ಗುರುಪಾದವ ಮುಟ್ಟಿ ಗುರುವಾದಳು ಸಜ್ಜಲಶ್ರೀ ಶರಣಮ್ಮ : ಶಾಮಲಾ ಸ್ವಾಮಿ
ಗುರುಪಾದವ ಮುಟ್ಟಿ ಗುರುವಾದಳು ಸಜ್ಜಲಶ್ರೀ ಶರಣಮ್ಮ : ಶಾಮಲಾ ಸ್ವಾಮಿ
ಕಲಬುರ್ಗಿ ನಗರದ ಪ್ರಶಾಂತ ನಗರ ರಾಜಾಪುರ ದ ಅಮರಕಲಾ ಸ್ಟುಡಿಯೋ ದಲ್ಲಿ ಸಜ್ಜಲಶ್ರೀ ಆಧ್ಯಾತ್ಮಿಕ ಬಳಗದಿಂದ ಎಂಭತ್ತಾರನೇಯ ತ್ರೈಮಾಸಿಕ ಸದ್ಬಾವಚಿಂತನಾಮಾಲಿಕೆಯ ಕಾರ್ಯಕ್ರಮ ಜರುಗಿತು
ಕಲಬುರಗಿ ಸರಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿಯರಾದ ಶ್ರೀಮತಿ ಶ್ಯಾಮಲಾ ಸ್ವಾಮಿ ಅವರು ಸಜ್ಜಲಗುಡ್ಡದ ಶರಣಮ್ಮ ಸಾಮಾನ್ಯ ಮಹಿಳೆಯಾಗಿದ್ದರೂ ಗುರುಪಾದವ' ಮುಟ್ಟಿ ಗುರುವಿನ ಆಜ್ಞೆ ಯನ್ನು ಶಿರಸಾವಹಿಸಿ ತಾನೇ ಗುರುವಾದಳೆಃಬುದನ್ನು
ಭಕ್ತರ ಮನಹೃದಯವರಳುವಂತೆ ಬಹಳ ಸೊಗಸಾಗಿ ತಮ್ಮ ಪ್ರವಚನ ನೀಡಿದರು.
ಕಾರ್ಯಕ್ರಮಧ ದಿವ್ಯ ಸಾನಿಧ್ಯ ವನ್ನು ನಗರದ ಶಿವಶಕ್ತಿಪೀಠದ ಪೂಜ್ಯ ಮಾತೋಶ್ರೀ ಅನ್ನಪೂರ್ಣ ದೇವಿಯವರು ವಹಿಸಿದ್ದರು, ಘನ ಅಧ್ಯಕ್ಷರಾಗಿ ಖ್ಯಾತ ಮಕ್ಕಳ ಕವಿ ಸಾಹಿತಿ ರಾಷ್ಟ್ರಪ್ರಶಸ್ತಿ ವಿಜೇತರಾದ ಶ್ರೀ ಏಕೆ ರಾಮೇಶ್ವರ ವಹಿಸಿದ್ದರು. ಇದೇ ಸಂದಭ೯ದಲ್ಲಿ ಖ್ಯಾತ ವೈದ್ಯರು ಅಮ್ಮನ ಪರಮಭಕ್ತರೂ ಆದ ನಿವೃತ್ತ ಜಿಲ್ಲಾ ಸೂಪರಿಂಟೆಂಡೆಂಟ್ ಮತ್ತು ಸಜ೯ನ್ನರಾದ ಡಾ ಐ.ಬಿ.ಗಾಣಿಗೇರ ಅವರನ್ನು ಬಳಗದವತಿಯಿಃದ ಗೌರವಿಸಲಾಯತು.ಕುಮಾರಿಯರಾದ ವೈಷ್ಣವಿ ಹಿರೇಮಠ ಮೇಘನಾ ಹಿರೇಮಠ ಮತ್ತು ಶ್ರೀಮತಿ ಮಹಾಲಕ್ಷ್ಮಿ ಅವರಿಂದ ಪ್ರಾಥ೯ನೆ ಹಾಗೂ ಭಕ್ತಿ ಸಂಗೀತ ಜರುಗಿತು.ಕಲಬುರ್ಗಿ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಎಸ್. ಮಾಲಿ ಪಾಟೀಲ ಸ್ವಾಗತಿಸಿದರು.