ಚಿಂಚೋಳಿ ರೈತರಿಗೆ 3400 ರೂ ಬೆಲೆ ನೀಡಬೇಕು – ಶಾಸಕ ಯತ್ನಾಳ್ ಮಾತು ಉಳಿಸಲಿ ಎಂದು ಆಗ್ರಹ
ಚಿಂಚೋಳಿ ರೈತರಿಗೆ ಕೊಟ್ಟ ಮಾತು ಮಾಲೀಕ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಉಳಿಸಿಕೊಳಲು ಆಗ್ರಹ
ಸರಕಾರದ ಬೆಂಬಲ ಬೆಲೆ ಜೊತೆಗೆ 100 ಸೇರಿಸಿ 3400 ಕೋಡಿ
ಚಿಂಚೋಳಿ : ಸಿದ್ದಸಿರಿ ಎಥಿನಾಲ್ ಪವರ ಕಾರ್ಖಾನೆ ಸರಕಾರ ನಿಗದಿಪಡಿಸಿರುವ 3300 ರು ಜೊತೆಗೆ 100 ರು ಸೇರಿಸಿ ಕಬ್ಬು ಬೆಳೆಗಾರ ರೈತರಿಗೆ ಹಣ ನೀಡಬೇಕೆಂದು ಚಿಂಚೋಳಿ - ಕಾಳಗಿ ರೈತ ಹಿತರಕ್ಷಣ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಸಿದ್ದಸಿರಿ ಎಥಿನಾಲ್ ಪವರ್ ಕಾರ್ಖಾನೆ ಮಾಲೀಕ ವಿಜಯಪೂರ್ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸರಕಾರ ನೀಡುವ ಬೆಂಬಲ ಜೊತೆಗೆ ಕಾರ್ಖಾನೆ ಟನ್ ಗೆ 100 ರು ಸೇರಿಸಿ ಕೊಡಲಾಗುತ್ತದೆ ಎಂದು ಶಾಸಕರು ಚಿಂಚೋಳಿ ರೈತರಿಗೆ ವಾಗ್ದಾನ ನೀಡಲಾಗಿದ್ದು, ಅದರಂತೆ ಮಾತಿನಂತೆ ಸರಕಾದ ಬೆಂಬಲ 3300ರು ಜತೆಗೆ 100 ರು ಸೇರಿಸಿ ಟನ್ ಕಬ್ಬಿಗೆ 3400 ರು ಕೊಡುವ ಕೆಲಸ ಕಾರ್ಖಾನೆ ಮಾಲೀಕ ಬಸವನಗೌಡ ಪಾಟೀಲರು ಮಾಡಿ ಚಿಂಚೋಳಿ ಕಬ್ಬು ಬೆಳಗಾರ ರೈತರಿಗೆ ನೀಡಿರುವ ಮಾತು ಉಳಿಸುವ ಕೆಲಸ ಮಾಡಬೇಕೆಂದು ರೈತ ಮುಖಂಡರು ಮನವಿ ಮಾಡಿ, ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ರೈತ ಮುಖಂಡ ಶಂಕರರಾವ ಭಗವಂತಿ, ನಾರಾಯಣ ಗುಣಾಜಿ, ಅಬ್ದುಲ್ ಬಾಶೀದ್, ನಾಗೇಶ ಗುಣಾಜಿ, ಲಕ್ಷ್ಮಣ ಆವಂಟಿ, ವಕೀಲ ಶ್ರೀನಿವಾಸ ಬಂಡಿ, ಶಿವರಾಜ ಪಾಟೀಲ್ ಐನಾಪೂರ್, ಅನೀಲ್ ಜಮಾದಾರ ಹುಡದಳ್ಳಿ, ಮೈನೋದ್ದಿನ್ ಹಾತಿವಾಲೆ, ಹಫಿಜ್ ಅಬ್ದುಲ್ ಹಮೀದ್ ಅವರು ಉಪಸ್ಥಿತರಿದ್ದರು.
