ವೇಬ್ಬ್ ಕಾಸ್ಟಿಂಗ್ ಪರಿಕ್ಷಾ ವ್ಯವಸ್ಥೆ ಹತ್ತನೆ ಹಾಗೂ ಪಿಯುಸಿ ಪರಿಕ್ಷೆಗೆ ಸಿಮಿತನಾ ಪದವಿ ಪರಿಕ್ಷೆಗೆ ಯಾಕಿಲ್ಲ ಈ ವ್ಯವಸ್ಥೆ. ?
ವೇಬ್ಬ್ ಕಾಸ್ಟಿಂಗ್ ಪರಿಕ್ಷಾ ವ್ಯವಸ್ಥೆ ಹತ್ತನೆ ಹಾಗೂ ಪಿಯುಸಿ ಪರಿಕ್ಷೆಗೆ ಸಿಮಿತನಾ ಪದವಿ ಪರಿಕ್ಷೆಗೆ ಯಾಕಿಲ್ಲ ಈ ವ್ಯವಸ್ಥೆ. ?
ಮುಖ್ಯವಾಗಿ ಇಂದಿನ ದಿನಮಾನದ BA.B.com.Bsc.ಪದವಿ ಹಂತದ ಪರೀಕ್ಷೆಗಳು ಅಷ್ಟೊಂದು ಪಾರದರ್ಶಕವಾಗಿ ನಡೆಯುತ್ತಿವೇಯಾ ? ಪದವಿಗಳ ಪರಿಕ್ಷೆ, ಮತ್ತು ಅವುಗಳ ಮೌಲ್ಯವನ್ನು ಹಾಳು ಮಾಡುತ್ತಿರುವರು ಯಾರು ಎಂಬುದು ಗೌಪ್ಯವಾಗೆನು ಉಳಿದಿಲ್ಲ.
ಪರಿಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದನ್ನು ತಡೆಯಲು ಶಿಕ್ಷಣ ಇಲಾಖೆ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.ಕಳೆದ ವರ್ಷ ನಡೆದ ಎಸ್ಎಸ್ಎಲ್ ಸಿ ಪರಿಕ್ಷೆಯಲ್ಲಿ ವೇಬ್ ಕಾಸ್ಟಿಂಗ್ ವ್ಯೆವಸ್ಥಯನ್ನು ಅಳವಡಿಸಿ ಯಶಸ್ಸು ಸಾಧಿಸಿದ್ದ ಇಲಾಖೆಯು ಇದಿಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಸಹ ವ್ಯೆಬ್ ಕಾಸ್ಟಿಂಗ್ ವ್ಯೆವಸ್ಥೆಯನ್ನು ಅಳವಡಿಸಲು ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಕೆಎಸ್ಇಎಬಿ ನಿರ್ಧಿರಿಸಿದೆ.
ಅದೇ ಮಾದರಿಯಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಅಥಾವ ಕಾಲೇಜು ಶಿಕ್ಷಣ ಇಲಾಖೆಯು ಕೂಡ BA, B. com. BCA, Bsc, BSW, B.ed ಪದವಿ ಹಾಗೂ ಎಲ್ಲಾ ರೀತಿಯ ಪರಿಕ್ಷೆಗಳಲ್ಲಿ ವೇಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಿದರೆ ಅಲ್ಲಿ ನಡೆಯುವ ಪರೀಕ್ಷಾ ಅಕ್ರಮಗಳು,ನಕಲು ಮಾಡುವುದನ್ನು ತಡೆಯಬಹುದು.
ಪದವಿ ಪರಿಕ್ಷೆಗಳಲ್ಲಿ ವಿದ್ಯಾರ್ಥಿಗಳು ಮಾಡುವ ಸಾಮೂಹಿಕ ನಕಲು ತಡೆಯಲು ಮತ್ತು ಅಕ್ರಮಗಳನ್ನು ತಡೆದು ಪಾರದರ್ಶಕವಾಗಿ ಪರೀಕ್ಷೆ ನಡೆಸಲು ವೇಬ್ ಕಾಸ್ಟಿಂಗ್ ನೇರವಾಗುತ್ತದೆ.ಬರಿ ಹತ್ತನೆ ತರಗತಿಯ ಹಾಗೂ ಪಿಯುಸಿ ತರಗತಿಯ ಮಕ್ಕಳಿಗೆ ಈ ವೇಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಿದರೆ ಇದು ಯಾವ ನ್ಯಾಯ.?
ಪರಿಕ್ಷೆ ಅಂದಮೇಲೆ ಅದರಲ್ಲಿ ಪಾರದರ್ಶಕತೆ ಇಲ್ಲದೆ ಹೋದರೆ ಅದು ಪರಿಕ್ಷೆಯೆ ಅನ್ನಿಸುವುದಿಲ್ಲ.ಪದವಿ ಪರಿಕ್ಷಗೆಳಲ್ಲಿ ನಡೆಯುವ ಅಕ್ರಮದ ಬಗ್ಗೆ ಇಲಾಖೆ ಗಮನ ಹರಿಸಬೇಕು ಕಳೆದ ವರ್ಷ SSLC &PUC ಪರಿಕ್ಷೆಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿದ್ದರ ಫಲವಾಗಿಯೇ ಪರಿಕ್ಷಾ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.
