ಶಾಸಕರಿಂದ ಗುದ್ದಲಿ ಪೂಜೆ: ಈಶ್ವರ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಶಾಸಕರಿಂದ ಗುದ್ದಲಿ ಪೂಜೆ: ಈಶ್ವರ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಕಲಬುರಗಿ: ನಗರದ ವಾರ್ಡ್ ನಂ. 54 ರ ಗಾಬರೆ ಲೇಔಟ್‌ನ ಈಶ್ವರ ನಗರದಲ್ಲಿ ಡಿಎಂಎಫ್ ಅನುದಾನದಡಿ ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಂದ್ರ ಬಿ. ಪಾಟೀಲ ಬಿರಾಳ, ಶಾಂತು ಪಾಟೀಲ, ಸಿದ್ದರಾಮ ಸೌಕರೆ, ಹಣಮಂತ ಪ್ರಭು, ಶರಣು ಕಟ್ಟಿಮನಿ, ವಿಜಯಕುಮಾರ ಪಾಟೀಲ, ರಾಜಶೇಖರ ಪಾಟೀಲ, ಸಿದ್ರಾಮಪ್ಪ ಪಾಟೀಲ, ಬಿಬಿ ಬಿರಾದಾರ, ಮಹಿಪಾಲರೆಡ್ಡಿ, ರವಿಕುಮಾರ ಕುಲಕರ್ಣಿ, ದಿಲೀಪರಾಔ ಗೋಖಲೆ, ಮಲ್ಲಯ್ಯ ಸ್ವಾಮಿ, ಶರಣು ಕಟ್ಟಿಮನಿ, ಪರಶುರಾಮ, ಶರಣಗೌಡ, ಡಾ. ಮಲ್ಲಿಕಾರ್ಜನ ವಿಸಾಬಿ ಸೇರಿ ಹಲವು ಗಣ್ಯರು ಹಾಜರಿದ್ದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮಾತನಾಡಿ, "ಗ್ರಾಮೀಣ ಹಾಗೂ ನಗರ ಭಾಗಗಳ ಸಮಗ್ರ ಅಭಿವೃದ್ಧಿ ನಮ್ಮ ಪ್ರಮುಖ ಗುರಿ. ಈ ರೀತಿಯ ಮೂಲಸೌಕರ್ಯ ಯೋಜನೆಗಳ ಮೂಲಕ ಜನತೆಯ ಅಗತ್ಯತೆಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ," ಎಂದು ಹೇಳಿದರು.
ನಿವಾಸಿಗಳ ತೊಂದರೆಗಳಿಗೆ ಪರಿಹಾರವಾಗಿ ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಜನತೆಯು ಈ ಪ್ರಯತ್ನಗಳಿಗೆ ಸಹಕಾರ ನೀಡಬೇಕು ಎಂದು ಶಾಸಕರು ಕರೆ ನೀಡಿದರು.