ಸರ್ಕಾರದ ಆದೇಶ ಹಿಂಪಡೆ: ನೌಕರ ಸಂಘದ ಹೋರಾಟ ಮಹತ್ವದ ಜಯವಾಗಿದೆ : ರಮೇಶ್ ಸಂಗಾ
ಸಚಿವಾಲಯ ನೌಕರ ಸಂಘದ ಹೋರಾಟ ಫಲವತ್ತೆ: ಕಂದಾಯ ಇಲಾಖೆಯ ಕಾರ್ಯಭಾರ ಮತ್ತೆ ಸಚಿವಾಲಯಕ್ಕೆ
ಬೆಂಗಳೂರು, ಜುಲೈ 31:ಸಚಿವಾಲಯದ ಕಂದಾಯ ಇಲಾಖೆಯಿಂದ ಆಯುಕ್ತಾಲಯಕ್ಕೆ ವರ್ಗಾಯಿಸಲಾದ ಕಾರ್ಯಭಾರವನ್ನು ಪುನಃ ಸಚಿವಾಲಯದಲ್ಲಿಯೇ ಸ್ಥಾಪಿಸಲು ಸರ್ಕಾರ ಒಪ್ಪಿಗೆ ನೀಡಿರುವುದು, ಸಚಿವಾಲಯ ನೌಕರ ಸಂಘದ ಹೋರಾಟದ ಮಹತ್ವದ ಜಯವಾಗಿದೆ.
ಸಂಘವು ಈ ನಿರ್ಧಾರವನ್ನು ವಿರೋಧಿಸಿ ನಿರಂತರ ಹೋರಾಟ ನಡೆಸಿದ ಪರಿಣಾಮವಾಗಿ, ಈ ಹಿಂದೆ ಹೊರಡಿಸಲಾಗಿದ್ದ ಆಡಳಿತಾತ್ಮಕ ಆದೇಶವನ್ನು ಸರ್ಕಾರ ಹಿಂಪಡೆದಿದೆ ಎಂದು ಸಂಘದ ಪ್ರಮುಖರಾದ ರಮೇಶ್ ಸಂಗಾ ತಿಳಿಸಿದ್ದಾರೆ.
“ಇದು ಸಂಘಟನೆಗೆ ಸಿಕ್ಕಿರುವ ದೊಡ್ಡ ಜಯ. ಈ ಹೋರಾಟದಲ್ಲಿ ನಿಸ್ವಾರ್ಥವಾಗಿ ಭಾಗವಹಿಸಿದ್ದ ಎಲ್ಲ ಮಾನ್ಯ ಸದಸ್ಯರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು,” ಎಂದು ಅವರು ಹೇಳಿದರು.
ಈ ನಿರ್ಧಾರದಿಂದ ನೌಕರರಲ್ಲಿ ಹೊಸ ಉತ್ಸಾಹ ಮೂಡಿದಂತಾಗಿದೆ. ಸಚಿವಾಲಯದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಹಿತದೃಷ್ಟಿಯಿಂದ ಸರ್ಕಾರದ ಈ ಕ್ರಮವನ್ನು ಅಭಿನಂದಿಸಲಾಗಿದೆ.