ಗುತ್ತಿಗೆ ಏಜೆನ್ಸಿಯಿಂದ ಪೌರ ಕಾರ್ಮಿಕರಿಗೆ ಅನ್ಯಾಯ: ಕ್ರಮಕ್ಕೆ ಜೈಕನ್ನಡಿಗರ ಸೇನೆ ಆಗ್ರಹ
ಗುತ್ತಿಗೆ ಏಜೆನ್ಸಿಯಿಂದ ಪೌರ ಕಾರ್ಮಿಕರಿಗೆ ಅನ್ಯಾಯ: ಕ್ರಮಕ್ಕೆ ಜೈಕನ್ನಡಿಗರ ಸೇನೆ ಆಗ್ರಹ
ಕಲಬುರಗಿ: ಗುತ್ತಿಗೆ ಕಾರ್ಮಿಕರನ್ನು ಶೋಷಣೆ ಮಾಡುತ್ತೀರುವ ಹಾಗೂ ಕಳೆದ ಏಪ್ರೀಲ್ ತಿಂಗಳಿನಿAದ ಇಲ್ಲಿಯವರೆಗೂ ಕಾರ್ಮಿಕರಿಗೆ ನೀಡಬೇಕಾಗಿರುವ 17 ಕೋಟಿರೂ. ಗಳಬಾಕಿಯನ್ನು ಉಳಿಸಿಕೊಂಡಿರುವ ಬೆಂಗಳೂರಿನ ಶ್ರೀ ಗಣೇಶ್ ಶಂಕರ ಎನ್ವಿರಾನ್ಮಂಟಲ್ ಸೋಲ್ಯೂಷನ್ ಪ್ರವೇಟ್ ಲಿಮಿಟೆಡ್ (ಜಿಇಎಸ್‌ಓ) ಕಂಪನಿಯ ವಿರುದ್ಧ ತನಿಖೆಗೆ ಆದೇಶ ನೀಡುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಜೈ ಕನ್ನಡಿಗರ ಸೇನೆ ಕಲಬುರಗಿ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಜೈ ಕನ್ನಡಿಗರ ಸೇನೆ ಕಲಬುರಗಿ ಜಿಲ್ಲಾ ಸಮಿತಿ ನೇತೃತ್ವದ ನಿಯೋಗ ಬೆಂಗಳೂರಿಗೆ ತೆರಳಿ ಸಚಿವರನ್ನು ಭೇಟಿ ಮಾಡಿ ಶ್ರೀ ಗಣೇಶ್ ಶಂಕರ ಎನ್ವಿರಾನ್ನಂಟಲ್ ಸೋಲ್ಯೂಷನ್ ಪ್ರೈವೆಟ್ ಲಿಮಿಟೆಡ್ ಕಂಪನಿ ಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯ ಮತ್ತು ಕಾರ್ಮಿಕರ ಹಣ ಪಾವತಿಗಳನ್ನು ಮತ್ತು ಉದ್ಯೋಗದ ಅಭ್ಯಾಸಗಳಿಗೆ ಸಂಬAಧಿಸಿದAತೆ ಹಣಕಾಸಿನ ದೂರುಉಪಯೋಗ ಮಾಡಿಕೊಂಡಿದ್ದು ಇರುತ್ತದೆ ಎಂದು ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ನೀಡಿದ ದೂರಿನಲ್ಲಿ ಸಚಿವರಿಗೆ ಆರೋಪಿಸಿದ್ದಾರೆ.
