ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಉಡುಗೊರೆ– ಶಿವರಾಜ ಅಂಡಗಿ
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಉಡುಗೊರೆ– ಶಿವರಾಜ ಅಂಡಗಿ
ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ನಡೆದ ನಿಶ್ಚಿತಾರ್ಥ (ವೈವಾಹಿಕ ಒಪ್ಪಂದ) ಕಾರ್ಯಕ್ರಮದಲ್ಲಿ ಬಾವಿ ದಂಪತಿಗಳಿಗೆ ಭಾರತದ ಸಂವಿಧಾನ ಪೀಠಿಕೆ ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು.
ಭಾರತದ ಸಂವಿಧಾನ ಜಾರಿಗೆ ಬಂದ ಮಹತ್ವದ ದಿನದ ನೆನಪಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ, ದೇಶದ ಮೂಲಭೂತ ಮೌಲ್ಯಗಳು, ಆಶಯಗಳು ಹಾಗೂ ತತ್ವಗಳನ್ನು ಒಳಗೊಂಡಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ವಿವರಿಸಲಾಯಿತು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಖಾತರಿಪಡಿಸುವ ಸಂವಿಧಾನ ಪೀಠಿಕೆಯ ಆಶಯದಂತೆ ಬದುಕು ರೂಪಿಸಿಕೊಳ್ಳಬೇಕು ಎಂಬ ಸಂದೇಶ ನೀಡಲಾಯಿತು.
ಈ ಸಂದರ್ಭದಲ್ಲಿ ಟೆಂಗಳಿ ಅಂಡಗಿ ಪ್ರತಿಷ್ಠಾನದ ಕಾರ್ಯದರ್ಶಿ ರೇಖಾ ಶಿವರಾಜ ಅಂಡಗಿ ದಂಪತಿಗಳು ಬಾವಿ ದಂಪತಿಗಳಾದ ಕು. ಪವನಕುಮಾರ ಮಂಠಾಳೆ ಹಾಗೂ ಕು. ಮೇಘಾ ಖುಬಾ ಅವರಿಗೆ ಸಂವಿಧಾನ ಪೀಠಿಕೆಯನ್ನು ಉಡುಗೊರೆಯಾಗಿ ನೀಡಿ, ಎರಡು ಕುಟುಂಬಗಳ ಎಲ್ಲ ಸದಸ್ಯರೂ ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗೌರವಯುತ ಹಾಗೂ ಸಮೃದ್ಧ ಜೀವನ ನಡೆಸಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಠಾಳೆ ಹಾಗೂ ಖುಬಾ ಕುಟುಂಬದ ಹಿರಿಯರಾದ ಸಂಗಪ್ಪ ಮಂಠಾಳೆ, ವಿಜಯಕುಮಾರ ಖುಬಾ, ಸುರೇಶ ಸುನಂದಾ, ಜಯಶ್ರೀ ರಮೇಶ, ಅಶ್ವಿನಿ ವೈಜನಾಥ, ರಾಜೇಶ್ವರಿ ಸಿದ್ರಾಮಪ್ಪ, ಶೃತಿ ಆಕಾಶ, ಸುಮನ ಮಲ್ಲಿಕಾರ್ಜುನ, ಡಾ. ರತ್ನಶ್ರೀ, ಡಾ. ಗುರುರಾಜ, ಸುಷ್ಮಾ ನಾಗೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
