ಮಕ್ಕಳ ಅಣಕು ವಿಧಾನಸಭಾ ಅಧಿವೇಶನ : ರಾವೂರ ಮಕ್ಕಳ ವಿಶಿಷ್ಟ ಪ್ರಯೋಗ.

ಮಕ್ಕಳ ಅಣಕು ವಿಧಾನಸಭಾ ಅಧಿವೇಶನ : ರಾವೂರ ಮಕ್ಕಳ ವಿಶಿಷ್ಟ ಪ್ರಯೋಗ.

ಮಕ್ಕಳ ಅಣಕು ವಿಧಾನಸಭಾ ಅಧಿವೇಶನ : ರಾವೂರ ಮಕ್ಕಳ ವಿಶಿಷ್ಟ ಪ್ರಯೋಗ.

ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ಮಕ್ಕಳ ಅಣಕು ವಿಧಾನಸಭಾ ಅಧಿವೇಶನ ನಡೆಯಿತು. ರಾಜಕಾರಣಿಗಳ ವೇಷಗಳನ್ನು ತೊಟ್ಟು ಸದನದಲ್ಲಿ ಸಭಾಪತಿಯಾಗಿ, ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ಶಾಸಕರಾಗಿ, ಸಚಿವರಾಗಿ ನೈಜ ಕಲಾಪದಲ್ಲಿ ಚರ್ಚೆ ನಡೆಯುವ ರೀತಿಯಲ್ಲಿ ಮಕ್ಕಳು ಪ್ರಚಲಿತ ವಿಷಯಗಳನ್ನಿಟ್ಟುಕೊಂಡು ಪ್ರಶ್ನೆ ಉತ್ತರಗಳ ಮೂಲಕ ಚರ್ಚೆ ನಡೆಸಿ ಸೈ ಎನಿಸಿಕೊಂಡರು. ಪಾಠದಲ್ಲಿ ಬರುವ ಕಲಿಕಾoಶವನ್ನು ಪ್ರಾತ್ಯಕ್ಷಿಕವಾಗಿ ಮಾಡುವ ಮೂಲಕ ಪರಿಣಾಮಕಾರಿ ಕಲಿಕೆ ಉಂಟುಮಾಡಲು ಸಾಧ್ಯವೆಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಅವರು ರಾವೂರ ಸಸಿಗೆ ನಿರುಣಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಕ್ಕಳಲ್ಲಿ ಸೂಕ್ತ ಪ್ರತಿಭೆಯಿದೆ ಅದನ್ನು ಗುರುತಿಸಿ ಪ್ರೋತ್ಸಾಹಿ ಅವಕಾಶಗಳನ್ನು ಕೊಡುವ ಕೆಲಸ ಶಿಕ್ಷಕರಾದವರು ಬಹಳ ಪ್ರಾಮಾಣಿಕವಾಗಿ ಮಾಡಬೇಕು ಎಂದು ಹೇಳಿದರು.

ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ, ಸಭಾತ್ಯಾಗ, ಸದನ ಮುಂದೂಡಿಕೆ, ಮಸೂದೆ ಮಂಡನೆ ಹೀಗೆ ಕಲಾಪದ ಎಲ್ಲಾ ಪ್ರಕ್ರಿಯೆಗಳನ್ನು ನಡೆಸುವ ಮೂಲಕ ಮಕ್ಕಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಅತಿಥಿಗಳ ಹುಬ್ಬೆರುವಂತೆ ಮಾಡಿದರು.

ವೇದಿಕೆಯ ಮೇಲೆ ಅತಿಥಿಗಳಾಗಿದ್ದ ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ, ಚಿದಾನಂದ ಕುಡನ್, ಪ್ರಾಚಾರ್ಯ ಕಾಂತಪ್ಪ ಬಡಿಗೇರ್ ಮಾತನಾಡಿದರು.

ಸಭಾಪತಿಯಾಗಿ ಅರಬಿಯಾ, ಮುಖ್ಯಮಂತ್ರಿಯಾಗಿ ಅಕ್ಷತಾ, ಸಚಿವರಾಗಿ, ಶಾಸಕರಾಗಿ ಅಂಬಿಕಾ, ಪ್ರಜ್ವಲ್, ಮಹೇಶ್, ಶಂಕರ್, ಸುಮಯ್ಯ, ಉಲ್ಲಾಸ್, ಅರ್ಚನಾ, ಮನೋಜ್, ಅಪ್ಸ, ಭಾಗ್ಯಶ್ರೀ, ಗಮನಸೆಳೆದರು.

ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದು ಪ್ರೋತ್ಸಾಹಿಸಿದರು.

ಸಿದ್ದಲಿಂಗ ಬಾಳಿ (ಕಾರ್ಯಕ್ರಮ ಸಂಯೋಜಕರು ) : ಪಾಠದ ಅಂಶಗಳನ್ನು ಮನದಟ್ಟು ಮಾಡಲು ಮತ್ತು ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಲು ಇಂತಹ ಪ್ರಯತ್ನವನ್ನು ಆಡಳಿತ ಮಂಡಳಿಯ ಹಾಗೂ ನಮ್ಮೇಲ್ಲಾ ಶಿಕ್ಷಕರ ಸಹಕಾರದಿಂದ ಮಾಡಿ ಯಶಸ್ವಿಯಾಗಿದ್ದೇವೆ ಮಕ್ಕಳೆಲ್ಲರೂ ಉತ್ತಮ ಪ್ರದರ್ಶನ ತೋರಿದರು.

ಅರ್ಚನಾ ( ವಿರೋಧ ಪಕ್ಷದ ಶಾಸಕಿ ): ನಮ್ಮ ಶಿಕ್ಷಕರು ಕಳೆದ ಒಂದು ವಾರದಿಂದ ನಿರಂತರವಾಗಿ ನಮ್ಮನ್ನು ಅಧಿವೇಶನಕ್ಕೆ ತಯಾರು ಮಾಡಿದ್ದಾರೆ. ನಿಜಕ್ಕೂ ಇಂತಹ ಪ್ರಯತ್ನಗಳಿಂದ ನಮ್ಮಲ್ಲಿ ಧೈರ್ಯ ಬಂದಿದೆ. ಅಧಿವೇಶನಗಳು ಹೇಗೆ ನಡೆಯುತ್ತವೆ ಎಂಬ ಅರಿವು ಮೂಡಿದೆ.