ಬ್ಯಾಂಕ್ ಆಫ್ ಇಂಡಿಯಾದ ಶಹಾಬಾದ್ ಕ್ರಾಸ್ ಬ್ರಾಂಚ್ ನ ಶಾಖೆ ಉದ್ಘಾಟನೆ ಜ.3ರಂದು

ಬ್ಯಾಂಕ್ ಆಫ್ ಇಂಡಿಯಾದ ಶಹಾಬಾದ್ ಕ್ರಾಸ್ ಬ್ರಾಂಚ್ ನ ಶಾಖೆ ಉದ್ಘಾಟನೆ ಜ.3ರಂದು

ಬ್ಯಾಂಕ್ ಆಫ್ ಇಂಡಿಯಾದ ಶಹಾಬಾದ್ ಕ್ರಾಸ್ ಬ್ರಾಂಚ್ ನ ಶಾಖೆ ಉದ್ಘಾಟನೆ ಜ.3ರಂದು

ಕಲಬುರಗಿ,ಜ.೦೧-ಬ್ಯಾಂಕ್ ಆಫ್ ಇಂಡಿಯಾದ ಶಹಾಬಾದ್ ಕ್ರಾಸ್ ಬ್ರಾಂಚ್ ನ ನೂತನ ಶಾಖೆ ಉದ್ಘಾಟನೆ ಕಾರ್ಯಕ್ರಮವು 03:01:2026 ರಂದು ಬೆಳಿಗ್ಗೆ 12:30 ಗಂಟೆಗೆ ನೆರವೇರಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕರಾದ ಬಿಸ್ವಜಿತ್ ಪ್ರಧಾನ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೇಳಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಆಗಮಿಸುವರು. ಹೈದರಾಬಾದನ ಪ್ರಧಾನ ವ್ಯವಸ್ಥಾಪಕ ಶ್ರೀ ಮನೋಜಕುಮಾರ ಶ್ರೀವಾಸ್ತವ ಅವರಿಗೆ ಗೌರವ ಸನ್ಮಾನ ನಡೆಯಲಿದೆ. 

ಹುಬ್ಬಳ್ಳಿ ಧಾರವಾಡ ವಲಯ ವ್ಯವಸ್ಥಾಪಕ ತರಿಣಿ ಚರಣ ಸಾಹು, ಉಪ ವ್ಯವಸ್ಥಾಪಕ ಶ್ರೀ ಅಭಿನವ ಪಾಂಡೆ ಮತ್ತಿತರ ಗಣ್ಯರು ಉಪಸ್ಥಿತರಿವರು ಎಂದು ಉದ್ಘಾಟನೆಗೊಳ್ಳುವ ನೂತನ ಶಾಖೆಯ ವ್ಯವಸ್ಥಾಪಕ ಶ್ರೀ ಬಿಸ್ಶಜೀತ ಪ್ರಧಾನ ಅವರು ಇಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ಬ್ರಾಂಚ್ ನ ಸೀನಿಯರ್ ವ್ಯವಸ್ಥಾಪಕರಾದ ಶ್ರೀ ನೀಲಕಂಠ ಸಜ್ಜನ್ ಅವರು ಉಪಸ್ಥಿತರಿದ್ದರು.