ಕ ರ ವೇ ಕಾರ್ಯಕ್ಕೆ ಪಾಡಪಲ್ಲಿ ಗ್ರಾಮಸ್ಥರ ಶ್ಲಾಘನೆ
ಕ ರ ವೇ ಕಾರ್ಯಕ್ಕೆ ಪಾಡಪಲ್ಲಿ ಗ್ರಾಮಸ್ಥರ ಶ್ಲಾಘನೆ.
ಗುರುಮಿಠಕಲ್ /
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿನಿಂದ ಕೂಡ ಇಲ್ಲಿವರೆಗೂ ಗುರುಮಠಕಲ್ ತಾಲೂಕಿನ ಪಾಡಪಲ್ಲಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಇರಲಿಲ್ಲ ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲೂಕ ಅಧ್ಯಕ್ಷರಾದ ಶ್ರೀ ಶರಣಬಸ್ಸಪ್ಪ ಎಲ್ಹೇರಿ ಅವರು ಗಡಿ ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಕಟ್ಟಬೇಕು ಗಡಿಭಾಗದಲ್ಲಿ ಕನ್ನಡದ ಕಂಪು ಹೆಚ್ಚಿಸಬೇಕು ಅನ್ನೋ ಉದ್ದೇಶದಿಂದ ಆ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ಗ್ರಾಮಸ್ಥರು ಕೆಲ ಸಮಸ್ಯೆಗಳು ಹೇಳಿದ್ದರು ಅದರಲ್ಲಿ ಬಸ್,ಸಮಸ್ಯೆಯನ್ನು ತಿಳಿಸಿದ್ದರು. ಇಂದು ಆ ಸಮಸೆಯನ್ನು ಬಗೆಹರಿಸಲಾಗಿದೆ ಇಂದು ಈ ಪಾಡಪಲ್ಲಿ ಗ್ರಾಮಕ್ಕೆ ಬಸ್ ಬಂದಿದೆ ಅಂದ್ರೆ ಇದರ ಪೂರ್ತಿ ಶ್ರೇಯಸ್ಸು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗೆ ಮತ್ತು ಈ ಸಂಘಟನೆಯ ಕರವೇ ಗುರುಮಠಕಲ್ ತಾಲೂಕ ಅಧ್ಯಕ್ಷರಾದ ಶರಣಬಸ್ಸಪ್ಪ ಎಲ್ಹೇರಿ ಅವರಿಗೆ ಸಲ್ಲುತ್ತದೆ ಎಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತ ಪಡಿಸಿದರು. ಗ್ರಾಮದ ಜನ ಮಾತನಾಡಿ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಗಡಿಭಾಗದಲ್ಲಿ ಇರುವಂಥ ಇಂಥ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು .
ಕರವೇ ತಾಲೂಕ ಅಧ್ಯಕ್ಷರಾದ ಶರಣಬಸ್ಸಪ್ಪ ಎಲ್ಹೇರಿ ಅವರಿಗೆ ಪಾಡಪಲ್ಲಿ ಗ್ರಾಮದ ಸಮಸ್ತ ಜನ ಧನ್ಯವಾದಗಳು ತಿಳಿಸಿದರು
ನಮ್ಮ ಮನವಿಗೆ ಸ್ಪಂದಿಸಿ ಪಾಡಪಲ್ಲಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದಕ್ಕಾಗಿ
ಕೆ ಕೆ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರು ಆದ ರಾಚಪ್ಪ ಕುಂಬಾರ್ ಅವರಿಗೆ ಮತ್ತು ಯಾದಗಿರಿ ಜಿಲ್ಲಾ ವಿಭಾಗೀಯ ನಿಯಂತ್ರಕರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಕ ರ ವೇ ತಾಲೂಕು ಅಧ್ಯಕ್ಷರಾದ ಶರಣಬಸಪ್ಪ ಎಲ್ಹೇರಿಯವರು ತಿಳಿಸಿದರು.