ಕಲಬುರಗಿ ಕನ್ನಡ ರಾಜ್ಯೋತ್ಸವ

ಕಲಬುರಗಿ ಕನ್ನಡ ರಾಜ್ಯೋತ್ಸವ

ಕಲಬುರಗಿ ಕನ್ನಡ ರಾಜ್ಯೋತ್ಸವ 

ಕಲಬುರಗಿ: ನಗರದ ಹ್ಯಾಪಿ ಫಂಕ್ಷನ್ ಹಾಲ್‌ನಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಕನ್ನಡಂ ಗೆಲ್ಗೆ ಕನ್ನಡಂ ಬಾಳ್ಗೆ" ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ್ ಮಹಿಳಾ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಎಂ ಬಿ ನಿಂಗಪ್ಪ, ಸೋಮನಾಥ ದೇವರಮನಿ ರೇವಗ್ಗಿ ( ರಟಕಲ್ ಗುಡ್ಡ ), ನಾಗಭೂಷಣ್ ಅಗಸ್ತ್ಯತೀರ್ಥ, ರೇವಮ್ಮ ಸಿಂದಗಿ, ಶರಣಮ್ಮ ಮದುರಿ, ಸಿದ್ದಮ್ಮ ಟೆಂಗ್ಲಿ, ಮುರಿಗೆಪ್ಪ ತೋರಿವಾಡಿ, ಸರಸ್ವತಿ ನಾಯರ್, ಶ್ರೀದೇವಿ ಖಾನಾಪುರ್, ಶ್ರೀಮಂತ ವಟವಟಿ, ಶಿವಲಿಂಗಪ್ಪ ಹೂಗಾರ್, ಮನಮೋಹನ್ ಸಾಗರ, ಅಭಯ್ ಪ್ರಕಾಶ್, ಮಲ್ಲಿಕಾರ್ಜುನ್ ಸೇರಿದಂತೆ ಮತಿತರು ಉಪಸ್ಥಿತರಿದ್ದರು.