ಅಟ್ಯಾ ಪಟ್ಯಾ ಚಾಂಪಿಯನ್ ಶಿಪ್ ಗೆದ್ದ ನಾಯಕಿ ಪೂಜಾ ವೀ ಕೊಂಡಿ ತಂಡ
ಅಟ್ಯಾ ಪಟ್ಯಾ ಚಾಂಪಿಯನ್ ಶಿಪ್ ಗೆದ್ದ ನಾಯಕಿ ಪೂಜಾ ವೀ ಕೊಂಡಿ ತಂಡ
ಧಾರವಾಡ ಜಿಲ್ಲೆ/ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ 24,25 ಹಾಗೂ 26 ಡಿಸೆಂಬರ್ 2025ರಂದು ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಅಟ್ಯಾ-ಪಟ್ಯಾ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ನರೇಗಲ್ಲಿನ ಚೈತನ್ಯ ಸ್ಪೋರ್ಟ್ಸ್ ಕ್ಲಬ್‌ನ ಸಬ್ ಜೂನಿಯರ್ ಬಾಲಕಿಯರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿ ಬಾಲಕಿಯರನ್ನು 18-12 ಹಾಗೂ 16-13 ಅಂಕಗಳ ಅಂತರದಿಂದ ಅಂತಿಮ ಪಂದ್ಯದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಹಾಗೂ ಅದೇರೀತಿ ಮಹಿಳೆಯರ ತಂಡ ಅಂಚಟಗೇರಿ ಮಹಿಳೆಯರ ತಂಡವನ್ನು 15-12 ಮತ್ತು 14-12 ಅಂತರದಿಂದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಸಬ್ ಜೂನಿಯರ್ ತಂಡದ ನಾಯಕಿ ಕುಮಾರಿ ಪೂಜಾ ವೀ. ಕೊಂಡಿ ಹಾಗೂ ಮಹಿಳಾ ತಂಡದ ನಾಯಕಿ ಕುಮಾರಿ ಜ್ಯೋತಿ ಸ. ಪೂಜಾರ ಇವರಿಗೆ ಅತ್ಯುತ್ತಮ ಆಲ್ರೌಂಡರ್ ವಯಕ್ತಿಕ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
