ದೆಹಲಿ ಗದ್ದುಗೆ ಏರಿದ ಬಿಜೆಪಿ, ಸಂಭ್ರಮಿಸಿದ ಕಾರ್ಯಕರ್ತರು

ದೆಹಲಿ ಗದ್ದುಗೆ ಏರಿದ ಬಿಜೆಪಿ, ಸಂಭ್ರಮಿಸಿದ ಕಾರ್ಯಕರ್ತರು 

ಚಿಂಚೋಳಿ : ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಆಚರಣೆ 

ಚಿಂಚೋಳಿ : 27 ವರ್ಷದ ಬಳಿಕ ಬಿಜೆಪಿ ಕೇಂದ್ರಾಡಳಿತ ಪ್ರದೇಶ ದೆಹಲಿ ವಿಧಾನಸಭೆ ಗದ್ದುಗೆ ಏರುತ್ತಿರುವ ಹಿನ್ನಲೆಯಲ್ಲಿ ಚಿಂಚೋಳಿ ಪಟ್ಟಣದಲ್ಲಿ ಬಿಜೆಪಿ ಮುಖಂಡ ಸಂತೋಷ ಗಡಂತಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ವಿಜ್ಯೋತ್ಸವ ಆಚರಿಸಿದರು. 

ಈ ವಿಜ್ಯೋತ್ಸವದಲ್ಲಿ ಮುಖಂಡರಾದ ರಾಜಶೇಖರ ಮಜ್ಜಗಿ, ನಾಗರಾಜ ಮಲಕೋಡ್, ಮಧುಕರ್, ರವಿ ಹೊಸಭಾವಿ,ಸಂಗಮೇಶ ಹುಲಿ, ನಾರಾಯಣರಾವ ಹುಡಗಿ, ಅಮರ ಬಬಲಾದ, ಕಾಶಪ್ಪ, ಶಂಕ್ರಯ್ಯ ಸ್ವಾಮಿ, ರಾಜು ಕುಕಡಿ, ಮಹಾದೇವ, ಹಣಮಂತ,ಅಂಬಾಜಿ, ರಾಜು ಅವರು ಪಾಲ್ಗೊಂಡಿದರು.