ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್ ಹಾಗೂ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣಾ ದರ ನಿಗದಿಪಡಿಸಬೇಕೆಂದು ಚಿತ್ತಾಪುರ ತಾಲೂಕು ವೈದ್ಯಧಿಕಾರಿಗಳಿಗೆ ಅನೀಲಕುಮಾರ ಮನವಿ
ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್ ಹಾಗೂ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣಾ ದರ ನಿಗದಿಪಡಿಸಬೇಕೆಂದು ಚಿತ್ತಾಪುರ ತಾಲೂಕು ವೈದ್ಯಧಿಕಾರಿಗಳಿಗೆ ಅನೀಲಕುಮಾರ ಮನವಿ
ಕಲಬುರಗಿ: ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್ ಹಾಗೂ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣಾ ದರ ನಿಗದಿಪಡಿಸಬೇಕೆಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಅನೀಲಕುಮಾರ ಅವರು ಚಿತ್ತಾಪುರ ತಾಲೂಕು ವೈದ್ಯಧಿಕಾರಿಗಳ ಮೂಲಕ ಆರೋಗ್ಯ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದರು.
ಜನರ ಆರೋಗ್ಯದ ಮೇಲೆ ಇತ್ತೀಚಿಗೆ ದುಷ್ಪರಿಣಾಮಗಳು ಹೆಚ್ಚುತ್ತಿದ್ದು ಪ್ರತಿ ಕುಟುಂಬದಲ್ಲಿಯೂ ಸಹ ಅನಾರೋಗ್ಯದಿಂದ ನರಳುತ್ತಿರುವ ಜನರು ಕಂಡು ಬರುತ್ತಿದ್ದಾರೆ ಜೊತೆಗೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು ರೋಗಿಗಳು ಹೆಚ್ಚಾಗುತ್ತಿದ್ದಾರೆ ಈಗಿನ ಜನಸಂಖ್ಯೆ ಹೆಚ್ಚಿದ್ದು ಇದಕ್ಕೆ ಸಮನಾದ ಸರ್ಕಾರಿ ಆಸ್ಪತ್ರೆ ಗಳು ಕಡಿಮೆ ಇರುವ ಕಾರಣ ರೋಗಿಗಳು ಖಾಸಗಿ ವೈದ್ಯರ ಮೇಲೆ ಅವಲಂಬಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇದನ್ನು ಮನಗಂಡಿರುವ ಖಾಸಗಿ ವೈದ್ಯರುಗಳು ಕನಿಷ್ಠ 500 ರಿಂದ ಸಾವಿರ ರೂಗಳಿಗೂ ಹೆಚ್ಚು ಸಂದರ್ಶನ ಶುಲ್ಕ (ಈ ಹಣಕ್ಕೆ ಯಾವುದೇ ಔಷದ ಅಥವಾ ಮಾತ್ರ ನೀಡುವುದಿಲ್ಲ ) ತೆಗೆದುಕೊಳ್ಳುತ್ತಿದ್ದಾರೆ ಅಲ್ಲದೆ ಸುಖ ಸುಮ್ಮನೆ ರೋಗಿಗಳಿಗೆ ಲ್ಯಾಬ್ ಟೆಸ್ಟ್ ಮಾಡುವ ಮೂಲಕವೂ ಸಹ ಹಣ ಮಾಡುವ ಪದ್ಧತಿಯನ್ನು ಮಾಡಿಕೊಂಡಿರುತ್ತಾರೆ.
ಇAದಿನ ದಿನಗಳಲ್ಲಿ ಮಧ್ಯಮ ವರ್ಗದ ರೋಗಿಗಳು ವೈದ್ಯರ ಬಳಿ ಹೋಗಿ ಬಂದರೆ ವೈದ್ಯರ ಸಂದರ್ಶನ ಶುಲ್ಕ, ಲ್ಯಾಬ್ ಟೆಸ್ಟ್ ಹಾಗೂ ಮಾತ್ರೆಗಳಿಗೆ ಕನಿಷ್ಠ 2 ಸಾವಿರದಿಂದ 3000 ಸಾವಿರ ರೂಪಾಯಿಗಳನ್ನು ಗಳನ್ನು ನೀಡುವ ಪರಿಸ್ಥಿತಿ ಇದೆ. ಜೊತೆಗೆ ರೋಗ ವಾಸಿಯಾಗಲು ಕನಿಷ್ಠ ಎರಡು-ಮೂರು ನಾಲಯಾದರು ಹೋಗಿ ಖರ್ಚು ಮಾಡುವ ಪರಿಸ್ಥಿತಿ ಇದೆ ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ತಾತ್ಕಾಲಿಕ ರೋಗಿಯಾದರೆ ಒಂದು ತಿಂಗಳ ಸಂಪಾದನೆ ಖರ್ಚಾಗಿ ಬಿಡುತ್ತದೆ ನಂತರ ಜೀವನ ನಿರ್ವಹಣೆಗೆ ಸಾಲ ಮಾಡುವ ಪರಿಸ್ಥಿತಿಯಲ್ಲಿದ್ದಾರೆ
ಇಂದಿನ ದಿನದಲ್ಲಿ ಪ್ರತಿಯೊಂದು ವ್ಯವಹಾರಕ್ಕೆ ಸರ್ಕಾರ ದಿಂದ ಇಂತಿಷ್ಟು ಹಣ ಪಡೆಯಬೇಕೆಂದು ಕಾನೂನಾತ್ಮಕವಾಗಿ ನಿಗದಿ ಮಾಡಿರುತ್ತಾರೆ ಉದಾಹರಣೆ ಬಸ್ ಟಿಕೆಟ್ ದರ, ಟ್ಯಾಕ್ಸಿ, ಆಟೋರಿಕ್ಷಾ, ಚಲನಚಿತ್ರ ಮಂದಿರಗಳ ಟಿಕೆಟ್ ದರಗಳು, ದಿನಗೂಲಿ ನೌಕರರ ವೇತನ, ಶಾಲಾ ಕಾಲೇಜುಗಳ ಶಿಕ್ಷಣ ಶುಲ್ಕಗಳು ಹಾಗು ಇತರೆ ಸಾರ್ವಜನಿಕ ಸೌಲಭ್ಯಗಳಿಗೆ ಸಂಬAಧಿಸಿದ ಸೇವೆಗಳಲ್ಲಿ ದರ ನಿಗದಿ ಪಡಿಸಲಾಗಿದೆ
ಅದೇ ರೀತಿ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್ ಹಾಗೂ ಆಸ್ಪತ್ರೆಗಳಲ್ಲಿ ಸಂದರ್ಶನ ಶುಲ್ಕವನ್ನು ಮಧ್ಯಮ ವರ್ಗದ ಮತ್ತು ಬಡವರ ಕೈಗೆಟವಂತೆ ನಿಗದಿ ಪಡಿಸಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.