ಕನ್ನಡದ ನೆಲ-ಜಲ-ಗಾಳಿಯ ರಕ್ಷಣೆ ಬದ್ಧರಾಗಿರಬೇಕು : ಡಾ.ವಿಶ್ವನಾಥ
ಕನ್ನಡದ ನೆಲ-ಜಲ-ಗಾಳಿಯ ರಕ್ಷಣೆ ಬದ್ಧರಾಗಿರಬೇಕು : ಡಾ.ವಿಶ್ವನಾಥ
ಕಮಲನಗರದ ತಹಸಿಲ್ ಕಚೇರಿ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನ ಸಾಧಕರಿಗೆ ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಹಸೀಲ್ದಾರ್ ಅಮಿತಕುಮಾರ್ ಕುಲಕರ್ಣಿ, ಗ್ರೇಡ್-2 ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಮಾಣಿಕರಾವ ಪಾಟೀಲ್, ಕಸಾಪ ಅಧ್ಯಕ್ಷ ಪ್ರಶಾಂತ ಮಠಪತಿ, ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ತಾಪಂ ಎಡಿ ಹಣಮಂತರಾಯ ಕೌಟಗೆ ಇತರರಿದ್ದರು.
ಪ್ರಾಚಾರ್ಯ ಡಾ.ವಿಶ್ವನಾಥ ಕಿವಡೆ ಸಲಹೆ | 10 ಜನರಿಗೆ ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ಪ್ರದಾನ
ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ
ಕಮಲನಗರ :
ಕನ್ನಡ, ಕನ್ನಡತನ ಮತ್ತು ಕನ್ನಡದ ನೆಲ-ಜಲ-ಗಾಳಿಯ ರಕ್ಷಣೆ ಮತ್ತು ಏಳಿಗೆಗಾಗಿ ಕನ್ನಡಿಗರು ಬಲಿದಾನಕ್ಕೂ ಸಿದ್ಧರಾಗಬೇಕು. ನಡೆ-ನುಡಿಯಲ್ಲಿ ಕನ್ನಡ ಭೋರ್ಗರೆಯಬೇಕು. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್‍ಗೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು ಎಂದು ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿಶ್ವನಾಥ ಕಿವಡೆ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನ್ನಡ ಕುರಿತು ಪ್ರೀತಿ ಮತ್ತು ಅಭಿಮಾನ ಮೂಡಿಸಿಕೊಳ್ಳದಿದ್ದರೆ, ಕನ್ನಡ ಉಳಿಸುವುದು ಕಷ್ಟ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿ ಹೊಂದಿದವರು ಕನ್ನಡದಲ್ಲೇ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪರಭಾಷೆಗಳು ಎಷ್ಟೇ ನಮ್ಮ ಮೇಲೆ ಪ್ರಭಾವ ಬೀರಿದರೂ ನಾವು ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಕನ್ನಡ ಅನಿವಾರ್ಯ ಎಂಬ ಭಾವನೆಯಲ್ಲಿ ಭಾಷೆಯನ್ನು ಬೆಳೆಸಿದಾಗ ಖಂಡಿತ ಕನ್ನಡ ಉಳಿಯುತ್ತದೆ ಎಂದರು.
ತಹಸೀಲ್ದಾರ ಅಮಿತಕುಮಾರ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಇಒ ಮಾಣಿಕರಾವ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ರಮೇಶ ಪೆದ್ದೆ, ಸಿಪಿಐ ಅಮರೆಪ್ಪ ಶಿವಬಲ್, ಪಿಎಸ್‍ಐ ಚಂದ್ರಶೇಖರ ನಿರ್ಣೆ, ಪಿಡಿಒ ರಾಜಕುಮಾರ ತಂಬಾಕೆ, ಪ್ರೊ.ಎಸ್.ಎನ್.ಶಿವಣಕರ, ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಯಶವಂತ ಬಿರಾದಾರ, ಬಸವರಾಜ ಪಾಟೀಲ್ ರಂಡ್ಯಾಳ್, ಇದ್ದರು.
ಹಣಮಂತರಾಯ ಕೌಟಗೆ ಸ್ವಾಗತಿಸಿದರು. ಬಿಆರ್‍ಪಿ ಶಶಿಕುಮಾರ ಬಿಡವೆ ನಿರೂಪಣೆ ಮಾಡಿದರು.
10 ಜನರಿಗೆ ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ಪ್ರದಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನ ಸಾಧಕರಿಗೆ ಇದೇ ಸಂದರ್ಭದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಹುಟ್ಟೂರಾದ ಕಮಲನಗರದಲ್ಲಿ ಅವರ ಹೆಸರಿನಲ್ಲಿ ಚನ್ನಬಸವ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಸವರಾಜ ಪಾಟೀಲ್, ಚಂದ್ರಕಾಂತ ಬಿರಾದಾರ, ಡಾ.ಅಶೋಕಕುಮಾರ ಮಳಗೆ, ಪ್ರೊ.ಜಗನ್ನಾಥ ಚಿಮ್ಮಾ, ಭಾವುರಾವ ಹೇಡೆ, ಸತೀಶ ಜೀರ್ಗೆ, ದಿಲೀಪ ಮುಧಾಳೆ, ಭೀಮಾಶಂಕರ ಜೀರ್ಗೆ, ಸಂಗೀತಾ ಧಬಾಲೆ, ತೋಶ್ನಿ ಘಾಟೆ