ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ನೋಟಿಸ್ ರದ್ದುಪಡಿಸಿದ ಉಚ್ಚನ್ಯಾಯಾಲಯ

ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ನೋಟಿಸ್ ರದ್ದುಪಡಿಸಿದ  ಉಚ್ಚನ್ಯಾಯಾಲಯ

ಐನೋಳಿ ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ನೋಟಿಸ್ ಜಾರಿ ,

ನೋಟಿಸ್ ರದ್ದುಪಡಿಸಿದ ಕಲಬುರಗಿ ಉಚ್ಚನ್ಯಾಯಾಲಯ

ಚಿಂಚೋಳಿ :ತಾಲೂಕಿನ ಐನೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ 2024 ಡಿಸೆಂಬರ್ 5 ರಂದು ದಿನಾಂಕ ನಿಗದಿಪಡಿಸಿ ಅವಿಶ್ವಾಸ ಮಂಡನೆ ಸಭೆಯ ನೋಟಿಸ್ ಜಾರಿ ಮಾಡಲಾಗಿತ್ತು. ಅವಿಶ್ವಾಸ ಮಂಡನೆಯ ನೋಟಿಸ್ ಜಾರಿಯನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯಕ್ಕೆ ಪಿಟಿಶನ್ ಹಾಕಲಾಗಿತ್ತು. ಪೀಠ ವಿಚಾರಣೆ ಮಾಡಿ ಅವಿಶ್ವಾಸ ಗೊತ್ತುವಳಿ ಜಾರಿ ಮಾಡಲಾದ ನೋಟಿಸ್ ನ್ನು ಕರ್ನಾಟಕ ಉಚ್ಚನ್ಯಾಯಾಲಯ ಕಲಬುರಗಿ ಪೀಠ ರದ್ದುಪಡಿಸಿ, ಆದೇಶಿಸಿದ ಹಿನ್ನಲೆಯಲ್ಲಿ ಇದಿಗ ಐನೋಳ್ಳಿ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರಿಗೆ ತಿಳಿಸಿ, ಗ್ರಾಮ ಪಂಚಾಯಿತಿ ಕಾರ್ಯಾಲಯದ ಸೂಚನಾ ಫಲಕದಲ್ಲಿ ಅಂಟಿಸುವಂತೆ ಐನೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೇಡಂ ಸಹಾಯಕ ಆಯುಕ್ತರು ಆದೇಶಿಸಿ, ಪತ್ರ ರವಾನಿಸಿದ್ದಾರೆ.