೧೧ನೇ ಶತಮಾನದಲ್ಲೇ `ಇಷ್ಟಲಿಂಗ ಪೂಜೆ,ಆರಾಧನೆ ,ಕೇಶಿರಾಜರ `ಕಂದಪದ್ಯ’ದಲ್ಲಿ ಅಷ್ಠಾವರಣ ಅನಾವರಣ

೧೧ನೇ ಶತಮಾನದಲ್ಲೇ `ಇಷ್ಟಲಿಂಗ ಪೂಜೆ,ಆರಾಧನೆ ,ಕೇಶಿರಾಜರ `ಕಂದಪದ್ಯ’ದಲ್ಲಿ ಅಷ್ಠಾವರಣ ಅನಾವರಣ

೧೧ನೇ ಶತಮಾನದಲ್ಲೇ `ಇಷ್ಟಲಿಂಗ ಪೂಜೆ,ಆರಾಧನೆ ,ಕೇಶಿರಾಜರ `ಕಂದಪದ್ಯ’ದಲ್ಲಿ ಅಷ್ಠಾವರಣ ಅನಾವರಣ

 ಕೊಂಡಗುಳಿ (ಯಡ್ರಾಮಿ) : ಇಷ್ಟಲಿಂಗ ಪೂಜೆ ಆರಾಧನೆ ಮಾಡುವ ಪರಂಪರೆ ೧೧ನೇ ಶತಮಾನದಲ್ಲಿ ಇತ್ತು. ಅದಕ್ಕೆ ಪುಷ್ಟಿ ನೀಡುವಂತೆ ವಿಕ್ರಮಾದಿತ್ಯನ ಅರಸೊತ್ತಿಗೆಯಲ್ಲಿ ಮಹಾದಂಡ ನಾಯಕನಾಗಿರುವ, ಪ್ರಧಾನಿಯಾಗಿರುವ ಶರಣ ಕೇಶಿರಾಜ ವಿರಚಿತ `ಕಂದ ಪದ್ಯ’ಗಳಲ್ಲಿ ಅಷ್ಠಾವರಣ ಕುರಿತು ಅನಾವರಣಗೊಂಡಿದೆ ಎಂದು ವಿವರಿಸಿದವರು ಆದಿ ಬಣಜಿಗ ಸಮಾಜದ ಮುಖಂಡರು ಹಾಗು ಗುರು ಉಪದೇಶ ಕನ್ನಡ ಮಾಸ ಪತ್ರಿಕೆ ಸಂಪಾದಕರಾದ ಸಿದ್ದಣಗೌಡ ಕೆ. ಮಾಲಿ ಪಾಟೀಲ.ಅವರು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕೇಶಿರಾಜನ ನೆಲೆಯಾಗಿರುವ ಕೊಂಡಗೂಳಿಯ ಶ್ರೀ ಸೋಮೇಶ್ವರ ದೇಗುಲದಲ್ಲಿ ಆಯೋಜಿಸಿದ `ಶರಣ ಶ್ರೀ ಕೇಶಿರಾಜ’ ಪುರಾಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಕೇಶಿರಾಜರು ತನ್ನ ಆರಾಧ್ಯ ಗುರುಗಳಾಗಿರುವ ವಿರೂಪಾಕ್ಷೇಶ್ವರ ಪಟ್ಟದೇವರು ಅವರಿಂದ ಲಿಂಗದೀಕ್ಷೆ ಪಡೆದಿರುವುದು ನೋಡಿದರೆ, ಇಷ್ಠಲಿಂಗ ಪೂಜೆ ಆರಾಧನೆ ಪರಂಪರೆ ೧೧ನೇ ಶತಮಾನಕ್ಕೂ ಮೊದಲೇ ಇದ್ದಿರಬಹುದು ಎಂದು ಅಂದಾಜಿಸ ಬಹುದಾಗಿದೆ ಎಂದು ನುಡಿದರು. ೧೨ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಪ್ರತಿಪಾದಿಸಿದ ಇಷ್ಟಲಿಂಗ ಪೂಜೆ ಹಾಗು ಅಷ್ಠಾವರಣಗಳು ಕೇಶಿರಾಜರ ಕಂದಪದ್ಯಗಳಲ್ಲೂ ಕಾಣಬಹುದಾಗಿದೆ. ಹೀಗಾಗಿ, ೧೧ನೇ ಶತಮಾನಕ್ಕೂ ಮೊದಲೇ ಇಷ್ಟಲಿಂಗ ಪೂಜೆ ಪರಂಪರೆ ಇತ್ತು ಎಂಬುದು ತೋರಿಸಿಕೊಡುತ್ತದೆ ಎಂದರು. 

