ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ.
ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ.
ಆಳಂದ :ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ _ಘಟಕ ಸನ್ನಿಧಿ ಸಮಾಜ ಸೇವಾ ಕೇಂದ್ರ ಕಡಗಂಚಿ , ಸುಜಾನಿ ತಾಯಿ ಮತ್ತು ಶಿಶುವಿನ ಆಸ್ಪತ್ರೆ ಕಲಬುರಗಿ ಮತ್ತು ಮೌಂಟ್ ಕಾರ್ಮೆಲ್ ಸಿ.ಬಿ.ಎಸ್. ಇ. ಇವರ ಸಹಯೋಗದೊಂದಿಗೆ ಇಂದು ಕಡಗಂಚಿ ಮೌಂಟ್ ಕಾರ್ಮೆಲ್ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಅವಶ್ಯಕತೆ ಇದ್ದವರಿಗೆ ಉಚಿತ ಔಷಧ ನೀಡಲಾಯಿತು.
ಕಾರ್ಯಕ್ರಮವನ್ನು ಮೌಂಟ್ ಕಾರ್ಮೆಲ್ ಶಾಲೆಯ ವ್ಯವಸ್ಥಾಪಕರು ಫಾ. ದೀಪಕ್ ಹಾಗೂ ಎಲ್ಲಾ ಅತಿಥಿಗಳು ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿದರು. ಸುಜನಿ ಆಸ್ಪತ್ರೆಯ ಡಾ.ಶಾಕ್ಷಿ, ಡಾ. ನಭಿ,ಹಾಗೂ ಸಿಬ್ಬಂದಿ ವರ್ಗದದವರಾದ ಶ್ರೀ ನಾಗೇಶ್, ಅಕ್ಷತ, ಕಿರಣ್ ತಪಾಸಣೆ ನಡೆಸಿ ಕೊಟ್ಟರು. ಮೌಂಟ್ ಕಾರ್ಮೆಲ್ ಶಾಲೆಯ ಪ್ರಿನ್ಸಿಪಲ್ ಫಾ. ಸಂದೀಪ್ , ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂದ ಹಾಗೂ ಸುಜನಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ತಪಾಸಣಾ ಶಿಬಿರದಲ್ಲಿ 235 ಮಕ್ಕಳು ಇದರ ಸದುಪಯೋಗ ಪಡೆದರು.