ಈ ಸಂಸ್ಥೆ ನಡೆಸಿರುವ ವಹಿವಾಟಿನ ಮಾಹಿತಿಯ ಪ್ರಕಾರ ಗಮನಾರ್ಹ ಬಾಕಿ ಮತ್ತು ರೂ. 54 ಲಕ್ಷ ಮಾತ್ರ ಡಿಸೆಂಬರ್ 2022 ರಿಂದ ಕಾರ್ಮಿಕರ ವೇತನ ಬಾಕಿ ಉಳಿದಿದೆ. ಹೆಚ್ಚುವರಿಯಾಗಿ ಬಾಕಿ ಉಳಿದಿರುವ ಪಾವತಿಗಳು ಅಥವಾ ಫೆಬ್ರವರಿ ವೇತನಗಳು ಮತ್ತು ಏರಿಕೆಗಳು ಅಗಸ್ಟ್ 2022 ರಂದು 2023 ರವರೆಗೆ ವ್ಯಾಪಿಸಿದೆ. ಡ್ರೈವರ್ ಲೋಡರ್ ಕ್ಲೀನರ್ ಕಾರ್ಮಿಕ ವೇತನ ಹೆಚ್ಚಳ ರೂ. 32 ಲಕ್ಷ ಮಾತ್ರ ಮತ್ತು. ಕಾರ್ಮಿಕ ವೇತನ ಮೇಲೆ ಪೌರಕಾರ್ಮಿಕರ ರೂ. 16 ಲಕ್ಷ ರೂ ಗಳು ಮಾತ್ರ ಕೊನೆಗೊಳ್ಳುವ ಮೊತ್ತದ ಒಟ್ಟು ರೂ.1,02 ಕೋಟಿಗಳನ್ನು ಅರ್ಹ ಕಾರ್ಮಿಕರಿಗೆ ವಿತರಿಸಿರುವುದಿಲ್ಲ ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಇದಲ್ಲದೇ ರೂ.2000-00ಗಳನ್ನು ಕಡಿತಗೊಳಿಸುವ ಗೊಂದಲದ ಪರಿಪಾಠವುಂದು ಬೆಳಕಿಗೆ ಬಂದಿದೆ. ಕಾರ್ಮಿಕರ ಸಂಬಳದಿAದ ಹಣವನ್ನು ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ ಕಷ್ಟಪಟ್ಟು ದುಡಿಯುವ ಕಾರ್ಮಿಕರು ಎದುರಿಸುತ್ತಿರುವ ಆರ್ತಿಕ ಹೊರೆಯನ್ನು ಉಲ್ಬಣಗೊಳಿಸಲಾಗಿರುತ್ತಿದೆ. ಅಲ್ಲದೇ ಕಾರ್ಮಿಕರ ಮೇಲೆ ನಡೆಸಲಾಗುವ ಶೋಷಣೆ ನಡೆಯುತ್ತಿದೆ. ಆದರೆ ಉದ್ಯೋಗವಾಕಾಶಗಳಿಗಾಗಿ ಪ್ರತಿ ಮಹಿಳಾ ಕಾರ್ಮಿಕರಿಂದ ಅಕ್ರಮವಾಗಿ 50 ಸಾವಿರ ರೂ. ಗಳನ್ನು ಸಂಗ್ರಹಿಸಿರುತ್ತಾರೆ.
ಈ ಅಕ್ರಮದಲ್ಲಿ ತೊಡಗಿರುವ ವ್ಯಕ್ತಿಗಳು ಗಣೇಶ್, ಸಲೀಪಾಷಾ, ಶರಣು ಮೇಲ್ವಿಚಾರಕರು ಇವರೆಲ್ಲರ ವಿರುದ್ದವೂ ಕ್ರಮ ಕೈಗೊಳ್ಳುವಂತೆ ಭಾಸಗಿ ಅವರು ಒತ್ತಾಯಿಸಿದ್ದಾರೆ. ಬಡ ಮತ್ತು ಅನಕ್ಷರಸ್ಥ ಕಾರ್ಮಿಕರ ಶೋಷಣೆ ನಡೆಸಲಾಗುತ್ತಿದ್ದರೂ, ಅಧಿಕಾರಿಗಳು ಗುತ್ತಿಗೆದಾರರಿಂದ ಲಾಭ ಪಡೆಯುತ್ತಿರುವುದು ತೀವ್ರ ಕಳವಳಕಾರಿಯಾಗಿದೆ.
ಈ ಆರೋಪಗಳ ಬಗ್ಗೆ ಕುಲಂಕುಷ ತನಿಖೆ ನಡೆಸಿ ನ್ಯಾಯ ಒದಗಿಸಿ ಕರ್ಮಿಕ ಹಕ್ಕುಗಳನ್ನು ರಕ್ಷಿಸಬೇಕೆಂದು ಸಚಿವರಿಗೆ ಅವರು ಮನವಿ ಮಾಡಿದ್ದಾರೆ. ಅಕ್ರಮದಲ್ಲಿ ತೊಡಗಿರುವ ಈ ಏಜೆನ್ಸಿಯ ಮಾಲಿಕನಾದ ಶ್ರೀ ಗಣೇಶ ಶಂಕರ ಅವರು, ಕಾರ್ಮಿಕರ ಪಿ.ಎಫ್.ಹಣ ಕೂಡಾ ಸರಿಯಾಗಿ ಸಂದಾಯ ಮಾಡಿರುವುದಿಲ್ಲ,
ಕಾರ್ಮಿಕರಿಗೆ ಪ್ರತಿತಿಂಗಳು ಸರಿಯಾದ ಸಂಬಳ ಕೂಡಾ ನೀಡುತ್ತಿರುವದಿಲ್ಲ ಆದರೂ ಅವರೊಂದಿಗೆ ಅಧಿಕಾರಿಗಳು ಶಾಮಿಲಾಗಿ ಅವ್ಯವಹಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಅವರ ವಿರುದ್ಧವೂ ಕ್ರಮ ಜರುಗಿಸುಬೇಕು, ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಹಾಗು ಭಾಕಿಯನ್ನು ಪಾವತಿಸಲು ಕ್ರಮ ಜರುಗಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.