ಗಣಜಲಖೇಡ ಗ್ರಾಮದಲ್ಲಿ 24X7 ಕುಡಿಯುವ ನೀರು ಪೂರೈಕೆಗೆ ಚಾಲನೆ

ಗಣಜಲಖೇಡ ಗ್ರಾಮದಲ್ಲಿ 24X7 ಕುಡಿಯುವ ನೀರು ಪೂರೈಕೆಗೆ ಚಾಲನೆ

ಗಣಜಲಖೇಡ ಗ್ರಾಮದಲ್ಲಿ 24X7 ಕುಡಿಯುವ ನೀರು ಪೂರೈಕೆಗೆ ಚಾಲನೆ 

ಕಲಬುರಗಿ: ಕುಮಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣಜಲಖೆಡ್ ಗ್ರಾಮವು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ವಿಶ್ವ ಬ್ಯಾಂಕ, ಹಾಗೂ ಫಿಡ ಬ್ಯಾಕ ಫೌಂಡೇಶನ್ ಜಂಟಿ ಸಹಯೋಗದಲ್ಲಿ ಗಣಜಲ ಖೇಡ ಗ್ರಾಮವನ್ನು ಕುಡಿಯುವ ನೀರು ವಾರದ 24 ಗಂಟೆ ನೀರು ಸರಬರಾಜು ಗ್ರಾಮ ಎಂದು ಘೋಷಣೆ ಮಾಡಲು ಸಿದ್ಧಪಡಿಸಿ ದಿನಾಂಕ 12.11.2024 ರಂದು ಗಣಜಲಖೆಡ ಕಾರ್ಯಕ್ರಮ ದಲ್ಲಿ ಘೋಷಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕೆ ದಿವ್ಯ ಸಾನಿಧ್ಯ ಶ್ರೀ ಮ.ನೀ.ಪ್ರ.ಗುರುಪದಲಿಂಗ ಮಹಾಶಿವಯೋಗಿಗಳು, ಶ್ರೀ ಷ.ಬ್ರ.ಡಾ.ರೇವಣಸಿದ್ಧ ಶಿವಾಚಾರ್ಯರು.

ಕಾರ್ಯಕ್ರಮವು ನಾಡ ಗೀತೆಯೊಂದಿಗೆ ಕಾರ್ಯಕ್ರಮ ಜರಗಿತು ,ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಪಾಟೀಲ ಸ್ವಾಗತಿಸಿದರು ‌

ಕಲಬುರಗಿ ಗ್ರಾಮೀಣ ಮತ ಕೇತ್ರದ ಶಾಸಕ ಬಸವರಾಜ ಮತ್ತಿಮಡು ನಳಕ್ಕೆ ಪೂಜೆ ಸಲ್ಲಿಸಿಉದ್ಘಾಟಿಸಿದರು.

 ನಂದಕುಮಾರ ರಾಜ್ಯ ಯೋಜನಾ ಸಮನ್ವಯಾಧಿಕಾರಿ ಫೀಡ ಬ್ಯಾಕ ಫೌಂಡೇಶನ್ (ವಿಶ್ವ ಬ್ಯಾಂಕ್) ಪ್ರಾಸ್ತಾವಿಕ ಮಾತನಾಡುತಾ 24X7 ನೀರು ಸರಬರಾಜಿನ ಉದ್ದೇಶ ಏನೆಂದರೆ 100% ಕರ್ಯಾತ್ಮಕ ಮನೆ ನಳ ಸಂಪರ್ಕ, ಪ್ರತಿ ದಿನಕೆ ಕನಿಷ್ಟ 55 ಲೀಟರ್ ನೀರು ಪೂರೈಕೆ, ದೈನಂದಿನ ಕ್ಲೋರಿನೇಶನ, ಕನಿಷ್ಟ 3 ಮೀಟರ್ ಲಂಬವಾಗಿ ನೀರು. ತಲುಪುವಿಕೆ, ನಿರ್ವಹಣಾ ವೆಚ್ಚವನ್ನು ಪೂರೈಸಲು ಮಾಸಿಕ ಶುಲ್ಕ, ನೀರು ನಿರ್ವಹಿಸಲು ಸ್ಥಳೀಯ ಸ್ವ ಸಹಾಯ ಸಂಘಗಳ ಬಳಕೆ, ಪಂಚಮಿತ್ರ ಬಳಕೆ ಹಾಗೂ ಪಂಚಾಯತ್ ಮತ್ತು ಗ್ರಾಮ ನೀರೂ ಮತ್ತು ನೈರ್ಮಲ್ಯ ಸಮಿತಿಯವರಿಗೆ ಬಲವರ್ಧನೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶ್ರೀ ಧನರರಾಜ ಲದ್ದೆ ಕಾರ್ಯಪಾಲಕ ಅಭಿಯಂತರರು 24X 7ನಿರಂತರವಾಗಿ ಸರಬರಾಜು ವ್ಯವಸ್ಥೆಯ ಉಸ್ತುವಾರಿ ಮತ್ತು ನಿರ್ವಹಣೆ ಮಾಡಿಕೊಳ್ಳಲು ಕರೆ ನೀಡಿದರು. 

 ಮಲ್ಲಿಕಾರ್ಜುನ್ ವಂದಿಸಿದರು, ಕೊನೆಗೆ ರಾಷ್ಟ್ರ ಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿೃದ್ಧಿ ಅಧಿಕಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು,

ಸಂಜಯ್ ಸಿಂಗ್ ಶುಕ್ಲಾ, ಡಾ. ನಂದಕುಮಾರ, ಓಂಕಾರ, ರವಿಚಂದ್ರ, ಮಂಜು ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು.