ಕೇಂದ್ರ ಬಿಜೆಪಿ ಸರಕಾರ ಅಧಿಕಾರಕ್ಕೆ ಮತ ಕೊಟ್ಟಿದ್ದಕ್ಕೆ ಮಣ್ಣು ಬುಕ್ಕುವ ಪರಿಸ್ಥಿ ಬಂದಿದೆ : ಸಿಪಿಐಎಂ
ಕೇಂದ್ರ ಬಿಜೆಪಿ ಸರಕಾರ ಅಧಿಕಾರಕ್ಕೆ ಮತ ಕೊಟ್ಟಿದ್ದಕ್ಕೆ ಮಣ್ಣು ಬುಕ್ಕುವ ಪರಿಸ್ಥಿ ಬಂದಿದೆ : ಸಿಪಿಐಎಂ
ಇಂತಹ ಸರಕಾರ ಆಡಳಿತದಲ್ಲಿ ಇರಬಾರದೆಂದು ಗದರಿದ್ದ ಮಹಿಳಾ ಕಾರ್ಯಕರ್ತೆ
ಚಿಂಚೋಳಿ : ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಡ ಜನರಿಗೆ ಬಹಳ ಅನ್ಯಾಯವಾಗಿದೆ. ಬಿಜೆಪಿ ಪಕ್ಷಕ್ಕೆ ಮತ ಕೊಟ್ಟಿದ್ದಕ್ಕೆ ಇವತ್ತು ಮಣ್ಣು ಬುಕ್ಕುವ ಪರಿಸ್ಥಿ ಬಂದಿದೆ ಎಂದು ಸಿಪಿಐಎಂ ಕಾರ್ಯಕರ್ತೆಯರು ಸರಕಾರವನ್ನು ದೂರಿದ್ದಾರೆ.
ಪಟ್ಟಣದ ಬಸ್ ನಿಲ್ದಾಣ ಹತ್ತಿರ ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಕಾರ್ಯಕರ್ತೆಯರು, ಕೇಂದ್ರ ಬಿಜೆಪಿ ಸರಕಾರಕ್ಕೆ ಮತ ಕೊಟ್ಟು ಅಧಿಕಾರಕ್ಕೆ ತಂದಿದ್ದಕ್ಕೆ ಇವತ್ತು ಬಡ ಜನರಿಗೆ ಮಣ್ಣು ಬುಕ್ಕುವ ಪರಿಸ್ಥಿತಿ ಬಂದಿದೆ. ಸರಕಾರಗಳು ರೈತ ಮತ್ತು ಕಾರ್ಮಿಕರ ವಿರೋಧಿ ಅನುಸಾರಿಸುತ್ತಿವೆ. ಒಕ್ಕುಲತನ ದಿವಾಳಿಯಾಗಿ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ನೀಡುತ್ತಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೊಟಕು ಗೊಳಿಸಿ ಹೊಸ ಕಾನೂನು ತರಲು ಕೇಂದ್ರ ಬಿಜೆಪಿ ಸರಕಾರ ಮುಂದಾಗಿದ್ದು, ಗ್ರಾಮೀಣ ಭಾಗದ ಕೂಲಿಕಾರರಿಗೆ ಕೆಲಸಕ್ಕಾಗಿ ಅಲೆದಾಡುವಂತೆ ಬಿಜೆಪಿ ಮಾಡಿದೆ. ಇಂತಹ ಸರಕಾರ ಆಡಳಿತದಲ್ಲಿ ಇರಬಾರದು ಎಂದು ಕಾರ್ಯಕರ್ತೆಯರು ಗದರಿದ್ದರು.
ರೈತ ವೀರೋಧಿ ಕಾನೂನು ರದ್ದುಪಡಿಸಿ :
ಕೇಂದ್ರ ಸರಕಾರ ವಿಬಿ.ಜಿ ರಾಮಜೀ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ, ಬೀಜ ಮತ್ತು ಭೂಸ್ವಾಧೀನ ಕಾಯ್ದೆಗಳು ರದ್ದುಗೊಳಿಸಬೇಕು. ಲೇಬರ್ ಕೋಡ್ ಗಳಿಗೆ ನಿಯಾಮವಳಿ ರಚನೆ ಮಾಡೆದೇ, ಜನ ವೀರೋಧಿ ಮಸೂದೆಗಳು ರಾಜ್ಯ ಸರಕಾರ ಹಿಂಪಡೆಯಬೇಕು. ಕನಿಷ್ಠ ವೇತನ ಪರಿಷ್ಕರಣೆ ಜಾರಿಗೊಳಿಸಬೇಕು. ಅಕ್ಷರದಾಸೋಹ ಮತ್ತು ಹಾಸ್ಟಲ್ ನೌಕರರಿಗೆ ಖಾಯಂಗೊಳಿಸಬೇಕೆನ್ನುವ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಆರ್ ಎಸ್ ಅಧ್ಯಕ್ಷ ಜಾಫರ್ ಖಾನ ಮಿರಿಯಾಣ, ಪ್ರಭು ಪ್ಯಾರಬದ್ಧಿ, ಸಿದ್ಧಲಿಂಗಯ್ಯ ಸ್ವಾಮಿ, ಶಾಂತಾಬಾಯಿ ಟಿ, ಮಹಾದೇವಿ ಪೋಲಕಪಳ್ಳಿ, ವಿಜಯಲಕ್ಷಮೀ ಓಂಕಾರ, ಲಲಿತಾ ರಟಕಲ್, ಮಲ್ಲಮ್ಮ ಕೋಡ್ಲಿ, ಜಗದೇವಿ ಚಂದನಕೇರಾ, ತುಳಜಪ್ಪ ಹೊಡೆಬೀರನಳ್ಳಿ, ಖಾಜಾಮೀಯಾ, ನರಸಮ್ಮ ಚಂದನಕೇರಾ ಅವರು ಸೇರಿದಂತೆ ಸಂಘಟನೆಯ ಮಹಿಳಾ ಕಾರ್ಯಕರ್ತೆಯರು ಇದ್ದರು.
