ಸೀತನೂರ ಗ್ರಾಮದ ವಿದ್ಯುತ್ ಕಂಬಗಳಿಗೆ ತಕ್ಷಣವೇ ವೈರ್ ಅಳವಡಿಸಿ ವಿದ್ಯುತ್ ಸಂಪರ್ಕ ಕೊಡಲು ಪವನ್ ಕುಮಾರ ಬಿ ವಳಕೇರಿ ಆಗ್ರಹ
ಸೀತನೂರ ಗ್ರಾಮದ ವಿದ್ಯುತ್ ಕಂಬಗಳಿಗೆ ತಕ್ಷಣವೇ ವೈರ್ ಅಳವಡಿಸಿ ವಿದ್ಯುತ್ ಸಂಪರ್ಕ ಕೊಡಲು ಪವನ್ ಕುಮಾರ ಬಿ ವಳಕೇರಿ ಆಗ್ರಹ ಠ
ಕಲಬುರ್ಗಿ ತಾಲೂಕ ಸೀತನೂರು 2 ವಿದ್ಯುತ್ ಕಂಬಗಳು ಹಾಕಿದ್ದಾರೆ. ತಂತಿಯನ್ನು ಹಾಕಿ ವಿದ್ಯುತ್ ಸಂಪರ್ಕ ಕೊಡಬೇಕು. ಸೀತನೂರು ಗ್ರಾಮದ ರೈತರಿಗೆ ವಿದ್ಯುತ್ ಇರದ ಕಾರಣ ಬೆಳೆಗಳು ಬಾಡಿ ಹೋಗುತ್ತಿವೆ ಎಂದು ಸೀತನೂರು ಗ್ರಾಮದ ರೈತರು KPTCL ಲೈನ್ ಮ್ಯಾನಗಳಿಗೆ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಜೆಸ್ಕಾಂ ಗ್ರಾಮೀಣ ವಿಭಾಗ ಕಲ್ಬುರ್ಗಿ ಅಧಿಕಾರಿಗಳಿಗೆ ಅನೇಕ ಬಾರಿ ಮೌಖಿಕವಾಗಿ ರೈತರು ,ಚುನಾಯಿತ ಪ್ರತಿನಿಧಿಗಳಿಗೂ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ,
ಅಲ್ಪ ಸ್ವಲ್ಪ ತರಕಾರಿ ತೊಗರಿ ಬೆಳೆಗಳು ಮತ್ತು ದನ ಕರುಗಳಿಗೆ ಕುಡಿಯುವ ನೀರಿನ ತೊಂದರೆ ಆಗುತ್ತಿದೆ, ಇಂದು ನಿಮ್ಮ ಕಚೇರಿಗೆ ಬಂದು ರೈತರು ಅಳಲು ತೋಡಿಕೊಂಡರು.
ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಸೀತನೂರು ಗ್ರಾಮದ ರೈತರಿಗೆ ಜೀವನ ಮಾಡೋದಕ್ಕೆ ಅನುಕೂಲವಾಗುತ್ತದೆ. ಆದರೆ ಸುಮಾರು 6 ತಿಂಗಳಿಂದ ರೈತರು ಬೆಳೆದು ಬಂದ, ತುತ್ತು ಕೈಗೆ ಬಂದರು ಬಾಯಿಗೆ ಬರುತ್ತಿಲ್ಲ ಆದ್ದರಿಂದ ದಯಮಾಡಿ ವಿದ್ಯುತ್ ಕಂಬಗಳಿಗೆ ವಿದ್ಯುತ್ ತಂತಿ ಅಳವಡಿಸಿ ಕೊಡಬೇಕೆಂದು ಅಳಲು ತೋಡಿಕೊಂಡರು.
ಈ ನಮ್ಮ ಬೇಡಿಕೆ ಈಡೇರದಿದ್ದರೇ ದಿ 25. 11.2024 ಕ್ಕೆ ಮುಂಜಾನೆ 11ಘಂಟೆಗೆ ತಮ್ಮ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪವನ್ ಕುಮಾರ ಬಿ ವಳಕೇರಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಗ್ರಾ ಪಂ ನಂದಿಕೂರ ನೇತೃತ್ವದಲ್ಲಿ ಇಂದು ಕಾರ್ಯನಿರ್ವಾಹಕ ಅಭಿಯಂತರು ಜೆಸ್ಕಾಂ ಕಲ್ಬುರ್ಗಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶ್ರೀ ಚಂದ್ ಪಟೇಲ್ ಮಾಲಿ, ಶ್ರೀ ರಜಾಕ್ ಜಮಾದಾರ್, ಶ್ರೀ ರಸುಲ್ ಸಾಬ್ ಹಡಗಿಲ್, ಶ್ರೀ ಯಲ್ಲಾಲಿಂಗ್ ಪೂಜಾರಿ ಶ್ರೀ ಸಂಗಣ ಗೌಡ, ಶ್ರೀ ಮಹದೇವಪ್ಪ ಪಾಟೀಲ ಸೀತನೂರು ಗ್ರಾಮದ ರೈತರು ಉಪಸ್ಥಿತರಿದ್ದರು.