ಜೈಕನ್ನಡಿಗರ ಸೇನೆಯಿಂದ ಕನ್ನಡ ಉತ್ಸವ, ಸಾದಕರಿಗೆ ಸನ್ಮಾನ
ಜೈಕನ್ನಡಿಗರ ಸೇನೆಯಿಂದ ಕನ್ನಡ ಉತ್ಸವ, ಸಾದಕರಿಗೆ ಸನ್ಮಾನ
ಕಲಬುರಗಿ : ಕನ್ನಡ ನಾಡು ನುಡಿಯೇ ಮನ್ನನಾಡಿನ ಪರಂಪರೆಯಾಗಿದ್ದು, ನಮ್ಮ ಸಂಸ್ಕೃತಿಯ ಉಳಿವು ಭಾಷೆಯ ಉಳಿವಿನಲ್ಲಿ ಅವಲಂಬಿಸಿದೆ ಎಂದು ಶ್ರೀಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ.ತಾಯಿ ದಾಕ್ಷಾಯಣಿ ಅಪ್ಪಾಜಿ ಅವರು ಹೇಳಿದರು.
ನಗರದ ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ಜೈಕನ್ನಡಿಗರ ಸೇನೆ ಆಯೋಜಿಸಿದ್ದ ಕನ್ನಡ ಉತ್ಸವ ಹಾಗೂ ಸಾದಕರ ಸನ್ಮಾನ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು, ಕನ್ನಡ ನಾಡುನುಡಿಯ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಆಚಲೇರಿ ಜಿಡಗಾ ಮಠದ ಪೂಜ್ಯ ಬಸವರಾಜೇಂದ್ರಮಹಾಸ್ವಾಮಿಗಳು ಮಾತನಾಡಿ, ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಗುರುತಿಸಿ ಅವರ ಸೇವೆಗೆ ಬೆನ್ನು ತಟ್ಟುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಬೇಕು. ಇದರಿಂದ ಸಾದಕರ ಶ್ರಮಕ್ಕೆ ಪ್ರೋತ್ಸಹ ಸಿಗುತ್ತದೆ ಎಂದರು.
ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಶಾಸಕ ಅಲ್ಲಮ ಪ್ರಭು ಪಾಟೀಲ ಅವರು, ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಂದ ಕ್ಷೇತ್ರಗಳಲ್ಲಿ ಕನ್ನಡಿಗರು ಮುಂಚೂಳಿಯಲ್ಲಿದ್ದಾರೆ ನಾಡು ನುಡಿಯ ರಕ್ಷಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶೀಶರಣಬಸವೇಶ್ವ ಸಂಸ್ಥಾನದ ಕಾರ್ಯಕದರ್ಶಿ ಡಾ.ಬಸವರಾಜ ದೇಶಮುಖ, ಕಾಂಗ್ರೆಸ್ ಪಕ್ಷದ ಮುಖಂಡರಾದ ಲಿಂಗರಾಜ ತಾಜಫೈಲ್, ಹೋರಾಟಗಾರ ಡಾ.ಲಕ್ಷ್ಮಣ ದಸ್ತಿ. ಸರ್ಕಲ್ ಇನ್ಸಪೆಕ್ಟರ್ ಶಶಕೀಲ ಅಂಗಡಿ, ಸೋಮನಾಥ ಗಿರದಳ್ಳಿ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಮತ್ತು ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್.ಭಾಸಗಿ, ಮಲ್ಲಿಕಾಜರ್ಯನ ಅಪ್ಪಾಜಿ, ಬಿಜೆಪಿ ಮುಖಂಡ ಪ್ರಕಾಶ ಹಿರಾಪೂರ, ನವೀನಕುಮಾರ, ಸಾಗರ ಕಿಚ್ಚ ಸೇರಿದಂತೆ ಗಣ್ಯಮಾನ್ಯರು ಭಾಗವಹಿಸಿದ್ದರು.
ಕಲ್ಯಾಣ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಧಕರಾದ ಡಾ.ಫಾರೂಕ ಅಹ್ಮದ, ಡಾ.ವಿಕ್ರಮ ಸಿದ್ದಾರೆಡ್ಡಿ, ಡಾ.ಸನ್ಮಾನ ಪಟೇಲ, ಕೈಲಾಸ ಬನಾಳೆ, ಡಾ.ಮಂಜುನಾಥ ದೊರೆಶೆಟ್ಟಿ, ಡಾ.ಲಿಂಗರಾಜ ಅಪ್ಪ, ಡಾ.ಲಕ್ಷ್ಮಣ ದಸ್ತಿ, ಶಿವಲಿಂಗಪ್ಪ ದೊಡ್ಡಮನಿ, ಡಾ.ಮಾಜಿದ್ ದಾಗಿ, ಡಾ. ಶ್ರೀಕಾಂತಚಾರ್ಯ ಮಣ್ಣೂರ, ಡಾ.ಆನಂದ ನಾಯಕ, ಡಾ.ರಾಜಕುಮಾರ ಪಾಟೀಲ, ಮಜ್ ಖಾನ್, ನಾಜ್ ಜಾಹೀರಾತು ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.