ಹರಿಯಾಣದಲ್ಲಿ ಒಳ ಮೀಸಲಾತಿ ಜಾರಿ ಕಲಬುರ್ಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಹರ್ಷ
ಹರಿಯಾಣದಲ್ಲಿ ಒಳ ಮೀಸಲಾತಿ ಜಾರಿ ಕಲಬುರ್ಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಹರ್ಷ
ಕಲಬುರಗಿ: ಎಸ್.ವಿ.ಪಿ. ವೃತ್ತದಲ್ಲಿ ಹರಿಯಾಣ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾದ ನಯಾಬ್ ಸಿಂಗ್ ಸೈನಿ ಅವರು ಮೊದಲ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಮಾಡಿದೆ.
ಈ ದೇಶದಲ್ಲೇ ಪ್ರಥಮ ಹರಿಯಾಣ ರಾಜ್ಯದಲ್ಲಿ ಜಾರಿಮಾಡಿದೆ. ಆದಕಾರಣ ಕಲಬುರ್ಗಿ ನಗರ ಜಿಲ್ಲಾ ಎಸ್ ಸಿ ಮೋರ್ಚ ವತಿಯಿಂದ ಅಭಿನಂದನೆ ಸಲ್ಲಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ್ ಜೀನಕೆರಿ, ಬಿಜೆಪಿಯ ಮುಖಂಡರುಗಳಾದ ರಮೇಶ್ ವಾಡೆಕರ್, ರಾಜು ಕಟ್ಟಿಮನಿ, ರಂಜಿತ್ ಮೂಲಿಮನಿ, ಬಂಡೇಶ ರತ್ನಡಗಿ, ಪ್ರಲಾದ್ ಹಡಗಿಲ್ಕರ್, ಪ್ರದೀಪ್ ಬಾಚನಳ್ಳಿಕರ್, ಅಭಿ ಹಾದಿಮನಿ, ಮಲ್ಲಿಕಾರ್ಜುನ ಸರಡಗಿ, ಮನೋಹರ ಬೀರ್ನೂರ್, ಮಹೇಶ ಮೂಲಿಮನಿ, ಗುಂಡು ಸಂಗವಾರ ಕೃಷ್ಣ ತಂಗಡಗಿ, ರುಕ್ಕಪ್ಪ ಕಾಂಬಳೆ, ಸಚಿನ್ ಕಟ್ಟಿಮನಿ, ಜಯರಾಜ್ ಕಣಗಿಕರ್, ಪೃಥ್ವಿರಾಜ್ ರಾಂಪುರ್, ರಮೇಶ್ ಸರಡಗಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.