ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲು ವತ್ತಾಯಿಸಿ ಧಾರಿಣಿ ಸತ್ಯಾಗ್ರಹ.
ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲು ವತ್ತಾಯಿಸಿ ಧಾರಿಣಿ ಸತ್ಯಾಗ್ರಹ.
ಶಹಾಬಾದ್: ನಗರುತ್ತಾನದ ಅಡಿಯಲ್ಲಿ ಶೇಕಡ 5% ರಷ್ಟು ಅನುದಾನ ಮೀಸಲಿದ್ದು ಅದರಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ಮಾಸಿಕ ಪ್ರೋತ್ಸಾಹ ಧನ ಐದು ಸಾವಿರ ರೂಪಾಯಿ ವಿತರಿಸಬೇಕಾದ ನಗರ ಸಭೆ ಹಲವು ವರ್ಷಗಳಿಂದ ವಿತರಣೆ ಮಾಡುವಲ್ಲಿ ನಗರಸಭೆಯ ನಿಷ್ಕಾಲಜಿ ವಹಿಸಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಮರೆಯಪ್ಪ ಹಳ್ಳಿ ಧರಣಿ ಸತ್ಯಾಗ್ರಹ ಬೆಂಬಲಿಸಿ ಮಾತನಾಡಿದರು.
ಶಹಬಾದ್ ನಗರಸಭೆ ಎದುರು ಮಂಗಳವಾರ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಧರಣಿ ಸ್ಥಳಕ್ಕೆ ಆಗಮಿದ ತಾಲ್ಲೂಕ ಉಪಾತಸಿಲ್ದಾರ ಅಣವೀರಪ್ಪ ಹಾಗೂ ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಮನವಿ ಪತ್ರ ಸ್ವೀಕರಿಸಿ ಅಂಗವಿಕಲರ ಪಟ್ಟಿಯನ್ನು ಇಗಾಗಲೆ ತಯಾರಿಸಿದ್ದೆನೆ ಕೂಡಲೆ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದು ಆದಷ್ಟು ಬೇಗನೆ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಸಾಬಣ್ಣ ಸುಂಗಲಕರ ಮತ್ತು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಮಲೇಶಿ ಭಜಂತ್ರಿ, ಶಹಾಬಾದ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಅನಿಲ ಮಠಪತಿ, ನಾಗಪ್ಪ ರಾಯಚೂರಕರ, ಮಲ್ಲಿಕಾರ್ಜುನ ಹಳ್ಳಿ, ಮಿಲಿಂದ ಕುಮಾರ, ಸುಭಾಸ ಕಾಂಬಳೆ, ಅಹಮದ್ ಶರೀಫ, ಶಂಕರ, ಲಕ್ಷ್ಮಣ, ಜ್ಯೋತಿ, ಗಂಗೂಬಾಯಿ, ಲಕ್ಷ್ಮೀ, ಗೋವರ್ಧನ ರಾಠೋಡ, ಹಾಗೂ ಮಲ್ಕಣ್ಣ ಮುದ್ದಾ, ಬಸವರಾಜ ಮಯೂರ, ನರಸಿಂಹಲು, ಗೋವಾ ಬಾಬು, ವೀರಯ್ಯ ಸ್ವಾಮಿ ಸೇರಿದಂತೆ ಅನೇಕ ಜನ ವಿಕಲಚೇತನರು ಉಪಸ್ಥಿತರಿದ್ದರು.
ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