ಖಾನಾಪುರದಲ್ಲಿ ಭಾರಿ ಮಳೆಯಿಂದ ಸಂಚಾರ ಸ್ಥಗಿತ – ಜಾನುವಾರುಗಳು ಕೊಚ್ಚಿಗೆದು, ಪಶುಸಂಗೋಪನ ಇಲಾಖೆ ಪರಿಶೀಲನೆ"

ಆಳಂದ ತಾಲೂಕಿನ ಖಾನಾಪುರ್ ನಲ್ಲಿರಭಸದ ಮಳೆಯಿಂದಾಗಿ ಹಳ್ಳಕ್ಕೆ ಹರಿದು ಬಂದ ನೀರು ಸಂಚಾರ ಸ್ಥಗಿತ, ಜಾನುವಾರುಗಳು ಕೊಚ್ಚಿ ಹೋಗಿದ್ದನ್ನು ಪಶು ಸಂಗೋಪನ ಸಹಾಯಕ ನಿರ್ದೇಶಕ ಡಾ.ಯಲ್ಲಪ್ಪ ಇಂಗಳೇ ಪರಿಶೀಲಿಸಿ ಸ್ಥಳೀಯರ ಸಮಸ್ಯೆ ಆಲಿಸಿದರು
ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಜಾನುವಾರು ಕೋಳಿ
ಆಳಂದ್: ಮಹಾರಾಷ್ಟ್ರದ ಕೆಳಭಾಗದ ತಾಲೂಕಿನ, ಜಿರೊಳಿ, ಶಕಾಪುರ್ ಮತ್ತು ಪಡಸಾವಳಿ, ಮತ್ತೊಂದು ಮೇಲ್ಭಾಗದ ಸಾಲೆಗಾoವ್ ಮತ್ತು ತೀರ್ಥ ಪ್ರದೇಶಗಳಲ್ಲಿ ಸೆಪ್ಟೆಂಬರ್ 10, 2025 ರಂದು ಸುರಿದ ಭಾರೀ ಮಳೆಯಿಂದಾಗಿ ಸ್ಥಳೀಯ ಹಳ್ಳಗಳಲ್ಲಿ ಉಕ್ಕಿ ಹರಿದ ಪ್ರವಾಹದಿಂದ ಗಣನೀಯ ಹಾನಿಯಾಗಿದೆ. ಈ ಪ್ರವಾಹದ ಪರಿಣಾಮವಾಗಿ ಸುಮಾರು 7 ರಿಂದ 8 ಜಾನುವಾರುಗಳು ಮತ್ತು 2000 ರಿಂದ 2500 ಮಾಂಸದ ಕೋಳಿಗಳು ಕೊಚ್ಚಿಹೋಗಿವೆ ಎಂದು ಸ್ಥಳಕ್ಕೆ ಇಂದು ಭೇಟಿ ನೀಡಿದ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ ಯಲ್ಲಪ್ಪ ಇಂಗಳೇ ಅವರು ಹೇಳಿಕೊಂಡಿದ್ದಾರೆ.
ಸ್ಥಳೀಯಾಡಳಿತವು ಘಟನೆಯ ಬಗ್ಗೆ ತಿಳಿದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರವಾಹದಿಂದ ಉಂಟಾದ ಈ ದುರಂತದಿಂದ ಸ್ಥಳೀಯ ರೈತರು ಮತ್ತು ಕೃಷಿಕರು ತೀವ್ರ ಆರ್ಥಿಕ ನಷ್ಟವನ್ನು ಎದುರಿಸಿದ್ದಾರೆ. ಸಾವಿನ ಒಟ್ಟು ವಿವರಗಳು ಮತ್ತು ಹಾನಿಯ ಮೌಲ್ಯಮಾಪನವನ್ನು ತಿಳಿಯಲು ಮುಂದಿನ ವರದಿಗಳಿಗಾಗಿ ಕಾಯಲಾಗುತ್ತಿದೆ.
ಇನ್ನೊಂದೆಡೆ ಗಡಿ ಭಾಗದ ಹಿರೋಳಿ ಸರಸಂಬಾ ಅಂಬೆವಾಡ್ ನಾಗಲೇಗಾoವ್, ಸಾವಳೇಶ್ವರ್ ಭಾಗದಲ್ಲಿ ಬಿದ್ದ ಬಿರುಸಿನ ಮಳೆಯಿಂದಾಗಿ ಜಮಗಾ(ಜೆ )ಗ್ರಾಮಗಳಲ್ಲಿ ಹಳ್ಳದ ಪ್ರವಾಹದಿಂದಾಗಿ ಜಮೀನುಗಳು ಜಲಾವೃತಗೊಂಡು ಬೆಳೆಯ ನೀರಿನಲ್ಲಿ ನಿಂತು ಕೊಂಡಿದೆ 50 ವರ್ಷದ ವಯಸ್ಸಿನಲ್ಲಿ ಎಂದು ಇಂತಹ ನೀರಿನ ಪ್ರವಾಹ ಇಲ್ಲಿ ಕಂಡಿರ್ಲಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೂರ್ಯಕಾಂತ್ ಧಾಭಾ ಅವರು ಹಾನಿಯ ಕಳವಳ ವ್ಯಕ್ತಪಡಿಸಿದ್ದಾರೆ
ವರದಿ ಡಾ.ಅವಿನಾಶ್ ದೇವನೂರ್