ಹಿಂದುಗಳ ರಕ್ಷಣೆಗಾಗಿ ಲಿಂಗರಾಜ್ ಅಪ್ಪ ಸರ್ಕಾರಕ್ಕೆ ಒತ್ತಾಯ

ಹಿಂದುಗಳ ರಕ್ಷಣೆಗಾಗಿ ಲಿಂಗರಾಜ್ ಅಪ್ಪ ಸರ್ಕಾರಕ್ಕೆ ಒತ್ತಾಯ

ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತದ ಅಧ್ಯಕ್ಷ ಶ್ರೀಯುತ ಲಿಂಗರಾಜ ಅಪ್ಪಾ ಸರಕಾರಕ್ಕೆ ಒತ್ತಾಯ

ಹಿಂದೂಗಳ ರಕ್ಷಣೆಗೆ ಒತ್ತಾಯ

ಕಲಬುರಗಿ: ನೆರೆಯ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ದಾರಿತಪ್ಪಿದ್ದರಿಂದ ಅಲ್ಲಿಯ ಅರಾಜಕತಾವಾದಿಗಳು ಬಾಂಗ್ಲಾ ಅಲ್ಪಸಂಖ್ಯಾತರ ಮೇಲೆ ದಿನದಿಂದ ದಿನಕ್ಕೆ ಕಿರುಕುಳ ಹೆಚ್ಚಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಅಲ್ಲಿನ ಹಿಂದೂಗಳ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತದ ಅಧ್ಯಕ್ಷ ಲಿಂಗರಾಜ ಅಪ್ಪಾ ಆಗ್ರಹಿಸಿದರು.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸೆಯಿಂದ ಅಲ್ಲಿಯ ಚುನಾಯಿತ ಪ್ರಧಾನಿ ದೇಶವನ್ನು ತೊರೆದಿದ್ದು, ಅರಾಜಕತೆ ತಾಂಡವಾಡುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರೀಯವಾಗಿದೆ. ಈ ಗೊಂದಲಮಯ ವಾತಾವರಣದಲ್ಲಿ ಅಲ್ಲಿನ ತೀವ್ರಗಾಮಿ ಜಿಹಾದಿ ಶಕ್ತಿಗಳು ಹಿಂದೂ ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ಕಿರುಕುಳ ನೀಡುತ್ತಿದೆ ಎಂದು ಹೇಳಿದರು.

ಬಾಂಗ್ಲಾ ದೇಶದಲ್ಲಿನ ಹಲವು ಧಾರ್ಮಿಕ ಸ್ಥಳಗಳು, ವ್ಯಾಪಾರ ಸಂಸ್ಥೆಗಳು ಸೇರಿದಂತೆ ಹಿಂದೂ ಅಲ್ಪಸಂಖ್ಯಾತರ ಮನೆಗಳಿಗೆ ಹಾನಿಯುಂಟು ಮಾಡಲಾಗುತ್ತಿದ್ದು, ಬಾಂಗ್ಲಾದ ಪ್ರತಿ ಜಿಲ್ಲೆಯಲ್ಲಿ ಈ ರೀತಿಯ ಭೀಕರ ಕೃತ್ಯಗಳು ನಡೆದಿದ್ದು, ಕೂಡಲೇ ಕೇಂದ್ರ ಸರ್ಕಾರ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಕೆಟ್ಟಿದ್ದರಿಂದ ಅಲ್ಲಿನ ವಾತಾವರಣ ಹದಗೆಡುತ್ತಿದೆ. ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿ ಪರಿಣಮಿಸಿದೆ.ಹೀಗಾಗಿ ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಗಾಗಿ ಮತ್ತು ಅವರ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದ್ದು, ಭಾರತ ಸರ್ಕಾರ ಕುರುಡರಂತೆ ಇರಬಾರದು ಎಂದು ಆಗ್ರಹಿಸಿದರು.

 ಶಿವಕುಮಾರ್ ಬೋಳಶೆಟ್ಟಿ, ಶ್ರೀಮಂತ ನವಲದಿ, ಪ್ರಶಾಂತ್ ಗುಡ್ಡಾ, ಸತೀಶ್ ಮಾವುರ್ ಇದ್ದರು.