ಕಲಬುರಗಿ: ಕನ್ನಡ ಸಂಘಟನಾ ವೇದಿಕೆಯ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ
ಕಲಬುರಗಿ: ಕನ್ನಡ ಸಂಘಟನಾ ವೇದಿಕೆಯ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ
ಕಲಬುರಗಿ ನಗರದ ಎಸ್.ಎಂ. ಪಂಡಿತ್ ರಂಗ ಮಂದಿರದಲ್ಲಿ ಕರ್ನಾಟಕ ಸಂಘಟನಾ ವೇದಿಕೆ ಕಲಬುರಗಿ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭವ್ಯವಾದ ಕನ್ನಡ ಹಬ್ಬ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಕಲ್ಯಾಣ ನಾಡಿನ ಖ್ಯಾತ ಸಂಗೀತ ಕಲಾವಿದ ದಂಪತಿಗಳಾದ ಶ್ರೀಮತಿ ಅಶ್ವಿನಿ ರಾಜಕುಮಾರ್ ಹಿರೇಮಠ ಅವರಿಗೆ 70ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕನ್ನಡ ಸಂಗೀತ ಕ್ಷೇತ್ರದಲ್ಲಿ ನೀಡಿದ ಗಣನೀಯ ಕೊಡುಗೆಗೆ ವೇದಿಕೆಯ ವತಿಯಿಂದ ಈ ಗೌರವ ಸಲ್ಲಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಇಂದು ನಾಗರಾಜ್, ಚಲನಚಿತ್ರ ಧಾರಾವಾಹಿ ನಟ ತ್ರಿವಿಕ್ರಂ, ಸಂಘಟನಾ ರಾಜ್ಯಾಧ್ಯಕ್ಷ ಗುರು ಬಂಡಿ, ಜಿಲ್ಲಾ ಅಧ್ಯಕ್ಷ ಈಶ್ವರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಂಸ್ಕೃತಿಕ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡದ ನಾಡು-ನುಡಿ, ಸಂಸ್ಕೃತಿ ಮತ್ತು ಸಂಗೀತದ ಮಹತ್ವವನ್ನು ಸ್ಮರಿಸಲಾಯಿತು.
