ಗ್ರಾಹಕರ ಜಾಗೃತಿ - ಕೇವಲ ಸ್ಮಾರ್ಟ್ ಶಾಪರ್ ಆಗಿರುವುದು ಅಲ್ಲ. - ಶ್ರೀ ಲಕ್ಷೇಶ್ವರಮಠ ಅಭಿಮತ

ಗ್ರಾಹಕರ ಜಾಗೃತಿ - ಕೇವಲ ಸ್ಮಾರ್ಟ್ ಶಾಪರ್ ಆಗಿರುವುದು ಅಲ್ಲ. - ಶ್ರೀ ಲಕ್ಷೇಶ್ವರಮಠ ಅಭಿಮತ

ಗ್ರಾಹಕರ ಜಾಗೃತಿ - ಕೇವಲ ಸ್ಮಾರ್ಟ್ ಶಾಪರ್ ಆಗಿರುವುದು ಅಲ್ಲ. - ಶ್ರೀ ಲಕ್ಷೇಶ್ವರಮಠ

ಕಲಬುರಗಿ: ದಿನಾಂಕ ೦೮.೦೮.೨೦೨೪ ರಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೋಸ್ಕರ "ಗ್ರಾಹಕರ ಜಾಗೃತಿ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಲಾಗಿತ್ತು.

ಸದರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗದಗನ ಜಿಲ್ಲಾ ಗ್ರಾಹಕ ನ್ಯಾಯಾಲಯದ ನಿವೃತ್ತ ಸದಸ್ಯರಾದ ಶ್ರೀ ಎಫ್ ಪಿ ಲಕ್ಷೇಶ್ವರಮಠ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾವಿದ್ಯಾಲಯದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರಲ್ಲಿ ಗ್ರಾಹಕರ ಜಾಗೃತಿಯ ಜ್ಞಾನವನ್ನು ಮೂಡಿಸಿದರು.

  ಶ್ರೀ. ಲಕ್ಷೇಶ್ವರಮಠ ಅವರು ಮಾತನಾಡುತ್ತಾ ಗ್ರಾಹಕರ ಜಾಗೃತಿ ಎಂದರೆ ಕೇವಲ ಸ್ಮಾರ್ಟ್ ಶಾಪರ್ ಆಗಿರುವುದು ಅಲ್ಲ. ಗ್ರಾಹಕರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ನಾಗರಿಕರಲ್ಲಿ ಅರಿವಿನ ಕೊರತೆಯಿದೆ. ಗ್ರಾಹಕ ಸಂರಕ್ಷಣಾ ಕಾಯಿದೆ, 1986ರ ಬಗ್ಗೆ ಗ್ರಾಹಕರನ್ನು ಜಾಗೃತಗೊಳಿಸುವ ಉಪನ್ಯಾಸ ಹಾಗೂ ಅಭಿಯಾನಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು. ಗ್ರಾಹಕರ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಅರಿವಿನ ಕೊರತೆಯು ಸೇವಾ ಪೂರೈಕೆದಾರರು ಮೋಸದ ಗ್ರಾಹಕರನ್ನು ಶೋಷಿಸಲು ಸಹಾಯ ಮಾಡಿದೆ. ಪ್ರತಿಯೊಬ್ಬ ಪ್ರಜೆಯೂ ಗ್ರಾಹಕರೇ ಆದರೆ ಅವರಲ್ಲಿ ಕೆಲವರು ಮಾತ್ರ ಕಾಯ್ದೆಯ ಉಲ್ಲಂಘನೆಯನ್ನು ಪ್ರಶ್ನಿಸುತ್ತಾರೆ ಎಂದು ಹೇಳಿದರು. ಗ್ರಾಹಕರಲ್ಲಿ ಶೇ.0.1ರಷ್ಟು ಜಾಗೃತಿಯೂ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಗ್ರಾಹಕರ ಹಕ್ಕುಗಳ ಬಗ್ಗೆ ಅಸಡ್ಡೆ ತೋರುತ್ತವೆ, ಇದು ಕಾಯ್ದೆಯ ತಿದ್ದುಪಡಿಯನ್ನು ಚರ್ಚಿಸಲು ಅವರ ಇಷ್ಟವಿಲ್ಲದಿರುವಿಕೆಯಲ್ಲಿ ಪ್ರತಿಫಲಿಸುತ್ತದೆ ಎಂದು ಮಾತನಾಡಿದರು.

  ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ. ಬಸವರಾಜ ಗೋಣಿ , ಶ್ರೀಮತಿ. ಕಾಶೀಬಾಯಿ, ಶ್ರೀಮತಿ ಶೈಲಜಾ ನಾಕೇದಾರ, ಶ್ರೀಮತಿ ಸಂತೋಷಿ ಕೆ, ಶ್ರೀಮತಿ. ರಷ್ಮೀ ಅಂಟೂರಮಠ, ಶ್ರೀಮತಿ ಪ್ರೀಯಾ ನಿಗ್ಗುಡಗಿ, ಶ್ರೀಮತಿ ಕನ್ಯಕುಮಾರಿ ಮತ್ತು ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ಗೋಣಿ ಬಸವರಾಜ ಸ್ವಾಗತಿಸಿದರು, ಶಿಕ್ಷಣ ವಿಭಾಗದ ಉಪನ್ಯಾಸಕರಾದ ಶ್ರೀಮತಿ.ಕಾಶೀಬಾಯಿ ಬೋಗಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಕನ್ಯಾಕುಮಾರಿ ಗಂಧಿಗುಡಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ವಂದಿಸಿದರು ಎಂದು ಪತ್ರಿಕಾ ಪ್ರಕಟಣೆಗಾಗಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ ಅವರು ತಿಳಿಸಿದ್ದಾರೆ.  

From: Mohanraj Pattar <mohanrajpattar@gmail.com