ಡೋಹರ ಕಕ್ಕಯ್ಯ ಶ್ರೇಷ್ಠ ವಚನಕಾರ: ಸಿ.ಎಸ್.ಮಾಲಿ ಪಾಟೀಲ
ಕಲಬುರಗಿ: ‘ಶಿವಶರಣ ಡೋಹರ ಕಕ್ಕಯ್ಯ ಶ್ರೇಷ್ಠ ವಚನಕಾರ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ .ಎಸ್.ಮಾಲಿ ಪಾಟೀಲ ಅಭಿಪ್ರಾಯಪಟ್ಟರು.
ಜಗತ್ತ ನಗರದ ಡೋಹರ ಕಕ್ಕಯ್ಯ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ದೇವಸ್ಥಾನದ ಕಳಸಾರೋಹಣ, ಶರಣರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿ ಡೋಹರ ಕಕ್ಕಯ್ಯನವರು 12ನೇ ಶತಮಾನದಲ್ಲಿ ಶರಣ ಚಳವಳಿಯಲ್ಲಿ ಭಾಗವಹಿಸಿದ ಗಣಾಚಾರಿ. ಕಲ್ಯಾಣದ ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರ ಜೊತೆಗಿದ್ದು, ಅನುಭಾವ ಸಂಪನ್ನ ಎಂದು ಕರೆಸಿಕೊಂಡವರು. ವಚನ ಚಳವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು. ಬಸವಾದಿ ಶರಣ ಗೌರವಕ್ಕೆ ಪಾತ್ರರಾದವರು. ಅಭಿನವ ಮಲ್ಲಿಕಾರ್ಜುನ ಅಂಕಿತದಲ್ಲಿ ಆರು ವಚನಗಳು ಲಭ್ಯವಾಗಿವೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಡೋಹರ ಕಕ್ಕಯ್ಯ ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಹೋಳ್ಕರ್ ವಹಿಸಿದ್ದರು. ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು, ಮೋತಿಲಾಲ್, ಎಂ.ಕಟಕೆ,ಲಿಂಗೋಜಿ ಗಾಜರೆ, ರಮೇಶ್ ಗಾಜರೆ, ಅನಿಲ್ ಸಾವರ್ಕರ್, ಸೂರ್ಯಕಾಂತ್ ಎಸ್, ಕೃಷ್ಣ ಹೋಳ್ಕರ್, ಅಶೋಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.