿ, ಪರಿಚಯಿಸಿ, ವಂದಿಸಿದರು.
ಶಾಲೆಯ ವಿದ್ಯಾರ್ಥಿಗಳಿಂದ ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