ಕಲಬುರಗಿ: ಅರಿವು ಓಪನ್ ಏರ್ ಲೈಬ್ರರಿ ನಿರ್ಮಾಣ

ಕಲಬುರಗಿ: ಅರಿವು ಓಪನ್ ಏರ್ ಲೈಬ್ರರಿ  ನಿರ್ಮಾಣ

ಕಲಬುರಗಿ: ಅರಿವು ಓಪನ್ ಏರ್ ಲೈಬ್ರರಿ ನಿರ್ಮಾಣ

ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರವಾಳ ವಿನೂತನ ಪ್ರಯೋಗ, ಸಚಿವ ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬದ ದಿನದಂದು ಲೋಕಾರ್ಪಣೆ

ಕಲಬುರಗಿ ನಗರದ ಎಸ್ ಎಂ ಪಂಡಿತ ರಂಗ ಮಂದಿರ ಪಕ್ಕದ ಖಾಲಿ ಸ್ಥಳದಲ್ಲಿ "ಅರಿವು ಓಪನ್ ಏರ್ ಲೈಬ್ರೆರಿ" ವಿನೂತನ ಬಯಲು ಗ್ರಂಥಾಲಯವನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ ಮಹಾನಗರ ಪಾಲಿಕೆ ಸದಸ್ಯ ಹಾಗು ಸಾರ್ವಜನಿಕ ಅರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಚಿನ್ ಶಿರವಾಳ ನಿರ್ಮಿಸಿ ಕಲಬುರಗಿ ನಗರದ ನಿವಾಸಿಗಳಿಗೆ ಅದರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಶಿಕ್ಷಣಕ್ಕೆ ಅಗತ್ಯ ಒತ್ತು ನೀಡುವ ಸಚಿವರ ಮಾರ್ಗದರ್ಶನ ಹಾಗೂ ಅವರ ಸ್ಪೂರ್ತಿ ಮಾತುಗಳಿಂದ ಪ್ರಭಾವಿತನಾಗಿ ನಗರದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಓದಿನ ಕಡೆ ಹೆಚ್ಚು ಗಮನ ಹರಿಸುವಂತೆ ಮಾಡುವ ಪ್ರಯತ್ನ ಮಾಡಿರುವುದಾಗಿ ಹೇಳಿದ ಸಚಿನ್ ಶಿರವಾಳ, ವಿದ್ಯಾರ್ಥಿಗಳು ತಮಗೆ ದೊರಕಿರುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಬೇಕಾಗುವ ಓದಿನ ತಯಾರಿ ಮಾಡಿಕೊಳ್ಳಬೇಕು. ಆ ಮೂಲಕ ನಮ್ಮ ಭಾಗದ ಶೈಕ್ಷಣಿಕ ಅಭಿವೃದ್ದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಓಪನ್ ಏರ್ ಲೈಬ್ರರಿ ಸ್ಥಾಪನೆ ಮಾಡಿದ್ದರಿಂದ ಬಿಸಿಲಿನಲ್ಲಿ ನಿಲ್ಲುತ್ತಿದ್ದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ ಹಾಗೂ ಸ್ಥಳದಲ್ಲಿಯೇ ಪುಸ್ತಕ ಓದಲು ಸಿಮೆಂಟ್ ಕುರ್ಚಿಗಳನ್ನು ಹಾಕಿ ಸಸಿಗಳನ್ನು ನೆಡುವ ಮೂಲಕ ಒಳ್ಳೆ ಪರಿಸರವನ್ನು ನಿರ್ಮಿಸಿ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಲೈಬ್ರರಿಗೆ ಭೇಟಿ ನೀಡಿದ ವಿದ್ಯಾರ್ಥಿನಿಯೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊAಡರು

ಲೈಬ್ರರಿಯನ್ನು ಉದ್ಘಾಟಿಸಿದ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್, ಯುವ ಮುಖಂಡ ಸಚಿನ ಶಿರವಾಳ ಅವರ ಪ್ರಯತ್ನವನ್ನು ಶ್ಲಾಘಿಸಿದರು. 

ಯುವಕರಿಗೆ ಓದಿನ ಹಸಿವು ನೀಗಿಸುವ ಲೈಬರಿಗಳು ಇನ್ನು ಹೆಚ್ಚು ಹೆಚ್ಚು ಸ್ಥಾಪನೆಯಾಗಬೇಕು. ಇಂತಹ ನೂತನ ಜನಪರ ಪ್ರಯತ್ನಗಳಿಗೆ ತಾವು ಸದಾ ಬೆಂಬಲವಾಗಿರುವುದಾಗಿ ಅವರು ಅಭಯ ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಕುಡಾ ಅಧ್ಯಕ್ಷ ಮಹಜರ್ ಅಲಂಖಾನ್, ಸಚಿನ್ ಶಿರವಾಳ, ಅಜೀಮುದ್ದೀನ್, ಇರ್ಫಾನ್ ಪರ್ವಿನ್, ಗೌಸ್ ಮತ್ತಿಮುಡ, ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಹರವಾಳ , ಕಿರಣ್ ದೇಶಮುಖ, ಫಾರುಖ್ ಸೇಠ್, ರಾಜೀವ್ ಜಾನೆ, ಶ್ರೀನಿವಾಸ್ ಲಾಖೆ, ರಾಜೇಶ ಗುತ್ತೇದಾರ್, ಅಮರ್ ಶಿರವಾಳ ಸೇರಿದಂತೆ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.