ಪುನೀತ್ ಕೆರೆಹಳ್ಳಿ ಅವರನ್ನು ವಿನಾಕಾರಣ ಬಂಧಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ

ಪುನೀತ್ ಕೆರೆಹಳ್ಳಿ ಅವರನ್ನು ವಿನಾಕಾರಣ ಬಂಧಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ

ಪುನೀತ್ ಕೆರೆಹಳ್ಳಿ ಅವರನ್ನು ವಿನಾಕಾರಣ ಬಂಧಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ

ಕಲಬುರಗಿ: ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಅವರನ್ನು ವಿನಾಕಾರಣ ಬಂಧಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಷ್ಟ್ರ ರಕ್ಷಣಾ ಪಡೆ" ಕಲ್ಬುರ್ಗಿ ಜಿಲ್ಲಾ ಘಟಕ ವತಿಯಿಂದ ನಗರದ ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರ ನೀಡಲಾಯಿತು. ಪುನೀತ್ ಕೆರೆಹಳ್ಳಿ ಅವರ ಮೇಲೆ ಒಂದು ಕೇಸ್ ಅಲ್ಲ ಇಂಥ ನೂರು ಕೇಸ್ ಹಾಕುದ್ರು ಕೂಡ ಅಂಜುವುದಿಲ್ಲ ಎಂದು ಜಿಲ್ಲಾಧ್ಯಕ್ಷ ಮಡಿವಾಳಪ್ಪ ಎಚ್ಚರಿಕೆ ನೀಡಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ, ಮಡಿವಾಳಪ್ಪ ಅಮರಾವತಿ, ಜಿಲ್ಲಾ ಗೌರವಾಧ್ಯಕ್ಷರಾದ ರಮೇಶ್ ಬೀದರ್ಕರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಾರಾಯಣ ಜಾಗಿರ್ದಾರ್, ಜಿಲ್ಲಾ ಕಾರ್ಯದರ್ಶಿಯಾದ ವಿಟ್ಟಲ್ ಕುಲಕರ್ಣಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಬಿರಾದಾರ್, ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾ ಮುಖಂಡರಾದ ನಿಂಗರಾಜ್ ಡಾಂಗೆ ಹಿಂದೂ ಹೋರಾಟಗಾರರಾದ ರಾಕೇಶ್ ಜಮಾದಾರ್, ಈಶ್ವರ್ ಹಿಪ್ಪರಗಿ, ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರಾದ ಗಜಾನನ್ ರಾಮಂದಿರ, ದೀಪಕ್ ರಾಥೋಡ್, ನಿಂಗರಾಜ್ ಹೊನಕಿರಣಗಿ, ಶಿವಾಜಿ ಜೇವರ್ಗಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.