ಶ್ರೀನಿವಾಸ್ ಸರಡಗಿಯಲ್ಲಿ ಭವ್ಯ ದಸರಾ ದರ್ಬಾರ್ — ಮೈಸೂರು ಮಾದರಿಯ ಜಂಬೂ ಸವಾರಿ, ಧರ್ಮಸಭೆ ಆಕರ್ಷಣೆ

ಶ್ರೀನಿವಾಸ್ ಸರಡಗಿಯಲ್ಲಿ ಭವ್ಯ ದಸರಾ ದರ್ಬಾರ್ — ಮೈಸೂರು ಮಾದರಿಯ ಜಂಬೂ ಸವಾರಿ, ಧರ್ಮಸಭೆ ಆಕರ್ಷಣೆ

ಶ್ರೀನಿವಾಸ್ ಸರಡಗಿಯಲ್ಲಿ ಭವ್ಯ ದಸರಾ ದರ್ಬಾರ್ — ಮೈಸೂರು ಮಾದರಿಯ ಜಂಬೂ ಸವಾರಿ, ಧರ್ಮಸಭೆ ಆಕರ್ಷಣೆ

ಕಲಬುರಗಿ, ಅ. 6:ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಲಕ್ಷ್ಮಿ ಶಕ್ತಿ ಪೀಠದ 13ನೇ ದಸರಾ ದರ್ಬಾರದ ಪ್ರಯುಕ್ತ ಭವ್ಯವಾದ “ಮೈಸೂರು ಮಾದರಿಯ ಜಂಬೂ ಸವಾರಿ ಮೆರವಣಿಗೆ, ತುಲಾಭಾರ ಹಾಗೂ ಭಾವೈಕ್ಯ ಧರ್ಮಸಭೆ” ಕಾರ್ಯಕ್ರಮ ಭಕ್ತಿಭಾವದಿಂದ ಜರಗಿತು.

ಕಾರ್ಯಕ್ರಮವನ್ನು ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ,ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಬಂದ ಅನೇಕ ಭಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶಕ್ತಿ ಪೀಠದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಭವ್ಯ ದಸರಾ ದರ್ಬಾರವು ಶ್ರೀನಿವಾಸ್ ಸರಡಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣವನ್ನು ಸೃಷ್ಟಿಸಿತು.