ಕೆಂಭಾವಿಯಲ್ಲಿ ಐದನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ

ಕೆಂಭಾವಿಯಲ್ಲಿ ಐದನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ

ಕೆಂಭಾವಿಯಲ್ಲಿ ಐದನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ 

ಕೆಂಭಾವಿ: ಪಟ್ಟಣದ ಜೈ ಭೀಮ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಹಮ್ಮಿಕೊಳ್ಳಲಾಯಿತು.  

ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಸವಣ್ಣಪ್ಪ ಆರ್. ಮಾಳಳ್ಳಿಕರ್, ವಾಡಿನ ಸದಸ್ಯರು ರಮೇಶ್ ಕೊಡಗಾನೂರ ಮತ್ತು ಶಿವಪ್ಪ ಕಂಬಾರ, ನಾಮನಿರ್ದೇಶಿತ ಸದಸ್ಯರು ದೇವೇಂದ್ರಪ್ಪ ವಠರ ಹಾಗೂ ದಾದಾಪೀರ್ ಇನಾಮ್ದಾರ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕರಾದ ಮಂದಗಿನಿ, ಸಹಶಿಕ್ಷಕರು, ಅತಿಥಿ ಶಿಕ್ಷಕರು ಸಿದ್ದಣ್ಣ ಕಟ್ಟಿಮನಿ, ರಾಘವೇಂದ್ರ, ಸಾವಿತ್ರಿ ಮತ್ತು ಅಡುಗೆ ಸಿಬ್ಬಂದಿ ಅವಳಮ್ಮ ಮಳಿಕೇರಿ, ಸುಜಾತ ಯತ್ನಾಳ ಅವರು ಈ ಸಮಾರಂಭದಲ್ಲಿ ಭಾಗವಹಿಸಿದರು.  

ಮುಖ್ಯ ಅತಿಥಿಗಳು ಮಕ್ಕಳಿಗೆ ಪ್ರೇರಣಾದಾಯಕ ಸಂದೇಶಗಳನ್ನು ನೀಡಿದ್ದು, ಮುಂದಿನ ವಿದ್ಯಾಭ್ಯಾಸದಲ್ಲಿ ಶ್ರಮಿಸಿ, ಉನ್ನತ ಸಾಧನೆಗಾಗಿ ಉತ್ತೇಜಿಸಿದರು. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಣದ ಮಹತ್ವವನ್ನು ಕುರಿತು ಮಾಹಿತಿ ನೀಡಿದರು.  

ಈ ರೀತಿಯ ಬೀಳ್ಕೊಡುಗೆ ಸಮಾರಂಭಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಉತ್ಸಾಹವನ್ನು ಬೆಳೆಸಲು ಸಹಕಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.  

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಅತಿಥಿಗಳು ಹಾಗೂ ಪಾಲಕರು ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು.