ಬಸವೇಶ್ವರ ಆಸ್ಪತ್ರೆಯ ಅತ್ಯುತ್ತಮ ಸೇವಾ ಸಿಬ್ಬಂದಿಗಳೆಗೆ ಪುರಸ್ಕಾರ

ಬಸವೇಶ್ವರ ಆಸ್ಪತ್ರೆಯ  ಅತ್ಯುತ್ತಮ ಸೇವಾ ಸಿಬ್ಬಂದಿಗಳೆಗೆ ಪುರಸ್ಕಾರ

ಬಸವೇಶ್ವರ ಆಸ್ಪತ್ರೆಯ ಅತ್ಯುತ್ತಮ ಸೇವಾ ಸಿಬ್ಬಂದಿಗಳೆಗೆ ಪುರಸ್ಕಾರ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸೇವಾ ಸಿಬ್ಬಂದಿಗಳನ್ನು ಡಿಟಿಎಸ್ ಎಸ್ ಏಜೆನ್ಸೀಸ್ ಅವರು 8 ಜನ ಸೇವಾ ಸಿಬ್ಬಂದಿಗಳನ್ನು ಗುರುತಿಸಿ ಅತ್ಯುತ್ತಮ ಕಾರ್ಯ ನಿರ್ವಾಹಕ ಸೇವಕ ಪ್ರಶಸ್ತಿ ಪ್ರಮಾಣ ಪತ್ರ ನೀಡಿದರು.

ಈ ಸೇವಾ ಸಿಬ್ಬಂದಿಗಳಿಗೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ಇವರ ಸೇವಾ ಕ್ಷಮತೆಯನ್ನು ಮೆಚ್ಚಿ 8 ಜನರಿಗೆ ನಗದು 1001 ರೂ ಹಾಗೂ ಸಂಸ್ಥೆಯ ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದರು. ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಬಸವೇಶ್ವರ ಆಸ್ಪತ್ರೆಯ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಡಾ ಕಿರಣ್ ದೇಶಮುಖ್, ಡಾ ಶಿವಾನಂದ ಮೇಳಕುಂದಿ, ವೈದ್ಯಾಧಿಕಾರಿಗಳಾದ ಡಾ ಆನಂದ ಪಾರಂಪಳ್ಳಿ, ಡಾ ಗುರು ಪಾಟೀಲ್ ಹಾಗೂ ಡಿಟಿಎಸ್ ಎಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.