‘ಬಂಜಾರರು ಭಾರತೀಯ ಸಾಂಸ್ಕೃತಿಕ ರಾಯಭಾರಿಗಳು’ ಪೂಜ್ಯ ಜೇಮಸಿಂಗ್ ಮಹಾರಾಜ ಅಭಿಮತ

‘ಬಂಜಾರರು ಭಾರತೀಯ ಸಾಂಸ್ಕೃತಿಕ ರಾಯಭಾರಿಗಳು’ ಪೂಜ್ಯ ಜೇಮಸಿಂಗ್ ಮಹಾರಾಜ ಅಭಿಮತ

ಪೂಜ್ಯ ಜೇಮಸಿಂಗ್ ಮಹಾರಾಜ ಅಭಿಮತ |

 ಮುಗಳನಾಗಾಂವ ಮಹಾನಗರ ತಾಂಡಾದಲ್ಲಿ ಬಂಜಾರಾ ದೀಪಾವಳಿ ಸಂಭ್ರಮ ಕಾರ್ಯಕ್ರಮ |

ಹಾಡಿ, ಕುಣಿದು, ಪೂರ್ಣ ಕಳಸ ಹೊತ್ತು ಸಂಭ್ರಮಿಸಿದ ಬಾಲಕಿಯರು, ಮಹಿಳೆಯರು | ಬಂಜಾರಾ ಕಲಾವಿದರಿಗೆ ಸತ್ಕಾರ

ಬಂಜಾರರು ಭಾರತೀಯ ಸಾಂಸ್ಕೃತಿಕ ರಾಯಭಾರಿಗಳು’ 

ಕಲಬುರಗಿ: ಆಧುನಿಕತೆ ಭರಾಟೆಯಲ್ಲಿಯೂ ಕೂಡಾ ಬಂಜಾರ ಸಮುದಾಯದವರು ತಮ್ಮದೇ ಆದ ತಮ್ಮದೇ ಆದ ವೇಷ-ಭೂಷಣ, ಕಲೆ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ಇಂದಿಗೂ ಕೂಡಾ ಸಂರಕ್ಷಿಸಿಕೊಂಡು ಬಂದವರು. ಯಾವುದೇ ಹಬ್ಬ, ಉತ್ಸವ, ಆಚರಣೆಗಳನ್ನು ಅತ್ಯಂತ ಭಕ್ತಿ, ಶೃದ್ಧೆಯಿಂದ ಮಾಡುವ ಮೂಲಕ ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುವ ಮೂಲಕ ಬಂಜಾರರು ಭಾರತೀಯ ಸಾಂಸ್ಕೃತಿಕ ರಾಯಭಾರಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಗಳನಾಗಾಂವನ ಶ್ರೀ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದ ಪೂಜ್ಯ ಜೇಮಸಿಂಗ್ ಮಹಾರಾಜ ಅಭಿಮತಪಟ್ಟರು. 

         ನಗರದ ಸಮೀಪದ ಮುಗಳನಾಗಾಂವ ಮಹಾನಗರ ತಾಂಡಾದಲ್ಲಿ ದೀಪಾವಳಿ ಪಾಡ್ಯಮಿಯಾದ ಶನಿವಾರ ಜರುಗಿದ ‘ಬಂಜಾರಾ ದೀಪಾವಳಿ ಸಂಭ್ರಮ’ದಲ್ಲಿ ಬಾಲಕಿಯರು, ಮಹಿಳೆಯರಿಂದ ಜರುಗಿದ ಗಾಯನ, ನೃತ್ಯ, ಪೂರ್ಣ ಕಳಸದ ಮೆರವಣಿಗೆ ಹಾಗೂ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಬಂಜಾರಾ ನಾಯಕರು, ಕಲಾವಿದರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆರ್ಶೀವಚನ ನೀಡಿದರು. 

        ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪಿಡಿಎ ಇಂಜಿನಿಯರಿAಗ ಕಾಲೇಜಿನ ಪ್ರಾಧ್ಯಾಪಕ ಹಾಗೂ ಬಳಗದ ಸದಸ್ಯ ಡಾ.ಬಾಬುರಾವ ಶೇರಿಕಾರ ಮಾತಡುತ್ತಾ, ಬಂಜಾರ ಕಲೆ, ಸಂಸ್ಕೃತಿ, ಪರಂಪರೆ ಅಪರೂಪವಾಗಿದೆ. ಆಧುನಿಕತೆಯ ಪರಿಣಾಮವಾಗಿ ಇದು ಸಮುದಾಯದ ಹಿರಿಯರಿಂದ ಮುಂದಿನ ತಲೆಮಾರಿನವರಿಗೆ ವರ್ಗಾವಣೆಯಾಗಲು ತೊಂದರೆಯಾಗುತ್ತಿದೆ. ಇದನ್ನು ಮನಗಂಡ ನಮ್ಮ ಬಳಗ ಪ್ರತಿವರ್ಷ ದೀಪಾವಳಿ ಸೇರಿದಂತೆ ಬಂಜಾರ ಸಮುದಾಯದ ವಿವಿಧ ಹಬ್ಬ, ಉತ್ಸವಗಳಲ್ಲಿ ಬೇರೆ-ಬೇರೆ ತಾಂಡಾಗಳಿಗೆ ತೆರಳಿ ಬಂಜಾರ ಸಮುದಾಯದ ಸಂಸ್ಕೃತಿ, ಪರಂಪರೆ ಬಗ್ಗೆ ಎಲ್ಲೆಡೆ ಜನ ಜಾಗೃತಿ ಕಾರ್ಯ ಮಾಡಲಾಗುತ್ತಿದೆ ಎಂದರು. 

        ಜಿಲ್ಲಾ ಬಂಜಾರಾ ಸರ್ಕಾರಿ, ಅರೆ-ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಪ್ರಭು ಜಾಧವ, ಬಂಜಾರ ಚಿಂತಕ ರವಿ ನಾಯಕ ಮಾತನಾಡಿ, ಲಂಬಾಣಿ ಸಮುದಾಯದ ಜನರು ದೀಪಾವಳಿಯನ್ನು ‘ದವಾಳಿ’ ಎಂದು ಮೂರು ದಿವಸಗಳ ಕಾಲ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ದೇವರಿಗೆ ಹರಕೆ ತೀರಿಸುವ ‘ಕಾಳಿಮಾಸ್’, ಲಕ್ಷ್ಮಿ ಪೂಜೆ, ಹಿರಿಯರಿಗೆ ಗೌರವ ಸಲ್ಲಿಸಲಾಗುತ್ತದೆ. ಹೆಣ್ಣುಮಕ್ಕಳು ದೀಪ ಹಚ್ಚಿಕೊಂಡು ಪ್ರತಿ ಮನೆಗೆ ತೆರಳಿ ಬೆಳಗುವ ‘ಮೇರಾ’, ಹೊಲಕ್ಕೆ ಹೋಗಿ ಬಗೆ-ಬಗೆಯ ಹೂಗಳನ್ನು ತಂದು ಸಗಣಿಯ ಮೇಲ್ಬಾಗದಲ್ಲಿ ಇಡಲಾಗುತ್ತದೆ. ಆಗಮಿಸಿದ ಅತಿಥಿಗಳಿಗೆ ಸತ್ಕರಿಸುವುದು, ಲಂಬಾಣಿ ಗೀತಗಾಯನ, ನೃತ್ಯ ಮಾಡುವುದು, ಕಳಸದ ಮೆರವಣಿಗೆ ಮಾಡಲಾಗುತ್ತದೆ ಎಂದು ಮೂರು ದಿನಗಳ ಕಾಲ ಆಚರಿಸುವ ವಿವಿಧ ಪದ್ಧತಿಗಳ ಬಗ್ಗೆ ವಿವರಿಸಿದರು.

   ಕಾರ್ಯಕ್ರಮದಲ್ಲಿ ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಸ್ಲಾಂ ಶೇಖ್, ತಾಪಂ ಮಾಜಿ ಸದಸ್ಯ ನಾಮದೇವ ರಾಠೋಡ, ಗ್ರಾಪಂ ಮಾಜಿ ಅಧ್ಯಕ್ಷ ಹೀರಾಸಿಂಗ ರಾಠೋಡ್, ತಾಂಡಾದ ನಾಯಕರಾದ ಗಣಪತಿ ನಾಯಕ, ಗಣಪತಿ ರಾಠೋಡ, ತಾಂಡಾದ ನಾಯಕಣಿಗಳಾದ ರಮಕಾಬಾಯಿ, ಶೀಲಾಬಾಯಿ, ಪ್ರಮುಖರಾದ ಸಂತೋಷ ಮಹಾರಾಜ, ಅಂಬು ನಾಯಕ, ಠಾಕೂರಸಿಂಗ್ ರಾಠೋಡ್, ರವಿ ಕಾರಬಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.