ಚಿಂಚೋಳಿ : 70 ವರ್ಷದ ವೃದ್ದ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಚಿಂಚೋಳಿ : 70 ವರ್ಷದ ವೃದ್ದ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ 

ಪ್ರಕರಣಗಳು ಮರು ಕಳುಹಿಸದಂತೆ ನಿಗಾವಹಿಸಲು ಪೊಲೀಸ ಇಲಾಖೆಗೆ ಸೂಚಿಸಲು ನಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ 

ಚಿಂಚೋಳಿ : ತಾಲೂಕಿನ ಚಂದ್ರಂಪಳ್ಳಿ ಗ್ರಾಮದ ವೃದ್ಧ ಮಹಿಳೆ ಮೇಲೆ ಕಳೆದ ನಾಲ್ಕು ದಿನಗಳ ಹಿಂದೆ ಅತ್ಯಾಚಾರ ಮಾಡಿದ ವ್ಯಕ್ತಿಯ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕ ಸರ್ವಧರ್ಮಗಳ ಒಕ್ಕೂಟ ಸಮಿತಿ ಅಧ್ಯಕ್ಷ ಅಬ್ದುಲ್ ಬಾಶೀದ್ ಅವರ ನೇತೃತ್ವದಲ್ಲಿ ಚಿಂಚೋಳಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.

ಈ ಕೃತ್ಯವನ್ನು ಖಂಡಿಸಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ತಾಲೂಕ ಅಧ್ಯಕ್ಷ ಶರಣು ಪಾಟೀಲ ಮೋತಕಪಲ್ಲಿ ಮಾತನಾಡಿ, ಭಾರತ ದೇಶದಲ್ಲಿ ಒಂದುಕಡೆಗೆ ಹೆಣ್ಣನ್ನು ಭೂಮಿಗೆ, ಮಣ್ಣಿಗೆ ಮತ್ತು ಪ್ರಕೃತಿಗೆ ಹೊಲಿಸಿ ತಾಯಿಗೆ ದೇವರ ಸ್ವರೂಪ ನೀಡಿ ಪೂಜಿಸಲಾಗುತ್ತದೆ. ತಾಯಿಯ ಸ್ವರೂಪಿ ಚಂದ್ರಂಪಳ್ಳಿ ಗ್ರಾಮದ 70 ವರ್ಷದ ವೃದ್ದಯ ಮೇಲೆ ಅತ್ಯಚಾರ ವೆಸಗಿದ್ದು ತಾಲೂಕಿಗೆ ನಾಚಿಕೆಪಡುವಂತಾಗಿದ್ದು, ಈ ಒಂದು ಕೃತ್ಯೆಯಿಂದ ಚಿಂಚೋಳಿ ತಾಲೂಕಿಗೆ ವಿಶೇಷ ಹೆಸರಿಗೆ ಕಪ್ಪು ಚುಕ್ಕೆ ತರುವಂತೆ ಆಗಿದೆ. ಇದಕ್ಕೆ ತಾಲೂಕಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಚಿಂಚೋಳಿ ಘಟಕ ಖಂಡಿಸುತ್ತದೆ ಎಂದರು.

ಕೃತ್ಯವೆಸಗಿದ ದುಷ್ಟ ಕಾಮುಕನನ್ನು ಕೂಡಲೇ ಪತ್ತೇ ಹಚ್ಚಿ ಬಂಧಿಸಿ, ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಇಂತಹ ಕೃತ್ಯಗಳು ಮರುಗೊಳಿಸದಂತೆ ಪಾಪಿಗಳಿಗೆ ಮರಣ ದಂಡನೆಯಂತಹ ಶಿಕ್ಷೆಗೆ ಗುರಿಪಡಿಸಿ, ಕೃತ್ಯಕ್ಕೆ ಕೈ ಹಾಕುವ ಮೊದಲು ದೃಷ್ಠರಿಗೆ ನಡುಕ ಹುಟ್ಟಿಸಬೇಕು ಮತ್ತು ತಾಲೂಕಿನಲ್ಲಿ ಇಂತಹ ಪ್ರಕರಣಗಳು ಮುಂದೆ ನಡೆಯದಂತೆ ಪೊಲೀಸ್ ಇಲಾಖೆಗೆ ಹಾಗೂ ತಾಲೂಕಾ ಆಡಳಿತಕ್ಕೆ ತಾಕೀತು ಮಾಡಬೇಕೆಂದು ಒಕ್ಕೂಟದ ಅಧ್ಯಕ್ಷ ಅಬ್ದುಲ್ ಬಾಶೀದ್, ಆರ್ ಗಣಪತರಾವ, ಹಣಮಂತ ಪೂಜಾರಿ, ಕೆ.ಎಂ.ಬಾರಿ ಅವರು ಆಗ್ರಹಿಸಿದ್ದಾರೆ. 

ಈ ಪ್ರತಿಭಟನೆಗೆ ಬೆಂಬಲಿಸಿ, ಜಗನ್ನಾಥ ಗುತ್ತೇದ್ದಾರ, ನೀಲಕಂಠ ಸೀಳಿನ್, ರಾಜು ಪವಾರ, ಶಿವರಾಜ ಪಾಟೀಲ, ಸುಭಾಶ್ಚಂದ್ರ ಪಾಟೀಲ, ರಾಮಶೆಟ್ಟಿ ಪವಾರ, ಶೇಕ್ ಫರೀದ್, ಸೈಯದ್ ಖಲೀಲ್ ಪಟೇಲ್, ಸೈಯದ್ ಶಬ್ಬೀರ್, ಹಾದಿ ಸಾಬ್, ಗಂಗಾಧರ ಗಡ್ಡಿಮನಿ, ನಾಗೇಶ ಗುಣಾಜಿ, ಮಂಜನಲೆ ಸಾಬ್, ಮತೀನ್ ಸೌದಾಗರ, ಚಾಂದ್ ಪಾಶಾ ಅವರು ಪತ್ರಕ್ಕೆ ಸಹಿ ಹಾಕಿ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.