ಶ್ರೀ ಶಬರಿ ಸಂಕಲ್ಪ ಸನ್ನಿದಾನದಲ್ಲಿ ತುಲಾಭಾರ ಕಾರ್ಯಕ್ರಮ

ಶ್ರೀ ಶಬರಿ ಸಂಕಲ್ಪ ಸನ್ನಿದಾನದಲ್ಲಿ ತುಲಾಭಾರ ಕಾರ್ಯಕ್ರಮ
ಕಲಬುರಗಿ: ಕುಸನೂರ ರಸ್ತೆಯ ಪೂಜಾ ಕಾಲೋನಿಯಲ್ಲಿ ಶ್ರೀ ಶಬರಿ ಸಂಕಲ್ಪ ಸನ್ನಿದಾನದಲ್ಲಿ 103 ಮಾಲಾಧಾರಿಗಳಿಂದ ಗುರಸ್ವಾಮಿ ತುಕಾರಾಮ ಬಿ. ಚಿತ್ತಾಪೂರ ಮತ್ತು ಕಲ್ಲಪ್ಪ ಯಾಧವ ಇವರ ನೇತೃತ್ವದಲ್ಲಿ 103 ಮಾಲಾಧಾರಿಗಲ್ಲಿ ಒಬ್ಬ ಮಾಲಾಧಾರಿಯ ತಾಯಿಗೆ ಡ್ರಾ ಮೂಲಕ ಕೋಯಿನ್ ಎತ್ತುವ ಮೂಲಕ ಡ್ರಾ ನಂಬರ್ 2 ಸುನಿಲ್ ಜೆಸಿಬಿ ಅವರ ತಾಯಿಗೆ ಮತ್ತು ಮಲ್ಲಬಾದಿ ಗುರುಗಳಾದ ಲಕ್ಷ್ಮಣ್ ವಾಲಿಕಾರ ಇವರಿಬ್ಬರಿಗೆ ತುಲಾಭಾರ ಕಾರ್ಯಕ್ರಮವನ್ನು ನರನಾಳ ಮತ್ತು ಸೊಂತ ಶ್ರೀಗಳಾದ ಷ. ಬ್ರ. ಶ್ರೀ. ಶಿವಕುಮಾರ್ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿತು.
ಇದೆ ಸಂದರ್ಭದಲ್ಲಿ 18ವರ್ಷಗಳು ಪೂರೈಸಿ ಶಬರಿ ಯಾತ್ರೆ ಮಾಡುತ್ತಿರುವ ಪವನ್ ರಾಜಶೇಖರ್ ಚಿತ್ತಾಪೂರ ಇವರಿಗೆ ತೆಂಗಿನ ಸಸಿ ನೀಡುವ ಮೂಲಕ ಶಿವಕುಮಾರ್ ಸ್ವಾಮಿಗಳು ಮತ್ತು ಲಕ್ಷ್ಮಣ ವಾಲಿಕಾರ ಇವರು ಶುಭಹಾರೈಸಿದರು. ಸನ್ನಿದಾನದಲ್ಲಿ ಪೂಜಾ ಮತ್ತು ದಾಸೋಹ ವ್ಯವಸ್ಥೆ ಕಲ್ಪಿಸಿದ ಸನ್ನಿದಾನದ ಸ್ವಾಮಿಗಳಾದ ಗುರುಶಾಂತಪ್ಪ ಬಿ. ಸಿಕ್ಕೇದ್ ಮತ್ತು ಬಸ್ಸು ಗೌಡ ಪಾಟೀಲ್ ಇವರು ಭಕ್ತರಿಗೆ ಸ್ವಾಗತ ಕೋರಿ ಪ್ರಸಾದ್ ಬಡಿಸಿ ಸ್ವಾಮಿ ಮಣಿಕಂಠನ ಪ್ರೀತಿಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶ್ರೀ ಶಿವಕುಮಾರ್ ಸ್ವಾಮಿಗಳು ಮಾತನಾಡಿ ಈ ಭವದಲ್ಲಿ ತಾಯಿ ಶ್ರೇಷ್ಠ ಎಂಬುದರ ಬಗ್ಗೆ ಭಕ್ತರಿಗೆ ಮನಮುಟ್ಟುವಂತೆ ಉಪದೇಶ ನೀಡಿ ಅದರಂತೆ 21ವರ್ಷದಿಂದ ಈ ಸ್ವಾಮಿ ಅಯ್ಯಪ್ಪನ ಸೇವೆ ಸಲ್ಲಿಸಿ ಸೇವೆ ಮಾಡುತ್ತಿರುವ ಗುರು ಸ್ವಾಮಿಗಳ ಆರಾಧನೆಯನ್ನು ಕೊಂಡಾಡಿದರು, ಹಾಗೂ ಈ ಸನ್ನಿದಾನದ ಮಾಲಾಧಾರಿಗಳ ಶಿಸ್ತು, ಮತ್ತು ದೇವರ ಬಗ್ಗೆ ಭಕ್ತಿ ಪ್ರಧಾನವನ್ನು ಮೆಚ್ಚುವಂತಹದು ಎಂದರು. ಸನ್ನಿದಾನದ ಗುರುಸ್ವಾಮಿ ತುಕಾರಾಮ ಬಿ. ಚಿತ್ತಾಪೂರ ಅವರು ಮಾತನಾಡಿ ಅಯ್ಯಪ್ಪನ ವೃತದ ಬಗ್ಗೆ ವಿಶೇಷತೆ ಮತ್ತು ಅನುಭವ ವನ್ನು ಹಂಚಿಕೊAಡು, 18ಮೆಟ್ಟಿಲುಗಳ ಸಿದ್ಧಿ ತಿಳಿಸಿ ಹೇಳಿದರು, ಕೊನೆಯಲ್ಲಿ ಡಾ. ಶರಣಬಸ್ಸಪ್ಪ ಅಪ್ಪ ಅವರ ಲಿಂಗಯ್ಕತೆ ತುಂಬಾ ನೋವು ತಂದಿದೆ ಎಂದರು. ಸೆ. 03 ರಂದು ಭುಧವಾರ ಶಬರಿ ಯಾತ್ರೆ ಪ್ರಯುಕ್ತ ಇರುಮುಡಿ ಪೂಜೆ ಇರುವುದು 11.44ಕ್ಕೆ ಮಹಾಪ್ರಸಾದ ಇರುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ್, ಬಸವರಾಜ್ ಗೌಡ ನರಿಬೋಳ್, ಉಪನ್ಯಾಸಕರಾದ ನೀಲಾ, ಸಂತೋಷ ಖಾನಾಪೂರ್ ಸೇರಿದಂತೆ ಮಾಲಾಧಾರಿಗಳು, ಭಕ್ತಾಧಿಗಳು ಇದ್ದರು. ನಂತರ ಭಕ್ತಾಧಿಗಳು ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಪ್ರಸಾದ ಸೇವಿಸಿ ಪುನೀತರಾದರು.