ವೇಬ್ ಕಾಸ್ಟಿಂಗ್ ಪರಿಕ್ಷಾ ಕೇಂದ್ರಗಳು ಮತ್ತು ಕೊಠಡಿಗಳಲ್ಲಿ ಸಿಸಿಟಿವಿ ಉತ್ಕೃಷ್ಟ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸಿದ ಕಾಲೇಜುಗಳನ್ನು ಪರಿಕ್ಷಾ ಕೇಂದ್ರಗಳಾಗಿ ಗುರುತಿಸಿ.ಅಂತಹ ಕಾಲೇಜುಗಳಿಗೆ ಮಾತ್ರ ಪರಿಕ್ಷಾ ಕೇಂದ್ರ ನೀಡಬೆಕು ಇದರಿಂದಾಗಿ ವಿಶ್ವವಿದ್ಯಾಲಯಕ್ಕೆ ವಾರ್ಷಿಕ ಆರ್ಥಿಕ ಹೊರೆ ತಪ್ಪುತ್ತದೆ.ಕುಳಿತಲ್ಲಿಯೇ ಕುಲಸಚಿವರು ಕುಲಪತಿಗಳು ಪರಿಕ್ಷೆಗೆ ಸಂಬಂಧ ಪಟ್ಟ ಅಧಿಕಾರಿಗಳು ನೈಜವಾದ ಸಾಕ್ಷಿ ಸಮೇತ ಪರಿಕ್ಷಾ ಕೇಂದ್ರಗಳ ಅಕ್ರಮವನ್ನು ಪತ್ತೆ ಹಚ್ಚಲು ಸಹಾಯ ಆಗುತ್ತದೆ.ಇದರಿಂದ ಆಕ್ರಮ ಪರಿಕ್ಷಾ ಕೇಂದ್ರಗಳು ಮುಚ್ಚಲು ತುಂಬಾ ಸಹಾಯವಾಗುತ್ತದೆ ಅದಲ್ಲದೆ ವಿಶ್ವವಿದ್ಯಾಲಯಗಳ ಹಾಗೂ ಕಾಲೇಜುಗಳ ಗುಣಮಟ್ಟ ಮತ್ತಷ್ಟು ದ್ವಿಗುಣಗೊಳ್ಳುತ್ತದೆ.
ವಿದ್ಯಾರ್ಥಿಗಳು ಕ್ಯಾಮೆರಾ ಕಣ್ಗಾವಲಿನಲ್ಲಿ ಪರಿಕ್ಷೆ ಬರೆಯುತ್ತಾರೆ ಪರಿಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳ ಚಲನ ವಲನ ಮತ್ತು ಅವರಿಗೆ ಕಾಪಿ ನಕಲು ಮಾಡಲು ಸಹಾಯ ಮಾಡುವ ಸಿಬ್ಬಂದಿಗಳ ಅಕ್ರಮಗಳನ್ನು ಕ್ಯಾಮೆರಾ ಮೂಲಕ ವಿಶ್ವವಿದ್ಯಾಲಯವು ಹಾಗೂ ಕಾಲೇಜು ಶಿಕ್ಷಣ ಇಲಾಖೆ, ಉನ್ನತ, ಶಿಕ್ಷಣ ಇಲಾಖೆ ಸಚಿವರು ಬೆಂಗಳೂರಲ್ಲೀಯೆ ಕುಳಿತು ವಿಕ್ಷಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮೇಲ್ವಿಚಾರಣೆ ಮಾಡುಲು ಅನುಕೂಲವಾಗುತ್ತದೆ.
2025ರ ಮಾರ್ಚ್ ಏಪ್ರಿಲ್ ಅಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಡೆಯಲಿದ್ದು ಪರಿಕ್ಷೆಯಲ್ಲಿ ವೇಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಇಲಾಖೆ ಅಳವಡಿಸಿದೆ.ದ್ವಿತಿಯ ಪಿಯುಸಿ ಪರೀಕ್ಷೆಗಳಿಗಾಗಿ ಸಿಸಿಟಿವಿ ಕ್ಯಾಮರಾ ಹೊಂದಿರುವ ಕಾಲೇಜುಗಳನ್ನು ಗುರುತಿಸಲಾಗುತ್ತದೆ.
ಅದೇ ಮಾದರಿಯಲ್ಲಿ 2024-25 ನೇ ಸಾಲೀನ ಪದವಿ ಪರಿಕ್ಷೆಗಳನ್ನು ವೇಬ್ ಕಾಸ್ಟಿಂಗ್ ಮೂಲಕವೇ ನಡೆಸಿದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮವಾಗಿ ಬುನಾದಿ ಹಾಕಿದಂತಾಗುತ್ತದೆ ಮತ್ತು ಇದರಿಂದ ವಿದ್ಯಾರ್ಥಿಗಳಲ್ಲಿ ಆಲಸಿ ತನ ಹೊಗಿ ಓದುವ ಅಭೀರುಚಿ ಹೆಚ್ಚುತ್ತದೆ,ಅದಲ್ಲದೆ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯವಾಗುತ್ತದೆ ಮತ್ತು ಪದವಿ ಪರಿಕ್ಷೆ ಗಳಲ್ಲಿ ಈ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲು ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವರು, ಮತ್ತು ಉನ್ನತ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿಗಳು ಆದೇಶ ನೀಡಿ ವಿಶ್ವವಿದ್ಯಾಲಯಗಳಿಗೆ ಖಡಕ್ ಎಚ್ಚರಿಕೆ ಕೊಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲಾ ಪದವಿ ಕಾಲೇಜುಗಳಿಗೆ ಸೂಚಿಸಬೇಕು.
ಶ್ರೀ ಸಿದ್ಧಾರ್ಥ ಟಿ ಮಿತ್ರಾ
ಯುವ ಬರಹಗಾರರು
ಹಾಗೂ ಸಾಮಾಜಿಕ ಚಿಂತಕರು ಬೀದರ