ಪ್ರತ್ಯೇಕ ಕಲ್ಯಾಣ ಕರ್ನಾಟಕ ಹೋರಾಟ ತೀವ್ರ – ಹೋರಾಟಗಾರರನ್ನು ಬಂಧಿಸಿದ , ಪೊಲೀಸರು

ಪ್ರತ್ಯೇಕ ಕಲ್ಯಾಣ ಕರ್ನಾಟಕ ಹೋರಾಟ ತೀವ್ರ –  ಹೋರಾಟಗಾರರನ್ನು ಬಂಧಿಸಿದ , ಪೊಲೀಸರು
ಪ್ರತ್ಯೇಕ ಕಲ್ಯಾಣ ಕರ್ನಾಟಕ ಹೋರಾಟ ತೀವ್ರ –  ಹೋರಾಟಗಾರರನ್ನು ಬಂಧಿಸಿದ , ಪೊಲೀಸರು

ಪ್ರತ್ಯೇಕ ಕಲ್ಯಾಣ ಕರ್ನಾಟಕ ಹೋರಾಟ ತೀವ್ರ – ಹೋರಾಟಗಾರರನ್ನು ಬಂಧಿಸಿದ ಪೊಲೀಸರು

“ಉದಯವಾಗಲಿ ಕಲ್ಯಾಣ ರಾಜ್ಯ” – ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯದ ಆಗುವವರೆಗೂ ಹೋರಾಟ ಮುಂದುವರೆಯಲಿದೆ: ಎಂ.ಎಸ್. ಪಾಟೀಲ ನರಿಬೋಳ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜನತೆ ಬಹುಕಾಲದಿಂದ ಬಯಸುತ್ತಿರುವ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯದ ಸ್ಥಾಪನೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಘೋಷಿಸಿದ್ದಾರೆ.

ನಗರದ ಅಂಬೇಡ್ಕರ್ ಪ್ರತಿಮೆ ಎದುರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸತ್ಯಾಗ್ರಹ ಆರಂಭಿಸಲಾಯಿತು. 

ಇಂದು ಬೆಳಿಗ್ಗೆ ಜಗತ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ “ಉದಯವಾಗಲಿ ಕಲ್ಯಾಣ ರಾಜ್ಯ” ಎಂಬ ಘೋಷಣೆಗಳೊಂದಿಗೆ ಸಾಹಿತ್ಯ, ಸಂಗೀತ ಮತ್ತು ಸಾಮಾಜಿಕ ಕ್ಷೇತ್ರದ ನೂರಾರು ಹೋರಾಟಗಾರರು ಭಾಗವಹಿಸಿದರು.

 “ಕಲ್ಯಾಣ ಕರ್ನಾಟಕದ ಅಸ್ಮಿತೆ ಉಳಿಸಬೇಕಾದ ಹೋರಾಟ ಇದು. ಕಲಬುರಗಿ, ಯಾದಗಿರ, ಬೀದರ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ಜನತೆಗೆ ಅಭಿವೃದ್ಧಿ ಕನಸಾಗಿಯೇ ಉಳಿದಿದೆ. 371ನೇ ವಿಧಿ ಯಡಿ ಸಿಗಬೇಕಾದ ಸೌಲಭ್ಯಗಳು ತಲುಪಿಲ್ಲ. ಪ್ರತ್ಯೇಕ ರಾಜ್ಯವೇ ಈಗ ಏಕೈಕ ಪರಿಹಾರ.” ಎಂದು ಪಾಟೀಲ ಹೇಳಿದರು.

  “ಈ ಭಾಗದಲ್ಲಿ ದೊಡ್ಡ ಕೈಗಾರಿಕೆಗಳ ಕೊರತೆ, ಉದ್ಯೋಗಾವಕಾಶಗಳ ಅಭಾವ ಹಾಗೂ ಅಭಿವೃದ್ಧಿ ಯೋಜನೆಗಳ ಸ್ಥಗಿತದಿಂದ ಯುವಜನತೆ ನಿರಾಶೆಯಲ್ಲಿದ್ದಾರೆ. ಕಲಬುರಗಿ ರಾಜ್ಯೋತ್ಸ ಬೆಳಗಾವಿ ಮುಡಿಗೆ,  ಸರ್ಕಾರದ ನಿಷ್ಕ್ರಿಯ ನಿಲುವು ಜನರ ಅಸಮಾಧಾನಕ್ಕೆ ಕಾರಣವಾಗಿದೆ,” ಎಂದರು. ನ್ಯಾಯವಾದಿ ವಿನೋದಕುಮಾರ ಜನೇವರಿ ಹೇಳಿದರು.

ಎಸ್‌.ವಿ.ಪಿ. ಚೌಕ್‌ ಗೆ ಧ್ವಜಾರೋಹಣ ಮಾಡಲು ಮುಂದಾದಾಗಎಂ ಎಸ್ ಪಾಟೀಲ್ ನರಿಬೋಳ,ಮಾಲಾ ಕಣ್ಣಿ, ವಕೀಲ ಸಂಜುಕುಮಾರ ಡೊಂಗರಗಾಂವ,ಹಾಗೂ ಹೋರಾಟಗಾರ ,ವಿನೋದಕುಮಾರ ಜನೇವರಿ, ಸೇರಿದಂತೆ ಅನೇಕ ಪ್ರತಿಭಟನಕಾರರನ್ನು   ಪೊಲೀಸರು ಬಂಧಿಸಿತು. 

 ಬಂದಿತ ಸಮಯದಲ್ಲಿ ಹೋರಾಟಗಾರರು “ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯದ ಘೋಷಣೆ ಆಗುವವರೆಗೂ ಹೋರಾಟ ನಿಲ್ಲದು”ಎಂದು ಹೇಳಿದರು 

ಪಾಟೀಲ ನರಿಬೋಳ ಅವರ ನೇತೃತ್ವದಲ್ಲಿ ನಡೆದ ಪೂರ್ಣ ದಿನದ ಧರಣಿ ಹೋರಾಟ ಯಶಸ್ವಿಯಾಗಿ ನಡೆಯಿತು. ಈ ಹೋರಾಟದ ಮೂಲಕ ರಾಜ್ಯ ಸರ್ಕಾರದ ನಿಷ್ಕ್ರಿಯ ನಿಲುವಿನ ವಿರುದ್ಧ ಜನಮನದ ಕಿಡಿ ಹೊತ್ತಿ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಪ್ರಸ್ತಾವನೆಯನ್ನು ತಕ್ಷಣ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಆಗ್ರಹಿಸಲಾಯಿತು.

 “ಈ ಸರ್ಕಾರ ಮಾತಿನಲ್ಲಿ ಬಸವೇಶ್ವರ ಅನುಯಾಯಿ ಎಂದು ಹೇಳಿಕೊಳ್ಳುತ್ತದಾದರೂ ಸಮಾನತೆ ಮತ್ತು ನ್ಯಾಯತತ್ವಗಳಲ್ಲಿ ಹಿಂದೆ ಬಿದ್ದಿದೆ.”

-ಮಾಲಾ ಕಣ್ಣಿ

“ಉದಯವಾಗಲಿ ಕಲ್ಯಾಣ ಕರ್ನಾಟಕ— ಇದು ಕೇವಲ ಘೋಷಣೆ ಅಲ್ಲ, ಜನಮನದ ಆಶಯ.”

-ಎಂ ಎಸ್ ಪಾಟೀಲ್ ನರಿಬೋಳ