ಆದರ್ಶ ಭೀಮ ಪ್ರಶಸ್ತಿ ಪ್ರಧಾನ ಸಮಾರಂಭ :

ಆದರ್ಶ ಭೀಮ ಪ್ರಶಸ್ತಿ ಪ್ರಧಾನ ಸಮಾರಂಭ :
ಶಹಾಬಾದ : - ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವದ ಅಂಗವಾಗಿ ಸಮಗ್ರ ಕರ್ನಾಟಕ ಉಪಾಧ್ಯಯರ ಪ್ರಗತಿಪರ ಸಂಘದ (ಸ್ಕೂಪ್ಸ) ವತಿಯಿಂದ 'ಅಂಬೇಡ್ಕರ ರವರ ಪ್ರಬುದ್ದ ಭಾರತ ಮತ್ತು ಮಹಿಳೆ' ವಿಚಾರ ಸಂಕಿರಣ ದ ಜೊತೆ 'ಆದರ್ಶ ಭೀಮ ಪ್ರಶಸ್ತಿ ಪ್ರಧಾನ ಸಮಾರಂಭ' ಏ. 11 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸ್ಕೂಪ್ಸ ತಾಲ್ಲೂಕ ಅಧ್ಯಕ್ಷರಾದ ವಿಜಯಲಕ್ಷ್ಮಿ ಪಾಟೀಲ ತಿಳಿಸಿದರು.
ಅವರು ಮಾದ್ಯಮದವರ ಜೊತೆ ಮಾತನಾಡಿ, ಶುಕ್ರವಾರ ದಂದು ಬೆಳಗ್ಗೆ 10:30 ಕ್ಕೆ ನಗರದ ಎಸ. ಎಸ ಮರಗೋಳ ಕಾಲೇಜಿನ ಸಭಾಂಗಣದಲ್ಲಿ ಜರುಗುವದು ಎಂದರು.
ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ ಯವರು ಸಮಾರಂಭವನ್ನು ಉದ್ಘಾಟಿಸುವರು, ಅಧ್ಯಕ್ಷತೆ ವಿಜಯಲಕ್ಷ್ಮಿ ಪಾಟೀಲ ವಹಿಸುವರು, ಡಾ. ಕರಿಗೂಳೇಶ್ವರ ರವರು ವಿಶೇಷ ಉಪನ್ಯಾಸ ನೀಡುವರು,
ಮುಖ್ಯ ಅತಿಥಿಗಳಾಗಿ ನಗರ ಸಭೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ, ತಾಲ್ಲೂಕ ತಹಶೀಲ್ದಾರ್ ಜಗದೀಶ ಚೌರ, ತಾ. ಪಂ. ಇಒ ಮಲ್ಲಿನಾಥ ರಾವೂರ, ಪೌರಾಯುಕ್ತ ಡಾ. ಗುರುಲಿಂಗಪ್ಪ, ಬಿಇಒ ಶಶಿಧರ ಬಿರಾದಾರ, ನಗರ ಪೊಲೀಸ್ ಠಾಣೆಯ ಪಿಐ ನಟರಾಜ ಲಾಡೆ ಉಪಸ್ಥಿತರಿರುವರು ಎಂದರು.
ಅಥಿತಿಗಳಾಗಿ ನರೇಂದ್ರ ವರ್ಮ, ಪ್ರೋ. ಕೆಬಿ ಬಿಲ್ಲವ, ಸುರೇಶ ಮೆಂಗನ, ಶಂಕರ ಅಳೋಳ್ಳಿ, ಶಿವಶರಣಪ್ಪ ಮಂಠಾಳೆ, ಶಿವಪುತ್ರ ಕರಣಿಕ, ಡಾ. ಚಿದಾನಂದ ಕುಡ್ಡನ, ಸಂತೋಷ ಸಲಗರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರಣ ತಾಲ್ಲೂಕಿನ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿರಬೇಕೆಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಹಣಮಂತರಾಯ ಬಿರಾದಾರ, ಅಂಬಿಕಾ ಹಂಗರಗಿ, ಗಣೇಶ ಜಾಯಿ ಇದ್ದರು.