 ಪುರಾಣಿಕರಾದ ಸಾಹೇಬಗೌಡ ಹಳಿಮನಿ ಮುಡಬೂಳ (ಕೊಪ್ಪಳ) ಅವರ ಸಿರಿಕಂಠದಲ್ಲಿ ಸಾಗಿ ಬಂದ ಪುರಾಣದಲ್ಲಿ `ಕೇಶಿರಾಜರು ಇಷ್ಟಲಿಂಗ ಪೂಜೆ ಆರಾಧಿಸುತ್ತಿದ್ದರು.ಅವರ ಕಾಲದಲ್ಲಿ ವೀರಶೈವ ಧರ್ಮವನ್ನು ಉತ್ತುಂಗಕ್ಕೇರಿಸಿದವರು. ಅಲ್ಲದೇ, ಅನೇಕ ಕಡೆ ಸತ್ಸಂಗಗಳು ನಡೆಸಿದ್ದರು ಎಂಬುದಕ್ಕೆ ಅನೇಕ ಶಿಲಾಶಾಸನಗಳು, ಹರಿಹರನ ರಗಳೆಯಲ್ಲಿ ಮತ್ತು ಅನೇಕ ಕವಿಗಳು ರಚಿಸಿದ ಕೃತಿಗಳಲ್ಲೂ ಕೇಶಿರಾಜರ ಉಲ್ಲೇಖವಿದೆ. ಅಷ್ಟೇ ಅಲ್ಲ, ಕೇಶಿರಾಜ ಕೂಡ ಆದಿ ಬಣಿಜಗ ಸಮಾಜದವರೆಂಬ ಅಭಿಮತವಿದೆ. ಈ ಕುರಿತು ಹೆಚ್ಚಿನ ಸಂಶೋಧನೆಯಾಗಬೇಕಿದೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಶಿಕ್ಷಣ ಇಲಾಖೆ ಅಧಿಕಾರಿ ಶಿವಗುಂಡಪ್ಪ ಸಿದ್ದಣಗೋಳ, ಹಿರಿಯ ಪತ್ರಕರ್ತ ಗುಂಡೂರಾವ ಕಡಣಿಯವರು ಮಾತನಾಡಿದರು. 

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ವೀರೇಂದ್ರ (ಬಾಪೂಗೌಡ) ಪಾಟೀಲ, ನಿವೃತ್ತ ಸಾರಿಗೆ ನಿಯಂತ್ರಣಾಧಿಕಾರಿ ಶರಣಪ್ಪ ಮೇಳಕುಂದಿ ಉಪಸ್ಥಿತರಿದ್ದರು. ಸಂಗೀತ ಸೇವೆ ಹಾರ್ಮೋನಿಯಂ ಕಲಾವಿದ ಕಲ್ಯಾಣಿ ಗೋಲಗೇರಿ, ತಬಲಾ ಸಾಥ್ ಯಮನೇಶ ನಂದಗಿರಿ ಸಲ್ಲಿಸಿದರು. 

 ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿರುವ ಜೇವರ್ಗಿ ತಾಲೂಕಿನ ಆದಿ ಸಮಾಜದ ಪ್ರಮುಖ ಮುಖಂಡರಾದ ಸೋಮಣ್ಣಗೌಡ ಎಸ್.ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಮಲ್ಲಿನಾಥ ಬಿರಾದಾರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ಸಾಹಿತಿ ಹಬೀಬ್ ಮುಲ್ಲಾ, ಕೇಶಪ್ಪಗೌಡ ಪೊಲೀಸ್ ಪಾಟೀಲ, ಶಂಕರಗೌಡ ಪೊಲೀಸ್ ಪಾಟೀಲ, ಗೌಡಪ್ಪಗೌಡ ಮಾಲಿಪಾಟೀಲ, ಮಹಾಂತೇಶ ಸಾಹುಕಾರ,ಸಿದ್ದಣ್ಣ ಬಿ. ಸಜ್ಜನ್, ಸಿದ್ದಣ್ಣ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.