ಪಂಡಿತ ಜವಾಹರಲಾಲ್ ನೆಹರು ಆದರ್ಶ ಪ್ರಸ್ತುತ

ಪಂಡಿತ ಜವಾಹರಲಾಲ್ ನೆಹರು ಆದರ್ಶ ಪ್ರಸ್ತುತ

ಪಂಡಿತ ಜವಾಹರಲಾಲ್ ನೆಹರು ಆದರ್ಶ ಪ್ರಸ್ತುತ

ಕಮಲನಗರ: ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ ನೆಹರು ಅವರ ತತ್ವಾದರ್ಶಗಳು ಪ್ರಸ್ತುತವಾಗಿವೆ ಎಂದು ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಅಜಿತಕುಮಾರ ಶಾಸ್ತ್ರೀ ಹೇಳಿದರು.

ಕಮಲನಗರ ತಾಲ್ಲೂಕು ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಚಾಚಾ ನೆಹರು ಅವರ ಜನ್ಮದಿನ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ನೆಹರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ನೆಹರು ದೇಶದ ಪ್ರಥಮ ಪ್ರಧಾನಿಯಾಗುವುದರ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದಲ್ಲದೆ, ದೀನ ದಲಿತರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದರು ಎಂದರು.

ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಮಾತನಾಡಿ, ಪಂಡಿತ ಜವಾಹರಲಾಲ್ ಅವರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳೊಡನೆ ಆಟವಾಡುವುದೇಂದರೆ ಆನಚಿದ. ಸ್ವತಂತ್ರ ಭಾರತದ ಪ್ರಧಾನಿಯಾಗಿ ದಿನವಿಡೀ ದುಡಿತವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಷಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೇ ಎತ್ತಿ ಮುದ್ದಾಡುತ್ತಿದ್ದರು. ಅದರಿಂದಲೇ ಅವರಿಗೆ ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಾರೆ ಎಂದು ಹೇಳಿದರು.

ಶೇಖ್ ಇಜಾಜ್, ಶ್ರೀದೇವಿ ಸೋನಕಾಂಬಳೆ, ದೀಪಮಾಲಾ ಸೂರ್ಯವಂಶಿ, ರಾಜೇಶ್ವರಿ ಸಿರಗಿರೆ, ಉಷಾ ವಿದ್ಯಾಸಾಗರ, ಶೀತಲ ಹಂಗರಗೆ, ಪಂಚಫುಲಾ, ಅಂಜಲಿ ಸ್ವಾಮಿ ಸೇರಿದಂತೆ ಶಾಲೆ ಮಕ್ಕಳು ಇದ್ದರು.