ಕಲಬುರಗಿಯ ರಾಮಕೃಷ್ಣ ಬಡಶೇಷಿ, ಡಾ ಹನುಮಂತರಾವ್ ದೊಡ್ಡಮನಿ ಅರುಣ್ ಯೋಗಿರಾಜ್, ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಕಲಬುರಗಿಯ ರಾಮಕೃಷ್ಣ ಬಡಶೇಷಿ, ಡಾ ಹನುಮಂತರಾವ್ ದೊಡ್ಡಮನಿ ಅರುಣ್ ಯೋಗಿರಾಜ್, ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಸಕ್ತ 2024 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
ಈ ಬಾರಿ ವಿವಿಧ ಕ್ಷೇತ್ರಗಳ 69 ಸಾಧಕರನ್ನು ಪ್ರಶಸ್ತಿಗೆ ಗುರುತಿಸಿ ಆಯ್ಕೆ ಮಾಡಲಾಗಿದೆ.
ವಿಕಾಸಸೌಧದಲ್ಲಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಧಕರ ಹೆಸರುಗಳ ಯಾದಿಯನ್ನು ಬಿಡುಗಡೆ ಗೊಳಿಸಿದರು.
ಈ ಬಾರಿ ಪ್ರಶಸ್ತಿಗಾಗಿ ಒಟ್ಟು 1575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧು ಮೂಲಕ 1,309 ಜನರಿಗಾಗಿ 7,438 ನಾಮನಿರ್ದೇಶನಗಳು ಸಹ ಸಲ್ಲಿಕೆಯಾಗಿದ್ದವು.
ಇವುಗಳನ್ನೆಲ್ಲಾ ಕೂಲಂಕಷವಾಗಿ ಪರಿಶೀಲನೆ ಮಾಡಿ ಅರ್ಹರನ್ನು ಆಯ್ಕೆ ಮಾಡಲಾಗಿದೆ.
ಈ ಬಾರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿಧ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಯ್ದುಕೊಳ್ಳಲಾಗಿದೆ.
ಈ ವರ್ಷ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡು 50 ವರ್ಷ ಸಂದಿದ ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ವರ್ಷ ಆಚರಿಸುತ್ತಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ 50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡಲಾಗುತ್ತಿದೆ. ಇದರಿಂದ 69 ಮತ್ತು 100 ಸಾಧಕರು ಸೇರಿದಂತೆ ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಅರ್ಜಿಯನ್ನು ಹಾಕಿದೆ ಎಲೆಮರೆಯ ಕಾಯಿಯಂತೆ, ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಸಾಧಕರನ್ನು ಸಹ ಗುರುತಿಸಿ, ಈ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ.
ಬಯಲಾಟ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿಜಯನಗರ ಜಿಲ್ಲೆಯ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ ಸೇರಿದಂತೆ ಜಾನಪದ ಕ್ಷೇತ್ರದಲ್ಲಿ ಅಂಧ ಕಲಾವಿದರಾದ ಬೀದರ್ ಜಿಲ್ಲೆಯ ನರಸಿಂಹಲು, ಕಲಬುರಗಿಯ ಮಾಧ್ಯಮ ಕ್ಷೇತ್ರದ ರಾಮಕೃಷ್ಣ ಬಡಶೇಷಿ ಹಾಗೂ ಸಾಹಿತ್ಯ ಕ್ಷೇತ್ರದ ಡಾ ಹನುಮಂತರಾವ್ ದೊಡ್ಡಮನಿ ಅವರನ್ನು ಸಹ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಇದರಲ್ಲಿ ಜನ 13 ಮಹಿಳೆಯರು ಸೇರಿದ್ದಾರೆ.
ಈ ಬಾರಿ ಸರ್ಕಾರ ವಿಶೇಷ ಆಸ್ಥೆ ವಹಿಸಿ ಅರ್ಜಿ ಹಾಕಿದೆ ಇರುವ ವನದ ಸುಮದಂತೆ ಕಾರ್ಯ ನಿರ್ವಹಿಸಿ ಸಾಧನೆಗೈದ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದರಿಂದ ಇನ್ನೂ ಹೆಚ್ಚಿನ ಸಾಧಕರಿಗೆ ಇದು ಪ್ರೇರಣೆಯಾಗಲಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ೬೯ ಜನರ ಪಿಡಿಎಫ್ ಫೈಲ್ ಇದೆ . ಡೌನ್ಲೋಡ್ ಮಾಡಿಕೊಳ್ಳಿ.