ಆಧ್ಯಾತ್ಮಿಕ ಚಿಂತಕರು ಉತ್ತಮ ವಾಗ್ಮಿಗಳಾದ ಶ್ರೀ ಬಾಬುರಾವ್ ಚಿತ್ಕೋಟೀಯವರು ಕಾಯ೯ಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀ ಈಶ್ವರರಾಜ ಗುಂಡಗುತಿ೯ ಹಾಗೂ ಶ್ರೀ ಅಮರಪ್ರಿಯ ಹಿರೇಮಠ ಅಮ್ಮನವರ ಅನುಭಾವ ಹಂಚಿಕೊಂಡರು ಬಂದ ನೂರಾರು ಭಕ್ತರಿಗೆ ಪ್ರಸಾದದ ವ್ವವಸ್ಥೆ ಮಾಡಿದರು.ಶ್ರೀಮತಿ ಮಹಾಲಕ್ಷ್ಮಿ ಮತ್ತು ಶ್ರೀ ಕೆಃಚಬಸವೇಶ ಪಸಾರೆ ದಂಪತಿಗಳು ಇಡೀ ಕಾಯ೯ಕ್ರಮ ಹಾಗೂ ಪ್ರಸಾದವ್ಯವಸ್ಥೆಯ ದಾಸೋಹಿಗಳಾಗಿ ಸೇವೆ ಸಲ್ಲಿಸಿದ್ದರಿಂದ ದಂಪತಿಗಳನ್ನು ಗೌರವಿಸಲಾಯಿತು. ಕಾಯ೯ಕ್ರಮ ದಲ್ಲಿ ಭಾಗಿಯಾಗಿದ್ದ ಶ್ರೀ ಸಿ ಎಸ್. ಮಾಲಿಪಾಟೀಲ ಶ್ರೀ ಷಣ್ಮುಖಪ್ಪ ಹೊಸಮನಿ ಹಾಗೂ ಶ್ರೀ ಸಿದ್ಧೇಶ್ವರ ಪಸಾರ ಅವರನ್ನು ಗೌರವಿಸಲಾಯಿತು ಶ್ರೀ ಚಂದ್ರಶೇಖರ್ ಹಾವೇರಿ ಬಸಲಿಂಗಮಠ ಶ್ರೀ ಸುರೇಶ್ ಶ್ರೀ ಶರಣಬಸವ ಮಠಪತಿ ಶ್ರೀ ಹಾಗರಗಿ ಶ್ರೀ ಶಿವಶರಣಪ್ಪ ಶರಣೆಯರಾದ ಶ್ರೀಮತಿ ಕವಿತಾ ಹಾವೇರಿ ಶ್ರೀ ಮತಿ ಪೂಜಾ ದಯಾನಂದ ಹಿರೇಮಠ. ಶ್ರೀಮತಿ ಸುಜ್ಞಾನಿ.ಶ್ರೀ ಮತಿಭಾರತಿ ರಾಜಣ್ಣ ಶ್ರೀ ಮತಿ ಚಂದ್ರಕಲಾ ಚಿನಮಳ್ಳಿ ಶ್ರೀ ಮತಿ ಸುರೇಖಾ ಶ್ರೀ ಮತಿ ವಾಣಿ ಶ್ರೀ ಮತಿ ಶಾರದಾ ಪಾಟೀಲ್ ಕುಮಾರಿಯರಾದ ಪ್ರಿಯಾ ಮನೋಜ್ಞ ಪ್ರೇಮಾ ಡಿಗ್ಗಿ ಸುಮಾ ತಳಕೇರಿ ಭಾಗ್ಯಶ್ರೀ ಮಾಲಿಪಾಟೇಲ ಹಾಗೂ ಹಿರಿಯ ರಿದ ಜಗದೀಶ್ ಪಾಟೀಲ್ ಸಿದ್ದಣ್ಣ ಹಳಕಟ್ಟಿ ಹೀಗೆ ನೂರಾರು ಭಕ್ತರು ನೆರೆದು ಕಾಯ೯ಕ್ರಮವನ್ನು ಯಶಸ್ವಿಗೊಳಿಸಿದರು.ಶಿವರಾಜ್ ಪಾಟೀಲ್ ವಂದಿಸಿದರು