ಮುರಗೆಪ್ಪ ಆರ್. ಹೆಚ್. ಹಣಮನಹಳ್ಳಿ
ಮುರಗೆಪ್ಪ ಆರ್. ಹೆಚ್. ಹಣಮನಹಳ್ಳಿ
ಮೂಲತಃ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಹಣಮನಹಳ್ಳಿ ಗ್ರಾಮದ ತಂದೆ ರೇವಣಸಿದ್ದಪ್ಪ ಹಡಪದತಾಯಿ ಚನ್ನಮ್ಮ ಹಡಪದ
ಇವರ ಉದರದಲ್ಲಿ ೧೦-೦೬-೧೯೮೩ ರಂದು ಜನಿಸಿದರು ಪ್ರಾಥಮಿಕ ಶಿಕ್ಷಣ ಹುಟ್ಟೂರು ಮತ್ತು ಸಿಂಧನಮಡು, ಪ್ರೌಢ ಶಿಕ್ಷಣ ರಂಜೋಳ ,ಪದವಿ ಪೂರ್ವಸೇಡಂ,ಶಿಕ್ಷಕ ತರಬೇತಿ ಬೆಂಗಳೂರು, ಪದವಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ ,ಮಡದಿ ಪವಿತ್ರ,
ಮಗಳು ರತ್ನಮ್ಮ, ಮಗ ರಾಘವೇಂದ್ರ, ತುಂಬು ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ .ಇವರು ೨೬-೦೨-೨೦೦೭ ರಂದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ,೧೮ ವರ್ಷಗಳವರೆಗೆ ಸಿ.ಆರ್.ಪಿ.ಮತ್ತು ಎಮ್.ಆರ್.ಪಿ.ಯಾಗಿ ತರಬೇತಿ ,
ಪ್ರಸ್ತುತ: - ಸ. ಕ. ಕಿ. ಪ್ರಾ. ಶಾಲೆ. ಟಿ. ಬಿ. ಹಳ್ಳಿ. ಸೇಡಂ.ಮುಖ್ಯಗುರುಗಳು ಸೇವೆ ಸಲ್ಲಿಸುತ್ತಿದ್ದಾರೆ
ಪ್ರಕಟಿತ ಪಪುಸ್ತಗಳು
೧) ಮನದಂಗಳ ಎಂಬ ಕವನ ಸಂಕಲನ ೨೦೦೯ ರಲ್ಲಿ ಪ್ರಕಟವಾಗಿದೆ
೨) ಸಾಂತ್ವನ ಎಂಬ ಕವನ ಸಂಕಲನ ೨೦೨೨ ರಲ್ಲಿ ಪ್ರಕಟವಾಗಿದೆ.
೩) ಹ್ಯಾಂಗಾನೋ ಗುರುವು ಹ್ಯಾಂಗಾನೋ ತತ್ವಪದಗಳು ೦೩-೦೮-೨೪ ಲೋಕಾರ್ಪಣೆ
ಅಂಕಿತನಾಮ ,ಕೊಡೇಕಲ್ಲ ಚನ್ನಬಸವಣ್ಣ
ಹಸ್ತ ಪ್ರತಿಯಲ್ಲಿರುವ ಪುಸ್ತಕಗಳು
೧) ಮೂರು ನೂಲಿನ ಸೀರೆ-ಕವನ ಸಂಕಲನ.
೨) ಕಾವ್ಯಕನ್ನೆ -ಕವನ ಸಂಕಲನ.
೩) ಬೆನ್ನ ಹಿಂದಿನ ಬುತ್ತಿ-ಆಧುನಿಕ ವಚನಗಳು.
೪) ತ್ರಿಕಾಲಜ್ಞಾನ ದೀಪಿಕೆ----ಆಧುನಿಕವಚನಗಳು
೫) ಉಸಿರುಗಟ್ಟಿದ ಬಸಿರು--ಆಧುನಿಕ ವಚನಗಳು
೬)ಮಾಸ್ತರ್ ಮಂಗಣ್ಣನ ಮಾತುಗಳು-ಬಿಡಿ ಬರಹಗಳು (ನಿರತನಾಗಿರುವೆ)
೭) ಹಳಸಿದ ಅಂಬಲಿ-ತತ್ವಪದಗಳು
ಇವರಿಗೆ ಸಂದ ಪ್ರಶಸ್ತಿ
ಕ.ರಾ.ಪ್ರಾ.ಶಾ.ಶಿ.ಸಂಘ ಸೇಡಂ ಘಟಕದವರು ೨೫-೦೧-೨೦೧೪ ರಂದು ಉತ್ತಮ ಶಿಕ್ಷಕ ಪ್ರಶಸ್ತಿ,ಕ.ಸಾ.ಪ.ಸೇಡಂ ರವರು ೨೦೧೬ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. ಡಾ||ವ್ಹಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಗದಗ ರವರು ಪಂಡಿತ ಪಂಚಾಕ್ಷರಿ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ. ೨೦೨೨,ವಿಶ್ವದರ್ಶನ ದಿನ ಪತ್ರಿಕೆ ಹುಬ್ಬಳ್ಳಿ ರವರು ವಿಶ್ವ ಸಾಹಿತ್ಯ ರತ್ನ ಪ್ರಶಸ್ತಿ. ,ಕ.ಸಾ.ಪ.ಜಿಲ್ಲಾ ಘಟಕ ಕಲಬುರಗಿ ರವರು ೨೦೨೨ ರಲ್ಲಿ ಶಿಕ್ಷಕ ಸಾಹಿತಿ ಪ್ರಶಸ್ತಿ,ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕಲಬುರಗಿ ರವರು ಇವರ ಸಾಂತ್ವನ ಕೃತಿಗೆ ೨೦೨೨ ರ ಪ್ರೋ. ಎಸ್. ಜಿ. ಮೇಳಕುಂದಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ನೀಡಿರುತ್ತಾರೆ.
(ಮುರಗೆಪ್ಪ ಆರ್ ಹೆಚ್ ಹಣಮನಹಳ್ಳಿ ಸೇಡಂ.
ಮೊಬೈಲ್ ನಂಬರ್- 9900101903)