ಕಲಬುರ್ಗಿ ಜಿಲ್ಲೆಯ ಪಿಯುಸಿ ಫಲಿತಾಂಶ ಹೆಚ್ಚಿಸಲು ಇಲಾಖೆ ಹಾಗೂ ಸಂಘಗಳ ಜೋತೆ ನಾನು ಕೈ ಜೋಡಿಸುವೆ ಶಶೀಲ್ ಜಿ ನಮೋಶಿ

ಕಲಬುರ್ಗಿ ಜಿಲ್ಲೆಯ ಪಿಯುಸಿ ಫಲಿತಾಂಶ ಹೆಚ್ಚಿಸಲು ಇಲಾಖೆ ಹಾಗೂ ಸಂಘಗಳ ಜೋತೆ ನಾನು ಕೈ ಜೋಡಿಸುವೆ ಶಶೀಲ್ ಜಿ ನಮೋಶಿ

ಕಲಬುರ್ಗಿ ಜಿಲ್ಲೆಯ ಪಿಯುಸಿ ಫಲಿತಾಂಶ ಹೆಚ್ಚಿಸಲು ಇಲಾಖೆ ಹಾಗೂ ಸಂಘಗಳ ಜೋತೆ ನಾನು ಕೈ ಜೋಡಿಸುವೆ ಶಶೀಲ್ ಜಿ ನಮೋಶಿ 

ಕಲಬುರ್ಗಿ: ಪ್ರತಿ ಸಲ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದ ದಿನ ನಮ್ಮ ಜಿಲ್ಲೆಗೆ ಯಾವ ಸ್ಥಾನ? ಫಲಿತಾಂಶ ಎಷ್ಟು? ಎಂಬ ಹಲವು ಕುತೂಹಲ ಇದ್ದೇ ಇರುತ್ತವೆ. ಆದರೆ ಕಳೆದ ಮೂರು ನಾಲ್ಕು ವರ್ಷಗಳ ಅಂಕಿ-ಅಂಶಗಳು ಗಮನಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿ ತೃಪ್ತಿ ಪಡಬೇಕಾಗಿದೆ. ಈ ಬಾರಿ ಈ ಹಣೆಪಟ್ಟಿ ಕಳೆದುಕೊಳ್ಳ ಬೇಕೆಂಬ ದೃಡ ನಿರ್ಧಾರ ಮಾಡಿದ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯದ ಜೋತೆ ನಾನು ಕೈ ಜೋಡಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದರು.

ಅವರು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ಹಾಗೂ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಉಪನ್ಯಾಸಕರ ಸಂಘ ಇವರ ಸಹಯೋಗದಲ್ಲಿ ಶ್ರೀ ಶಕುಂತಲಾ ಪಾಟೀಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಭೌತಶಾಸ್ತ್ರ, ಸಮಾಜಶಾಸ್ತ್ರ, ಇಂಗ್ಲಿಷ್, ಅರ್ಥಶಾಸ್ತ್ರ ವಿಷಯಗಳ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಈ ಭಾಗದ ಉಪನ್ಯಾಸಕರು ವೃತ್ತಿಯಲ್ಲಿನ ಅನೇಕ ಸಮಸ್ಯೆಗಳ ಮಧ್ಯೆಯೂ ವಿದ್ಯಾರ್ಥಿಗಳಿಗೆ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಆದರೂ ಫಲಿತಾಂಶ ಸುಧಾರಣೆಯಾಗದೆ ಇರುವದು ಆತಂಕಕ್ಕೆ ಕಾರಣವಾಗಿದೆ.ಇದಕ್ಕೆಲ್ಲ ಕಾರಣ ಈ ಭಾಗದಲ್ಲಿ ಶಿಕ್ಷಕರ ಕೊರತೆಯು ಕಾರಣವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಪಾಲಿನ ಶೇ.37% ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅಂದರೆ, ಸುಮಾರು 21381 ಹುದ್ದೆಗಳು ಭರ್ತಿ ಮಾಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಗುಣಮಟ್ಟದ ಮತ್ತು ಪರಿಣಾಮಕಾರಿ ಫಲಿತಾಂಶಕ್ಕೆ ವೈಜ್ಞಾನಿಕ ನೀತಿ ರೂಪಿಸುವದು ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸಂಖ್ಯೆ ಹೆಚ್ಚು ಇರುವ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ತಮಗೆ ಪರಿಣತಿ ಇಲ್ಲದ ಎರಡು ವಿಷಯಗಳನ್ನು ಬೋಧನೆ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವು ಶಾಲೆಗಳಲ್ಲಿ ಪ್ರಭಾರಿ ಮುಖ್ಯೋಪಾಧ್ಯಯರ ಹುದ್ದೆಯನ್ನು ಸಹ ಶಿಕ್ಷಕರು ನಿಭಾಯಿಸಬೇಕಾಗಿದೆ. ಶಿಕ್ಷಕರು ಪರಿಣಾಮಕಾರಿ ಬೋಧನಾ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರ ಕೊರತೆಯೂ ತೊಡಕಾಗಿದೆ.ಎಂದು ಹೇಳಿದರು 

ಶಕುಂತಲಾ ಪಾಟೀಲ್ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ವಿಧಾನ ಪರಿಷತ್ ಸದಸ್ಯರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸುರೇಶ್ ಅಕ್ಕಣ್ಣ,ಸಂಸ್ಥೆಯ ಫಿಸಿಯೋಥೆರಪಿ, ಹಾಗೂ ನರ್ಸಿಂಗ್ ಕಾಲೇಜು ಮುಖ್ಯಸ್ಥರಾದ ಡಾ ಜಗನ್ನಾಥ್ ಹುಮನಾಬಾದ್, ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ, ಉಪನ್ಯಾಸಕರ ಸಂಘ ಜಿಲ್ಲಾ ಅಧ್ಯಕ್ಷ ಜೆ ಮಲ್ಲಪ್ಪ ,ನೋಡಲ್ ಅಧಿಕಾರಿ ಶ್ರೀಶೈಲಪ್ಪ ಬೋನಾಳ ಹಾಗೂ ವಿಷಯಗಳ ಸಂಘಟನಾದಿಕಾರಿಗಳು ಉಪಸ್ಥಿತರಿದ್ದರು.