ಶಿಕ್ಷಣದಿಂದ ಮಕ್ಕಳು ವಂಚಿತವಾಗಬಾರದು : ಡಾ ದಾಕ್ಷಾಯಣಿ ಎಸ್ ಅಪ್ಪಾ
ಶಿಕ್ಷಣದಿಂದ ಮಕ್ಕಳು ವಂಚಿತವಾಗಬಾರದು : ಡಾ ದಾಕ್ಷಾಯಣಿ ಎಸ್ ಅಪ್ಪಾ
ಕಲಬುರಗಿ : ಶಿಕ್ಷಣ ಹಾಗೂ ಸಮಾಜದದಿಂದ ವಂಚಿತರಾದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶ ಸದುದ್ದೇಶದಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತಿರುವ ಸೇವಾ ಭಾರತಿ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಹಾಗೂ ಸೇವಾ ಭಾರತಿ ರಜತ್ ಮಹೋತ್ಸವದ ಸಮಾರೋಪ ಸಮಿತಿ ಅಧ್ಯಕ್ಷರಾದ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪ ಅವರು ಹೇಳಿದರು.
ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ 29 ಸೆಪ್ಟೆಂಬರ್ 24 ರಂದು ಹಮ್ಮಿಕೊಂಡಿದ್ದ ಸೇವಾ ಭಾರತಿ ರಜತ್ ಮಹೋತ್ಸವ ಕಾರ್ಯಕ್ರಮ ಜರುಗಿತು.
ದಯವೇ ಧರ್ಮದ ಮೂಲವಯ್ಯ ದಯವಿರಬೇಕು ಸಕಲ ಜೀವಾತ್ಮರಿಗೆ ಎಂದು ವಿಶ್ವಗುರು ಬಸವಣ್ಣನವರು ಹೇಳಿದ್ದಾರೆ. ಅದೇ ನಿಟ್ಟಿನಲ್ಲಿ ಸೇವಾ ಭಾರತಿ ಟ್ರಸ್ಟ್ ಹಿಂದುಳಿದ, ನಿರ್ಗತಿ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುತ್ತಿದ್ದಾರೆ ಎಂದು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಮುಗುಳುನಾಗಾಂವ ಕಟ್ಟಿಮನಿ ಹಿರೇಮಠದ ಪೀಠಾಧಿಪತಿಗಳಾದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ನುಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಸೇವಾ ಭಾರತಿ ರಜತ ಮಹೋತ್ಸವ ಸಮಾರೋಪ ಸಮಿತಿ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಮಾತನಾಡಿದರು.
ಕಲಬುರಗಿ ನಗರದ ಕೊಳಚೆ ಪ್ರದೇಶದ ಮಕ್ಕಳಿಗೆ ಸುಮಾರು 25 ಕಡೆಗಳಲ್ಲಿ ಉಚಿತ ಮನೆ ಪಾಠ ಮತ್ತು ಸಂಸ್ಕಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರ ಸದುಉಪಯೋಗ ಪಡೆದ ಮಕ್ಕಳು ಇಂಜಿನಿಯರಿಂಗ್ ಮತ್ತು ಎಂ ಬಿ ಬಿ ಎಸ್ ಹಾಗೂ ಇತರೆ ವೃತ್ತಿಪರ ಕೋರ್ಸ್ ನ ಸೀಟುಗಳನ್ನು ಪಡೆದು ಓದುತ್ತಿದ್ದಾರೆ ಎಂದು ಹುಬ್ಬಳ್ಳಿ ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ರಘು ಅಕಮಂಚಿ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ಅನಿಲಕುಮಾರ ಬಿಡವೆ,ಸೇವಾ ಭಾರತಿ ಟ್ರಸ್ಟ್ ಹುಬ್ಬಳ್ಳಿ ಅಧ್ಯಕ್ಷ, ಪೂರ್ಣಚಂದ್ರರಾವ್ ಘಂಟಸಾಲ, ಅಭಿಲಾಷ ಹೇಮನೂರ, ಉಮೇಶ ತಳವಾರ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಟ್ರಸ್ಟ್ ಅಧ್ಯಕ್ಷ ರಮೇಶ ತಿಪನೂರ ಮಾತನಾಡಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಶಿವರಾಜ ಬೀರಬಿಟ್ಟೆ ಪ್ರಾರ್ಥಿಸಿದರು. ನಾಗರಾಜ ಸ್ವಾಗತಿಸಿದರು. ಗುರುರಾಜ ದೇಶಪಾಂಡೆ ನಿರೂಪಿಸಿದರು.